LIC BIMA SAKHI Scheme- ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಂದ ಎಲ್‌ಐಸಿ ಉದ್ಯೋಗಕ್ಕೆ ಅರ್ಜಿ ಆಹ್ವಾನ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡಿ…

10ನೇ ತರಗತಿ ಪಾಸಾದ ಮಹಿಳೆಯರು ತಮ್ಮೂರಲ್ಲೇ ಕೇಂದ್ರ ಸರ್ಕಾರಿ ಅಧೀನದ ಎಲ್‌ಐಸಿಯಲ್ಲಿ ‘ಬೀಮಾ ಸಖಿ’ಯಾಗಿ (LIC BIMA SAKHI Scheme) ಉದ್ಯೋಗ ನಿರ್ವಹಿಲು ಅವಕಾಶ ನೀಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರಕಾರವು ‘ಬಿಮಾ ಸಖಿ’ (BIMA SAKHI) ಯೋಜನೆಗೆ ಅಧಿಕೃತ ಚಾಲನೆ ನೀಡಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಭಾರತದ ಜೀವ ವಿಮಾ ನಿಗಮ (LIC) ಸಹಯೋಗದಲ್ಲಿ ಸ್ವಯಂ ಸಹಾಯ ಗುಂಪುಗಳ ಮಹಿಳೆಯರನ್ನು ತರಬೇತಿ ನೀಡಿ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ಬಿಮಾ ಸಖಿ’ಗಳಾಗಿ ನೇಮಕ ಮಾಡಲಿದೆ.
ಈ ಕಾರ್ಯವನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನ ಆರ್ಥಿಕ ಒಳಗೊಳ್ಳುವಿಕೆ ಯೋಜನೆಯಡಿ ಜಾರಿಗೆ ತರುತ್ತಿದೆ. ‘ಬಿಮಾ ಸಖಿ’ಗಳು ಗ್ರಾಮಗಳಲ್ಲಿ ವಿಮಾ ಯೋಜನೆಗಳ ಜಾಗೃತಿ ಮೂಡಿಸಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಬಲಪಡಿಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ. 10ನೇ ತರಗತಿ ಪಾಸಾದ ಮಹಿಳೆಯರಿಗೆ ಇದು ಸುವರ್ಣಾವಕಾಶವಾಗಿದೆ.
ಗ್ರಾಮ ಪಂಚಾಯಿತಿಗೊಬ್ಬ ಬಿಮಾ ಸಖಿ
ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರ್ಥ ಮೊಹಂತಿ ಅವರು ಈ ಬಗ್ಗೆ ಮಾಹಿತಿ ನಿಢಿದ್ದು; ಒಟ್ಟು ನೋಂದಣಿಯಾದ 52,511 ಬಿಮಾ ಸಖಿಯರ ಪೈಕಿ 27,511 ಜನಕ್ಕೆ ನೇಮಕಾತಿ ಪತ್ರ ವಿತರಿಸಲಾಗಿದೆ. 14,583 ಬಿಮಾ ಸಖಿಯರು ಈಗಾಗಲೇ ಎಲ್‌ಐಸಿ ಉತ್ಪನ್ನ ಸೇವೆಗಳ ಮಾರಾಟ ಪ್ರಾರಂಭಿಸಿದ್ದಾರೆ.
‘ಒಂದು ವರ್ಷದ ಅವಧಿಯಲ್ಲಿ ದೇಶದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕನಿಷ್ಠ ಒಬ್ಬ ವಿಮಾ ಸಖಿ ಇರಬೇಕು ಎಂಬುದು ನಮ್ಮ ಗುರಿಯಾಗಿದ್ದು; ಇವರಿಗೆ ಕಮಿಷನ್ ಹಣದ ಜತೆಗೆ ಮೂರು ವರ್ಷಗಳ ಕಾಲ ಮಾಸಿಕ ಸ್ಟೆಪೆಂಡ್ (ಶಿಷ್ಯವೇತನ) ನೀಡಲಾಗುತ್ತದೆ’ ಎಂದು ಸಿದ್ದಾರ್ಥ ಮೊಹಂತಿ ಅವರು ತಿಳಿಸಿದ್ದಾರೆ.

ಏನಿದು ‘ಬಿಮಾ ಸಖಿ’ ಯೋಜನೆ?
