Khagras Chandragrahana 2025- ನಾಳೆ ಖಗ್ರಾಸ ಚಂದ್ರಗ್ರಹಣ | ಯಾರಿಗೆ ಶುಭ? ಯಾರಿಗೆ ಅಶುಭ? ಸಂಪೂರ್ಣ ಮಾಹಿತಿ ಇಲ್ಲಿದೆ…

ನಾಳೆ ಖಗ್ರಾಸ ಚಂದ್ರಗ್ರಹಣ (Khagras Chandragrahana 2025) ಸಂಭವಿಸಲಿದೆ. ಗ್ರಹಣ ಪ್ರಾರಂಭ ಮತ್ತು ಮೋಕ್ಷ ಕಾಲ ಸೇರಿದಂತೆ ಚಂದ್ರಗ್ರಹಣ ಕುರಿತ ಫಲಾಫಲಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
ಏಳು ವರ್ಷಗಳ ನಂತರ ಖಗ್ರಾಸ ಚಂದ್ರಗ್ರಹಣ (Total Lunar Eclipse) ಸಂಭವಿಸಲಿದ್ದು; ಯಾವಾಗ ಪ್ರಾರಂಭವಾಗಿ ಯಾವಾಗ ಗ್ರಹಣ ಮೋಕ್ಷವಾಗಲಿದೆ? ಈ ಗ್ರಹಣ ಜಗತ್ತಿನ ಎಲ್ಲೆಲ್ಲಿ ಗೋಚರವಾಗಲಿದೆ? ದ್ವಾದಶ ರಾಶಿಗಳ (Twelve Signs) ಮೇಲೆ ಬೀರುವ ಪ್ರಭಾವ-ಪರಿಣಾಮಗಳೇನು? ಇತ್ಯಾದಿ ಮಾಹಿತಿಯನ್ನು ಇಲ್ಲಿ ನೋಡೋಣ…
ಇದೇ ನಾಳೆ ಸೆಪ್ಟೆಂಬರ್ 7ರ ಭಾನುವಾರ ಭಾದ್ರಪದ ಮಾಸದ ಶುಕ್ಲಪಕ್ಷದ ಅನಂತನ ಹುಣ್ಣಿಮೆ ದಿನದಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಖಗ್ರಾಸವೆಂದರೆ ಬೇರೇನೂ ಅಪಾರ್ಥವಲ್ಲ; ‘ಪೂರ್ಣ ಚಂದ್ರಗ್ರಹಣ’ ಎಂದರ್ಥ. 2025ರ ಮೊದಲ ಗ್ರಹಣ ಇದಾಗಿದೆ.
ಇದನ್ನೂ ಓದಿ: Unauthorized BPL Ration Card- 12 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರದ ಸಿದ್ಧತೆ | ನೀವು ಈ ಪಟ್ಟಿಯಲ್ಲಿದ್ದೀರಾ?
ಚಂದ್ರಗ್ರಹಣ ಯಾವಾಗ ಪ್ರಾರಂಭ?
ಮೊದಲೇ ಹೇಳಿದಂತೆ ನಾಳೆ ಸೆಪ್ಟೆಂಬರ್ 7ರ ರಾತ್ರಿ 8.50ಕ್ಕೆ ಗ್ರಹಣ ಪ್ರಾರಂಭವಾಗುತ್ತದೆ. ಆಗ ಭೂಮಿಯ ಅರೆನೆರಳು ಚಂದ್ರನ ಮೇಲೆ ಅಸ್ಪಷ್ಟವಾಗಿ ಬೀಳಲು ಪ್ರಾರಂಭಿಸುತ್ತದೆ. ಸುಮಾರು 9.57ರಿಂದ ಭೂಮಿಯ ನೆರಳು ಚಂದ್ರನ ಮೇಲೆ ಸ್ಪಷ್ಟವಾಗಿ ಹರಿದಾಡುತ್ತದೆ.
ರಾತ್ರಿ 11 ಗಂಟೆಗೆ ಚಂದ್ರ ಸಂಪೂರ್ಣವಾಗಿ ಭೂಮಿಯ ನೆರಳಿಗೆ ಬಂದಿರುತ್ತಾನೆ. ಆಗಿನಿಂದ ಮಧ್ಯರಾತ್ರಿ 12.22ರ ವರೆಗೆ ಅಂದರೆ ಸುಮಾರು 1 ಗಂಟೆ 22 ನಿಮಿಷಗಳ ಕಾಲ ಖಗ್ರಾಸ ಚಂದ್ರಗ್ರಹಣವನ್ನು ಯಾವುದೇ ಹಾನಿ ಇಲ್ಲದೇ ಬರೀಗಣ್ಣಿನಿಂದಲೇ ನೋಡಬಹುದಾಗಿದೆ ಎನ್ನುತ್ತಾರೆ ಖಗೋಳ ತಜ್ಞರು.
