Central Government Jobs : ಭಾರತ ಸರ್ಕಾರದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಿಬ್ಬಂದಿ ಆಯ್ಕೆ ಆಯೋಗವು (Staff Selection Commission- SSC) ತಯಾರಿ ನಡೆಸಿದೆ. ಕಳೆದ ಬಾರಿ ಸಿಜಿಎಲ್ ಪರೀಕ್ಷೆ ಮೂಲಕ 7,845 ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದ್ದ ಎಸ್‌ಎಸ್‌ಸಿ, ಈ ಬಾರಿ ಅಂದಾಜು 8,400ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ಈ ಎಲ್ಲಾ ಖಾಲಿ ಹುದ್ದೆಗಳ ಭರ್ತಿಗಾಗಿ ಇದೇ ಜೂನ್ 11, 2024ರಂದು ಅಧಿಸೂಚನೆ ಬಿಡುಗಡೆ ಮಾಡುವುದಾಗಿ ಎಸ್‌ಎಸ್‌ಸಿ ತಿಳಿಸಿತ್ತು. ಆದರೆ ಇದೀಗ ಜೂನ್ 24ಕ್ಕೆ ಅಧಿಕೃತ ಅಧಿಸೂಚನೆ ಪ್ರಕಟಿಸುವುದಾಗಿ ಹೇಳಲಾಗಿದೆ. ಜುಲೈ 24, 2024 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಲಿದೆ.
ಯಾವೆಲ್ಲ ಹುದ್ದೆಗಳಿಗೆ ಅವಕಾಶವಿದೆ?
ನೇಮಕ ನಡೆಯಲಿರುವ ಹುದ್ದೆಗಳೆಲ್ಲವೂ ಕೇಂದ್ರ ಸರ್ಕಾರದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಖಾಲಿಯಿರುವ ಗ್ರೂಪ್ ‘ಬಿ’ ಹಾಗೂ ‘ಸಿ’ ವೃಂದದ ಹುದ್ದೆಗಳಾಗಿದ್ದು; ಗ್ರೂಪ್ ಬಿ 4,900, ಗ್ರೂಪ್ ಸಿ ವೃಂದದಲ್ಲಿ 3,500 ಹುದ್ದೆಗಳ ನೇಮಕ ನಡೆಯಲಿದೆ ಎಂದು ಅಂದಾಜಿಸಲಾಗಿದೆ.
ಆಡಿಟರ್, ಆಡಿಟ್ ಆಫೀಸರ್, ಅಕೌಂಟ್ಸ್ ಆಫೀಸರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್, ಆದಾಯ ತೆರಿಗೆ ಇಲಾಖೆ ನಿರೀಕ್ಷಕ, ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್ ಸೇರಿ ಬರೋಬ್ಬರಿ 8,400 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ.
ವಿದ್ಯಾರ್ಹತೆ, ವೇತನ ಮತ್ತು ವಯೋಮಿತಿ ವಿವರ
ಎಲ್ಲ 8,400 ಹುದ್ದೆಗಳಿಗೂ ‘ಪದವಿ‘ ಕನಿಷ್ಠ ವಿದ್ಯಾರ್ಹತೆಯಾಗಿದೆ. ಜೊತೆಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಕಂಪ್ಯೂಟರ್ ಜ್ಞಾನ, ಡೇಟಾ ಎಂಟ್ರಿ ಸ್ಪೀಡ್ ಮೊದಲಾದ ವಿಶೇಷ ಕೌಶಲ್ಯಗಳನ್ನು ಹೊಂದಿರಬೇಕಾಗಿರುತ್ತದೆ.
ಈ ಹುದ್ದೆಗಳಲ್ಲಿ ವಿವಿಧ ಶ್ರೇಣಿಯ ಮಾಸಿಕ ವೇತನವನ್ನು ನಿಗದಿ ಮಾಡಲಾಗಿದ್ದು; 25,500 ರೂಪಾಯಿಗಳಿಂದ 1,51,100 ರೂಪಾಯಿ ವರೆಗೂ ಸಂಬಳವಿದೆ. ಜೊತೆಗೆ ಕೇಂದ್ರ ಸರಕಾರದ ಎಲ್ಲ ಸವಲತ್ತುಗಳೂ ಅನ್ವಯವಾಗುತ್ತವೆ.
18 ರಿಂದ 27 ವರ್ಷ, 20-30, 18-30 ಹಾಗೂ 18-32 ವರ್ಷಗಳ ವಯೋಮಿತಿಯನ್ನು ನಿಗದಿ ಮಾಡಲಾಗುತ್ತದೆ. ಪರಿಶಿಷ್ಟರಿಗೆ ಗರಿಷ್ಠ 5 ವರ್ಷ, ಅಂಗವಿಕಲರಿಗೆ ಗರಿಷ್ಠ 15 ವರ್ಷದ ವರೆಗೂ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ಪರೀಕ್ಷೆ ಕುರಿತ ಮಾಹಿತಿ
ಇದೇ 2024ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು; ಎರಡು ಹಂತಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಜೂನ್ 24ರಂದು ಪ್ರಕಟವಾಗುವ ಅಧಿಸೂಚನೆಯಲ್ಲಿಯೇ ಎಲ್ಲ ಪ್ರಶ್ನೆ ಪತ್ರಿಕೆಗಳಿಗೂ ಅನ್ವಯವಾಗುವ ಪಠ್ಯಕ್ರಮದ ಸಂಪೂರ್ಣ ವಿವರಗಳನ್ನು ನೀಡಲಾಗಿರುತ್ತದೆ.
ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮೂಸೂರು, ಮಂಗಳೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಕೇಂದ್ರ ಸರಕಾರಿ ಸೇವೆ ಮಾಡಬಯಸುವ ಆಸಕ್ತ, ಅರ್ಹ ಅಭ್ಯರ್ಥಿಗಳು ಈಗಿಂದಲೇ ಪರೀಕ್ಷೆ ತಯಾರಿಯಲ್ಲಿ ತೊಡಗಿಸಿಕೊಂಡರೆ ಖಂಡಿತವಾಗಿಯೂ ಈ ಹುದ್ದೆಗಳಿಗೆ ನೇಮಕವಾಗಬಹುದು.
ಸದರಿ ನೇಮಕಾತಿ ಕುರಿತ ಅಧಿಕೃತ ಅಧಿಸೂಚನೆ ಹಾಗೂ ಇತರ ಸಂಪೂರ್ಣ ವಿವರವನ್ನು mahitimane.com ಜಾಲತಾಣದಲ್ಲಿ ನಿರೀಕ್ಷಿಸಿ…
ಅಧಿಕೃತ ಜಾಲತಾಣ : ಇಲ್ಲಿ ಒತ್ತಿ
1 thought on “8,000+ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ Central Government Jobs”
Comments are closed.