ಕೇಂದ್ರ ಸರ್ಕಾರದ ಈ ಯೋಜನೆಯಡಿ ಬಿಮಾ ಸಖಿಯರು ಸರ್ಕಾರದಿಂದ ಮೂರು ವರ್ಷ ತರಬೇತಿ ಪಡೆದ ಬಳಿಕ ಭಾರತೀಯ ಜೀವ ವಿಮಾ ನಿಗಮಕ್ಕೆ ಖಾಯಂ ಏಜೆಂಟ್ ಆಗಿ ಕಾರ್ಯನಿರ್ವಹಿಸಬಹುದು.
ಬಿಮಾ ಸಖಿಯರಾಗಲು 18ರಿಂದ 70 ವರ್ಷದ ವರೆಗಿನ ಮಹಿಳೆಯರು ಅರ್ಹರಾಗಿದ್ದು; ಕನಿಷ್ಠ 10ನೇ ಕ್ಲಾಸ್ ಪಾಸಾದವರಿಗೆ ಏಜೆಂಟ್ ಆಗುವ ಅವಕಾಶ ಕಲ್ಪಿಸಲಾಗಿದೆ. ಬಿಮಾ ಸಖಿಯರಾಗಿರುವ ಮಹಿಳೆಯರು ಪದವೀಧರರಾಗಿದ್ದರೆ ಎಲ್‌ಐಸಿಯಲ್ಲಿ ಡೆವಲಪ್ಮೆಂಟ್ ಆಫೀಸರ್’ಗಳಾಗಿಯೂ ಕಾರ್ಯ ನಿರ್ವಹಿಸಬಹುದು.
ಸರ್ಕಾರದ ಗೌರವಧನ ಎಷ್ಟು ಸಿಗಲಿದೆ?
ಮೂರು ವರ್ಷಗಳ ತರಬೇತಿ ಅವಧಿಯಲ್ಲಿ ಕೇಂದ್ರ ಸರ್ಕಾರವು ‘ಬಿಮಾ ಸಖಿ’ ಯೋಜನೆಯಡಿ ತರಬೇತಿ ಪಡೆಯುವ ಮಹಿಳೆಯರಿಗೆ ಸ್ಟೈಪೆಂಡ್ ನೀಡಲಿದೆ. ಮಾಸಿಕ ಭತ್ಯೆ ಈ ಕೆಳಗಿನಂತಿದೆ:
- ಮೊದಲ ವರ್ಷ : 7,000 ರು.,
- ಎರಡನೇ ವರ್ಷ : 6,000 ರು.,
- ಮೂರನೇ ವರ್ಷ : 5,000 ರು.,
1ನೇ ವರ್ಷದಲ್ಲಿ ಹೇಳಿಕೊಡಲಾಗುವ ಪಾಲಿಸಿಗಳಲ್ಲಿ ಶೇಕಡಾ 65ಕ್ಕೂ ಹೆಚ್ಚು ಭಾಗವನ್ನು ಬಿಮಾ ಸಖಿಯರು ಕಲಿತಿದ್ದರೆ 2ನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ. ಅದೇ ರೀತಿ 2ನೇ ಮತ್ತು 3ನೇ ವರ್ಷದಲ್ಲಿ ಕೂಡ ಈ ನಿಯಮ ಅನ್ವಯವಾಗುತ್ತದೆ.
ಮೂರೂ ವರ್ಷಗಳನ್ನು ತರಬೇತಿ ಪಡೆದು ಸಂಸ್ಥೆ ನಿಗದಿಪಡಿಸಿದಷ್ಟು ಪಾಲಿಸಿಗಳನ್ನು ಮಾರಾಟ ಮಾಡಿದ ಮಹಿಳೆಯರಿಗೆ ಈಗ ಎಲ್‌ಐಸಿ ಏಜೆಂಟ್’ಗಳಿಗೆ ಲಭ್ಯವಾಗುವ ಕಮೀಷನ್ ಜೊತೆಗೆ ಇತರ ಸೌಲಭ್ಯಗಳು ಕೂಡ ಅನ್ವಯವಾಗುತ್ತವೆ.
ಅರ್ಜಿ ಸಲ್ಲಿಕೆ ಹೇಗೆ?
ಈ ಲೇಖನದ ಕೊನೆಯಲ್ಲಿ ನೀಡಲಾದ licindia ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಲಿಂಕ್ ಕ್ಲಿಕ್ ಮಾಡಿದರೆ LIC’s BIMA SAKHI ವೆಬ್ ಪುಟದಲ್ಲಿ lead application for lic’s bima sakhi scheme ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ ಸೇರಿದಂತೆ ಇತರ ವಿವರಗಳನ್ನು ಭರ್ತಿ ಮಾಡಿ ಸಬ್‌ಮಿಟ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಬಿಮಾ ಸಖಿ ಅರ್ಜಿ ಲಿಂಕ್ : Apply ಮಾಡಿ