EducationNews

KCET 2025 1st Round Seat Allotment- ಕೆಸಿಇಟಿ ಶೇ.80ರಷ್ಟು ಸೀಟು ಹಂಚಿಕೆ ಪೂರ್ಣ | 2ನೇ ಸುತ್ತಿನಲ್ಲಿ ಅವಕಾಶ ವಂಚಿತರಿಗೆ ಮತ್ತೊಂದು ಚಾನ್ಸ್

Spread the love

ಸಿಇಟಿ ಮೊದಲ ಸುತ್ತಿನಲ್ಲಿಯೇ (KCET 2025 1st Round Seat Allotment) ಬರೋಬ್ಬರಿ ಶೇ.80ರಷ್ಟು ಸೀಟು ಹಂಚಿಕೆಯಾಗಿದ್ದು; 2ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ, ಕೋರ್ಸುವಾರು ಹಂಚಿಕೆಯಾದ ಸೀಟುಗಳ ವಿವರ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025-26ರ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಸೀಟುಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಕೆಇಎ ಪ್ರಕಾರ, ಈ ವರ್ಷವೂ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ ಮತ್ತು ನರ್ಸಿಂಗ್ ಕೋರ್ಸುಗಳಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ.

ಪ್ರಸ್ತುತ ಶೈಕ್ಷಣಿಕ ಸಾಲಿಗೆ ಒಟ್ಟು 1.35 ಲಕ್ಷ ಸೀಟುಗಳು ಲಭ್ಯವಿದ್ದರೆ, ಅವುಗಳಲ್ಲಿ 1.09 ಲಕ್ಷ ಸೀಟುಗಳು ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿವೆ. ಇದರಿಂದಾಗಿ ಕೇವಲ 26,555 ಸೀಟುಗಳು ಮಾತ್ರ ಉಳಿದಿವೆ. ಈ ಸೀಟುಗಳು ಎರಡನೇ ಹಾಗೂ ನಂತರದ ಸುತ್ತಿನಲ್ಲಿ ಹಂಚಿಕೆಯಾಗಲಿವೆ.

IBPS Bank Jobs- ಕರ್ನಾಟಕದ 11 ಪ್ರಮುಖ ಬ್ಯಾಂಕ್‌ಗಳಲ್ಲಿ 1,170 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ

ಕೋರ್ಸುಗಳವಾರು ಸೀಟು ಹಂಚಿಕೆಯ ವಿವರ
  • ಎಂಜಿನಿಯರಿಂಗ್ (Engineering): ಒಟ್ಟು 77,140 ಸೀಟುಗಳು ಲಭ್ಯವಿದ್ದು; ಇವುಗಳಲ್ಲಿ 71,813 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. 5,327 ಸೀಟುಗಳು ಉಳಿವೆ.
  • ನರ್ಸಿಂಗ್ (Nursing ): ನರ್ಸಿಂಗ್’ನಲ್ಲಿ ಒಟ್ಟು 31,726 ಸೀಟುಗಳಿದ್ದು; ಈ ಪೈಕಿ 15,186 ಸೀಟುಗಳು ಭರ್ತಿಯಾಗಿವೆ. 16,540 ಸೀಟುಗಳು ಉಳಿದಿದ್ದು; 2ನೇ ಸುತ್ತಿನಲ್ಲಿ ಹೆಚ್ಚಿನ ಭರ್ತಿಯ ನಿರೀಕ್ಷೆಯಿದೆ.
  • ವೈದ್ಯಕೀಯ (Medical): ಈ ವಿಭಾಗದಲ್ಲಿ 9,263 ಸೀಟುಗಳು ಭರ್ತಿಯಾಗಿವೆ. ಹೆಚ್ಚಿನವರು NEET ಆಧಾರದ ಮೇಲೆ ಕೋರ್ಸುಗಳಿಗೆ ಪ್ರವೇಶ ಪಡೆಯುತ್ತಿದ್ದು, CET ಆಧಾರದ ಮೇಲಿನ ಸೀಟುಗಳು ನಿರ್ದಿಷ್ಟವಾಗಿವೆ.
  • ಕೃಷಿ ವಿಭಾಗ (Agriculture and Allied Sciences): ಈ ವಿಭಾಗದ ಎಲ್ಲ ಸೀಟುಗಳು ಮೊದಲ ಸುತ್ತಿನಲ್ಲಿಯೇ ಭರ್ತಿಯಾಗಿವೆ. ಪಶು ಸಂಗೋಪನೆ, ರೇಷ್ಮೆ ತಂತ್ರಜ್ಞಾನ, ಆಹಾರ ವಿಜ್ಞಾನ ಕೋರ್ಸುಗಳಿಗೆ ಹೆಚ್ಚು ಪ್ರತಿಸ್ಪಂದನೆ ಕಂಡುಬಂದಿದೆ.
ಸಿಇಟಿ ಮೊದಲ ಸುತ್ತಿನಲ್ಲಿಯೇ ಶೇ.80ರಷ್ಟು ಸೀಟು ಹಂಚಿಕೆಯಾಗಿದ್ದು; 2ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ, ಕೋರ್ಸುವಾರು ಹಂಚಿಕೆಯಾದ ಸೀಟುಗಳ ವಿವರ ಇಲ್ಲಿದೆ...
KCET 2025 1st Round Seat Allotment
ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದಂತೆ, ಅಗಸ್ಟ್ 3ನೇ ವಾರದಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿದ ಆಪ್ಷನ್‌ಗಳ ಪುನರ್ ಪರಿಶೀಲನೆ, ಹೊಸ ಆಯ್ಕೆಗಳನ್ನು ದಾಖಲಿಸುವ ಅವಕಾಶ ಮತ್ತು ಠೇವಣಿ ಪಾವತಿ ವಿವರಗಳು ಪ್ರಕಟವಾಗಲಿವೆ.

