New Ration Card Applications- ಹೊಸ ರೇಷನ್ ಕಾರ್ಡ್ ಅರ್ಜಿ | ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ 3.22 ಲಕ್ಷ ಕುಟುಂಬಗಳು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ (New Ration Card Applications ) ಮಾಡಿದ್ದು; ಕಳೆದ 4 ವರ್ಷದಿಂದ ಹೊಸ ಕಾರ್ಡ್ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ…
ರಾಜ್ಯಾದ್ಯಂತ ಲಕ್ಷಾಂತರ ಬಿಪಿಎಲ್ ಕುಟುಂಬಗಳು ಕಳೆದ ನಾಲ್ಕು ವರ್ಷಗಳಿಂದ ಹೊಸ ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇವರಲ್ಲಿ ಬಹುತೇಕ ಅರ್ಹತೆಯುಳ್ಳ ಕುಟುಂಬಗಳಾಗಿದ್ದು; ಪಡಿತರ ಚೀಟಿ ಇಲ್ಲದ ಕಾರಣದಿಂದ, ಸರ್ಕಾರದ ನೆರವಿನಿಂದ ವಂಚಿತರಾಗುತ್ತಿದ್ದಾರೆ.
2021ರಲ್ಲಿ ಕೆಲ ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸಿದ ನಂತರ ಸರ್ಕಾರ ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಸರ್ಕಾರದ ಅನುಮತಿ ಇಲ್ಲದ ಕಾರಣದಿಂದ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ.
ಅನರ್ಹರರ ಕಾರ್ಡ್ ರದ್ಧತಿ ಅಭಿಯಾನ
ಪಂಚ ಗ್ಯಾರಂಟಿಗಳಡಿ ನಾನಾ ಸೌಲಭ್ಯಗಳನ್ನು ಘೋಷಿಸಿರುವ ಕಾಂಗ್ರೆಸ್ ಸರ್ಕಾರ ಈಗ ಆರ್ಥಿಕ ಹೊರೆ ತಗ್ಗಿಸುವ ಹಿನ್ನಲೆಯಲ್ಲಿ ಅನರ್ಹ ಕುಟುಂಬಗಳ ಪಡಿತರ ಚೀಟಿಗಳನ್ನು ಹಂತ ಹಂತವಾಗಿ ರದ್ದುಪಡಿಸುತ್ತಿದೆ.
ಆದರೆ, ಹೊಸ ಪಡಿತರ ಚೀಟಿಗಳನ್ನು ನೀಡದೆ ಇರುವುದರಿಂದ ನಿಜವಾಗಿಯೂ ಅರ್ಹ ಕುಟುಂಬಗಳು ಕೂಡ ಸರ್ಕಾರದ ಧೋರಣೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿವೆ.
ಜಿಲ್ಲಾವಾರು ಅರ್ಜಿದಾರರ ವಿವರ
ಆಹಾರ ಇಲಾಖೆ ಪ್ರಕಾರ ಹೊಸ ಪಡಿತರ ಚೀಟಿಗೆ ಒಟ್ಟು 3,21,921 ಕುಟುಂಬಗಳು ಅರ್ಜಿ ಸಲ್ಲಿಕೆ ಮಾಡಿವೆ. ಅರ್ಜಿದಾರರ ಜಿಲ್ಲಾವಾರು ಪಟ್ಟಿ ಹೀಗಿವೆ:
- ಬೆಳಗಾವಿ: 39,487
- ಕಲಬುರಗಿ: 35,808
- ವಿಜಯಪುರ: 24,651
- ಬೆಂಗಳೂರು: 18,589
- ಬೀದರ್: 17,719
- ರಾಯಚೂರು: 18,452
- ಬಳ್ಳಾರಿ: 10,253
- ಬೆಂಗಳೂರು ಪಶ್ಚಿಮ: 10,412
- ತುಮಕೂರು: 9,501
- ಹಾವೇರಿ: 8,949
- ಯಾದಗಿರಿ: 8,379
- ಮೈಸೂರು: 7,195
- ಗದಗ: 6,572
- ಬೆಂಗಳೂರು ಗ್ರಾಮಾಂತರ: 6,071
- ಚಿತ್ರದುರ್ಗ: 6,950
- ಹಾಸನ: 5,008
- ವಿಜಯನಗರ: 5,121
- ಬೆಂಗಳೂರು ಉತ್ತರ: 4,642
- ಬೆಂಗಳೂರು ಪೂರ್ವ: 4,540
- ರಾಮನಗರ: 3,624
- ಶಿವಮೊಗ್ಗ: 3,582
- ಮಂಡ್ಯ: 3,433
- ಕೋಲಾರ: 3,160
- ಚಿಕ್ಕಮಗಳೂರು: 3,362
- ಚಾಮರಾಜನಗರ: 3,105
- ದಾವಣಗೆರೆ: 2,777
- ಉತ್ತರ ಕನ್ನಡ: 1,692
- ಕೊಡುಗು: 1,613
- ಉಡುಪಿ: 507
- ದಕ್ಷಿಣ ಕನ್ನಡ: 827
ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳಿಂದ ನಿರೀಕ್ಷೆಯಲ್ಲಿರುವ 3.22 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಮಸ್ಯೆ ಈವರೆಗೂ ಬಗೆಹರಿಯದಿರುವುದು ಸರಕಾರದ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ. ಇದು ಲಕ್ಷಾಂತರ ಜನರ ಜೀವನ ಶೈಲಿಗೆ ನೇರವಾಗಿ ಸಂಬAಧಿಸಿದ ವಿಷಯವಾಗಿದ್ದು, ತಕ್ಷಣದ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಹೊಸ ರೇಷನ್ ಕಾರ್ಡ್ ಯಾವಾಗ?
2021 ರಿಂದಲೂ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ ಸ್ಥಗಿತಗೊಂಡಿದೆ. ಕಳೆದ 2023ರ ಸೆಪ್ಟೆಂಬರ್ 16ರಂದು, ಆರ್ಥಿಕ ಇಲಾಖೆ ಹೊಸ ಪಡಿತರ ಚೀಟಿಗೆ ಸಂಬAಧಿಸಿದAತೆ ಷರತ್ತುಗಳು ಮತ್ತು ಅನುಮತಿಯ ಆದೇಶ ಹೊರಡಿಸಿದೆ. ಆದರೆ, ಅದನ್ನು ಅನುಸರಿಸಿ ಸರ್ಕಾರವು ಇನ್ನೂ ಅರ್ಜಿ ಆಹ್ವಾನಿಸಲಿಲ್ಲ.
ವಿಧಾನಮಂಡಲ ಅಧಿವೇಶನಗಳಲ್ಲಿ ಶಾಸಕರು, ಸಚಿವರು ಹೊಸ ರೇಷನ್ ಕಾರ್ಡ್ ವಿತರಣೆ ಮತ್ತು ಅರ್ಜಿ ಆಹ್ವಾನಕ್ಕೆ ಆಗ್ರಹಿಸಿದ್ದರು. ಸಾರ್ವಜನಿಕರಿಂದಲೂ ಸಾಕಷ್ಟು ಒತ್ತಡ ವ್ಯಕ್ತವಾಗುತ್ತ ಬಂದಿದೆ. ಅಧಿಕಾರಿಗಳ ಪ್ರಕಾರ, ರಾಜ್ಯ ಸರ್ಕಾರ ಅನುಮತಿ ಕೊಟ್ಟ ತಕ್ಷಣ ಹೊಸ ಪಡಿತರ ಚೀಟಿಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.