
ಏಮ್ಸ್ ಬೃಹತ್ ನೇಮಕಾತಿಗೆ (AIIMS Recruitment 2025) ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಎಲ್ಲಾ ರೀತಿಯ ಪದವೀಧರರಿಂದ 3,496 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) 2025ನೇ ಸಾಲಿನ ಸಾಮಾನ್ಯ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇರುವ 14 ಏಮ್ಸ್ ಸಂಸ್ಥೆಗಳು, ಇಎಸ್‌ಐಸಿ ಆಸ್ಪತ್ರೆಗಳು ಮತ್ತು ಪುದುಚೇರಿಯ ಜೆಐಪಿಎಂಇಆರ್ ಸೇರಿದಂತೆ 50ಕ್ಕೂ ಹೆಚ್ಚು ವಿಭಾಗಗಳಲ್ಲಿ ಒಟ್ಟು 3,496 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಹುದ್ದೆಗಳು ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ವರ್ಗಗಳ ಹುದ್ದೆಗಳಾಗಿದ್ದು; ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಅನುಭವದ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಹತೆಗಳು ಮತ್ತು ವಿದ್ಯಾರ್ಹತೆ
ಈ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಇಂಜಿನಿಯರಿಂಗ್ ಸೇರಿದಂತೆ ವಿವಿಧ ತಾಂತ್ರಿಕ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳಿಗೆ ವಿಧವಿಧವಾದ ಅರ್ಹತೆಗಳು ನಿಗದಿಪಡಿಸಲ್ಪಟ್ಟಿದ್ದು, ಆಯಾ ಹುದ್ದೆಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ಅನುಭವ, ವಯೋಮಿತಿ ಹಾಗೂ ಪ್ರಾಯೋಜಿತ ಪ್ರಮಾಣಪತ್ರಗಳು ಅಗತ್ಯವಿರುತ್ತವೆ.
ಅರ್ಜಿ ಸಲ್ಲಿಸಲು ಮುಖ್ಯ ಅರ್ಹತೆಗಳು
- ವಿದ್ಯಾರ್ಹತೆ: SSLC/ PUC/ Degree/ PG/ ITI/ Diploma/ Nursing/ Engineering (ಹುದ್ದೆಗನುಸಾರ)
- ವಯೋಮಿತಿ: ಹುದ್ದೆಗೆ ಅನುಗುಣವಾಗಿ ನಿಗದಿ. ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ಇದೆ.
- ಅನುಭವ: ಕೆಲವು ಹುದ್ದೆಗಳಿಗೆ ಕಡ್ಡಾಯವಾಗಿ ಅನುಭವ ಬೇಕಾಗಿರುತ್ತದೆ.
- ಪರಿಶಿಷ್ಟ ಪ್ರಮಾಣ ಪತ್ರಗಳು: ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆಂದು ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಹುದ್ದೆಗಳ ಸ್ಥಾನಗಳು ಮತ್ತು ವಿಭಾಗಗಳು
ಈ ನೇಮಕಾತಿ ಮೂಲಕ 50ಕ್ಕೂ ಹೆಚ್ಚು ವಿಭಾಗಗಳಲ್ಲಿ 3,496 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಭರ್ತಿಯಾಗಲಿರುವ ಕೆಲವು ಪ್ರಮುಖ ಹುದ್ದೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
- ಅಸಿಸ್ಟೆಂಟ್ ಡಯಟಿಷಿಯನ್ / ಡಯಟಿಷಿಯನ್
- ಅಡ್ಮಿನಿಸ್ಟ್ರೇಟಿವ್ ಆಫೀಸರ್
- ಅಸಿಸ್ಟೆಂಟ್ ಇಂಜಿನಿಯರ್ / ಜೂನಿಯರ್ ಇಂಜಿನಿಯರ್