LIC BIMA SAKHI Scheme- ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಂದ ಎಲ್‌ಐಸಿ ಉದ್ಯೋಗಕ್ಕೆ ಅರ್ಜಿ ಆಹ್ವಾನ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡಿ…

ವಿದ್ಯಾರ್ಥಿಗಳ ಕಾದು ನೋಡುವ ತಂತ್ರ

ಕೆಲವರು ಮೊದಲ ಸುತ್ತಿನಲ್ಲಿ ಸೀಟು ಪಡೆದರೂ ಕೂಡಾ, ತೃಪ್ತಿಯಿಲ್ಲದ ಕಾರಣದಿಂದ ಅಥವಾ ಉತ್ತಮ ಆಯ್ಕೆಗಾಗಿ ಕಾಯುತ್ತಿದ್ದಾರೆ. ಈ ಕಾರಣದಿಂದಾಗಿ ಶೇ. 35 ರಿಂದ 40ರಷ್ಟು ವಿದ್ಯಾರ್ಥಿಗಳು ತಮ್ಮ ಸೀಟು ಬಿಟ್ಟು ಇನ್ನೊಂದು ಅವಕಾಶವನ್ನು ಆಶಿಸುತ್ತಿದ್ದಾರೆ. ಇದರಿಂದಾಗಿ ಎರಡನೇ ಸುತ್ತಿನಲ್ಲಿ ಹೆಚ್ಚಿನ ಸೀಟುಗಳು ಲಭ್ಯವಾಗುವ ಸಾಧ್ಯತೆ ಇದೆ.

ಆಪ್ಷನ್ ಎಂಟ್ರಿ ಹಾಗೂ ಠೇವಣಿ ಪಾವತಿ ಪ್ರಕ್ರಿಯೆ

ಎರಡನೇ ಸುತ್ತಿನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಪೋರ್ಟಲ್‌ಗೆ ಲಾಗಿನ್ ಆಗಿ ತಮಗೆ ಇಚ್ಛೆಯಿರುವ ಕೋರ್ಸ್/ಕಾಲೇಜುಗಳನ್ನು ಆಯ್ಕೆ ಮಾಡಬೇಕು. ವೈದ್ಯಕೀಯ ಕೋರ್ಸ್ಗಳಿಗೆ (ಸಾಮಾನ್ಯವಾಗಿ ಮೆಡಿಕಲ್, ಬಿಐಪಿಸಿ ಗ್ರೂಪ್) ಭಾಗವಹಿಸಲು ಠೇವಣಿ ಪಾವತಿ ಕಡ್ಡಾಯವಾಗಿರುತ್ತದೆ.

ದಂತ ವೈದ್ಯಕೀಯ (BDS) ಮತ್ತು ಹೋಮಿಯೋಪಥಿ (BHMS) ಕೋರ್ಸ್’ಗಳಿಗೆ ಈ ಠೇವಣಿಯ ಅವಶ್ಯಕತೆ ಇಲ್ಲ. ಈ ವಿಭಾಗಗಳ ಸೀಟು ಹಂಚಿಕೆಗೂ ಪ್ರತ್ಯೇಕ ವೇಳಾಪಟ್ಟಿಯನ್ನು ಕೆಇಎ ಪ್ರಕಟಿಸಲಿದೆ.

ಮೊದಲ ಸುತ್ತಿನಲ್ಲಿ ಸೀಟು ಸಿಗದವರಿಗೆ ಸೂಚನೆಗಳು

ಮೊದಲ ಸುತ್ತಿನಲ್ಲಿ ಸೀಟು ಬಾರದಿದ್ದವರು 2ನೇ ಸುತ್ತಿನಲ್ಲಿ ನೇರವಾಗಿ ಭಾಗವಹಿಸಬಹುದು. ಆಪ್ಷನ್ ಎಂಟ್ರಿ ಮಾಡದೆ ಇದ್ದರೂ 2ನೇ ಸುತ್ತಿನಲ್ಲಿ ಅವಕಾಶ ನೀಡಲಾಗುವುದು. ಈ ವಿದ್ಯಾರ್ಥಿಗಳಿಗೆ ಯಾವುದೇ ತಾಂತ್ರಿಕ ದೋಷವಿಲ್ಲದೆ ಮತ್ತೆ ಅವಕಾಶ ಸಿಗಲಿದೆ ಎಂಬುದನ್ನು ಕೆಇಎ ಖಚಿತಪಡಿಸಿದೆ.

ಈ ವರ್ಷ ಸಿಇಟಿ ಹಂಚಿಕೆಯ ಪ್ರಕ್ರಿಯೆ ಶ್ರೇಣಿಬದ್ಧವಾಗಿ ನಡೆಯುತ್ತಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ತೃಪ್ತಿಕರವಾಗಿ ಸೀಟು ಲಭಿಸಿದೆ. ಎರಡು ಸುತ್ತುಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಹೆಜ್ಜೆ ಹಾಕಲಿದ್ದಾರೆ. ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಎಲ್ಲ ಮಾಹಿತಿ ಗಮನದಿಂದ ಅಧ್ಯಯನ ಮಾಡಬೇಕು.


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!