ಮಧ್ಯರಾತ್ರಿ 1.27 ಗ್ರಹಣ ಮೋಕ್ಷವಾಗಲಿದೆ. 1.27ರಿಂದ ಚಂದ್ರ ಭೂಮಿಯ ನೆರಳಿನಿಂದ, 2.25ಕ್ಕೆ ಭೂಮಿಯ ಅರೆ ನೆರಳಿನಿಂದ ಹೊರಬರುವ ಮೂಲಕ ಸಂಪೂರ್ಣ ಗ್ರಹಣ ಮುಕ್ತನಾಗುತ್ತಾನೆ. ಈ ಗ್ರಹಣವು ವಿವಿಧ ಹಂತಗಳಲ್ಲಿ ಸುಮಾರು 5 ಗಂಟೆ 27 ನಿಮಿಷ ನಡೆಯಲಿದೆ.

ಇದನ್ನೂ ಓದಿ: Rural Godown Subsidy Scheme- ರೈತರಿಗೆ ಗೋದಾಮು ನಿರ್ಮಾಣಕ್ಕೆ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…
ಖಗ್ರಾಸ ಚಂದ್ರಗ್ರಹಣ ಎಲ್ಲೆಲ್ಲಿ ಕಾಣಲಿದೆ?
ಸೆಪ್ಟೆಂಬರ್ 7ರಂದು ಸಂಭವಿಸಲಿರುವ ಖಗ್ರಾಸ ಚಂದ್ರಗ್ರಹಣವು ಭಾರತ ಮತ್ತು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಪರಿಪೂರ್ಣವಾಗಿ ಘೋಚರಿಸಲಿದೆ. ಆಕಾಶದಲ್ಲಿ ನಡೆಯುವ ಈ ವಿಶೇಷ ಖಗೋಳ ವಿದ್ಯಮಾನವನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದಾಗಿದೆ.
ಭಾರತವಲ್ಲದೇ ಶ್ರೀಲಂಕಾ, ಚೀನಾ, ಮಂಗೋಲಿಯಾ, ಮಲೇಷ್ಯಾ, ಆಸ್ಟ್ರೇಲಿಯಾ, ಸಿಂಗಪುರ, ಇಂಡೋನೇಷ್ಯಾ, ರಷ್ಯಾದ ಕೇಂದ್ರ ಭಾಗ, ಆಫ್ರಿಕಾ ಖಂಡದ ಪೂರ್ವ ಭಾಗ ಮತ್ತು ಗಲ್ಫ ದೇಶಗಳಲ್ಲಿ ಕಾಣಿಸಲಿದೆ.
ದ್ವಾದಶ ರಾಶಿಗಳ ಮೇಲೆ ಏನೇನು ಪರಿಣಾಮ?
ಗೋಚರವಾಗಲಿ ಅಥವಾ ಗೋಚರವಾಗದೇ ಇರಲಿ, ಯಾವುದೇ ಗ್ರಹಣವು ಸಂಭವಿಸಿದಾಗ ದ್ವಾದಶ ರಾಶಿಗಳ ಮೇಲೆ ಪರಿಣಾಮ ಇರಲಿದೆ. ಸದರಿ ಖಗ್ರಾಸ ಚಂದ್ರಗ್ರಹಣವು ದ್ವಾದಶ ರಾಶಿಯವರ ಮೇಲೆ ಮಿಶ್ರಫಲ ನೀಡಲಿದೆ ಎನ್ನುತ್ತಾರೆ ಜ್ಯೋತಿಷಿಗಳು.
ಈ ಬಾರಿಯ ಖಗ್ರಾಸ ಚಂದ್ರಗ್ರಹಣವು ಪೂರ್ವಾಭಾದ್ರ ಮತ್ತು ಶತಭಿಷ ನಕ್ಷತ್ರಗಳಲ್ಲಿ ನಡೆಯುತ್ತಿದೆ. ಇದರಿಂದಾಗಿ ಕುಂಭ ಮತ್ತು ಮೀನ ರಾಶಿಯವರಿಗೆ ‘ಅಶುಭ’ ಫಲವಿದೆ ಎನ್ನಲಾಗುತ್ತಿದೆ.
ಮಿಥುನ, ತುಲಾ ರಾಶಿಯವರಿಗೆ ಶುಭಕರವಾಗಿದ್ದು; ಧನಸ್ಸು ರಾಶಿಯವರಿಗೆ ಅತ್ಯಂತ ಉತ್ತಮ ಫಲವಿದೆ. ಇನ್ನುಳಿದ ರಾಶಿಯವರಿಗೆ ಗ್ರಹಣದ ಯಾವುದೇ ಪರಿಣಾಮ ಇರುವುದಿಲ್ಲ ಎನ್ನುವುದು ಜ್ಯೋತಿಷಿಗಳ ಅಭಿಪ್ರಾಯವಾಗಿದೆ.
LIC Recruitment- LICಯ 841 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