- ಸ್ಪೀಚ್ ಥೆರಪಿಸ್ಟ್ / ರೇಡಿಯೋ ಥೆರಪಿ ಟೆಕ್ನಾಲಜಿಸ್ಟ್
- ಲ್ಯಾಬ್ ಅಟೆಂಡೆಂಟ್ / ನರ್ಸಿಂಗ್ ಅಟೆಂಡೆAಟ್
- ಮೆಕಾನಿಕ್ / ಎಲೆಕ್ಟ್ರಿಷಿಯನ್ / ಪಂಪ್ ಮೆಕಾನಿಕ್
- ಫಾರ್ಮಾಸಿಸ್ಟ್ / ಟೆಕ್ನಿಕಲ್ ಅಸಿಸ್ಟೆಂಟ್
- ಡೆಂಟಲ್ ಮೆಕಾನಿಕ್ / ಟೆಕ್ನಿಷಿಯನ್
- ಜೂನಿಯರ್ ವಾರ್ಡನ್ / ಕೌನ್ಸೆಲರ್ / ಟೆಲಿಫೋನ್ ಆಪರೇಟರ್
- ಸ್ಟೆನೋಗ್ರಾಫರ್ / ಕ್ಯಾಷಿಯರ್ / ಲೈಬ್ರರಿ ಅಸಿಸ್ಟೆಂಟ್
- ಡ್ರೈವರ್ / ಸೋಷಿಯಲ್ ವರ್ಕರ್
- ಸೀನಿಯರ್ ನರ್ಸಿಂಗ್ ಆಫೀಸರ್

ಅರ್ಜಿ ಶುಲ್ಕ ವಿವರ
- ಸಾಮಾನ್ಯ (UR) ಹಾಗೂ ಒಬಿಸಿ (OBC): ₹3,000
- ಎಸ್‌ಸಿ / ಎಸ್‌ಟಿ / ಆರ್ಥಿಕ ದುರ್ಬಲ ವರ್ಗ (EWS): ₹2,400
- ಅಂಗವಿಕಲ ಅಭ್ಯರ್ಥಿಗಳು (PwD): ಯಾವುದೇ ಶುಲ್ಕವಿಲ್ಲ, ಉಚಿತ
ಪರೀಕ್ಷಾ ವಿಧಾನ ಹೇಗಿರುತ್ತದೆ?
ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳು ಇರುತ್ತವೆ. ಪ್ರಶ್ನೆಗಳು ಐದು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು, ಪ್ರತಿ ವಿಭಾಗಕ್ಕೆ 20 ಪ್ರಶ್ನೆಗಳು ಇರುತ್ತವೆ. ಪ್ರತಿ ವಿಭಾಗಕ್ಕೆ 18 ನಿಮಿಷ ಸಮಯ. ಒಟ್ಟು ಪರೀಕ್ಷೆಗೆ 90 ನಿಮಿಷ (1.5 ಗಂಟೆ). ಒಟ್ಟು ಅಂಕಗಳು: 400. ತಪ್ಪು ಉತ್ತರಕ್ಕೆ 1 ಅಂಕ ಕಡಿತವಾಗಲಿದೆ.
SSLC/PUC ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಹಾಗೂ ಪದವಿ/ಪಿಜಿ ಹುದ್ದೆಗಳಿಗೆ ಇಂಗ್ಲಿಷ್ ಮಾಧ್ಯಮ ಮಾತ್ರ ಪರೀಕ್ಷೆ ನಡೆಯಲಿದೆ. ಪಠ್ಯಕ್ರಮ, ಮಾಧ್ಯಮ ಹಾಗೂ ವಿಷಯ ವಿವರಗಳಿಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ನೋಡಿ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಏಮ್ಸ್ ಅಧಿಕೃತ ವೆಬ್‌ಸೈಟ್ aiimsexams.ac.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜುಲೈ 31, 2025
- ಅರ್ಜಿ ಸ್ವೀಕಾರ / ತಿರಸ್ಕಾರದ ಘೋಷಣೆ: ಆಗಸ್ಟ್ 7, 2025
- ಕಂಪ್ಯೂಟರ್ ಆಧಾರಿತ ಪರೀಕ್ಷೆ: ಅಕ್ಟೋಬರ್ 25 ಮತ್ತು 26, 2025
2025ನೇ ಸಾಲಿನಲ್ಲಿ AIIMS ನೇಮಕಾತಿ ಸರ್ಕಾರದ ಉತ್ತಮ ಉದ್ಯೋಗಾವಕಾಶಗಳಲ್ಲಿ ಒಂದಾಗಿದೆ. ತಾಂತ್ರಿಕ ಮತ್ತು ಸಾಮಾನ್ಯ ಕ್ಷೇತ್ರಗಳಲ್ಲಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ನೇಮಕಾತಿ ಮೂಲಕ ಆರೋಗ್ಯ, ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ತಡಮಾಡದೆ, ಅಗತ್ಯ ದಾಖಲೆಗಳನ್ನು ತಯಾರಿಸಿ ನಿಗದಿತ ದಿನಾಂಕಕ್ಕೊಳಗೆ ಅರ್ಜಿ ಸಲ್ಲಿಸಿ…
ಅಧಿಸೂಚನೆ: Download
ಅರ್ಜಿ ಲಿಂಕ್: Apply Now