
2025-26ನೇ ಸಾಲಿನ ಮೆಟ್ರಿಕ್ ನಂತರದ ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ (BCM Free Hostel Admission 2025) ಹೊಸದಾಗಿ ಪ್ರವೇಶ ಪಡೆಯಲು ಅರ್ಜಿ ಆಹ್ವಾಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ 2025-26ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಈ ಹಾಸ್ಟೆಲ್‌ಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಬಾಲಕ ಮತ್ತು ಬಾಲಕಿಯರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಮೆಟ್ರಿಕ್ ನಂತರದ ಯಾವುದೇ ಸಾಮಾನ್ಯ ಪದವಿ ಕೋರ್ಸುಗಳಲ್ಲಿ ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಈ ಹಾಸ್ಟೆಲ್‌ಗಳಲ್ಲಿ ಸೇರುವ ಅವಕಾಶವನ್ನು ಹೊಂದಿದ್ದಾರೆ.
ಅರ್ಹತಾ ಮಾನದಂಡಗಳು
ಅರ್ಹ ವರ್ಗಗಳು: ಪ್ರವರ್ಗ 1, ಪ್ರವರ್ಗ 2A, 2B, 3A, 3B ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST)
ವಾರ್ಷಿಕ ಆದಾಯ ಮಿತಿಗಳು: SC/ST ಹಾಗೂ ಪ್ರವರ್ಗ 1 ವಿದ್ಯಾರ್ಥಿಗಳಿಗೆ ವಾರ್ಷಿ ಆದಾಯ ₹2.50 ಲಕ್ಷ ಹಾಗೂ ಪ್ರವರ್ಗ 2A, 2Bಬಿ, 3A, 3B ವಿದ್ಯಾರ್ಥಿಗಳಿಗೆ ₹1 ಲಕ್ಷಕ್ಕಿಂತ ಕಡಿಮೆ ಆದಾಯವಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- ಎಸ್‌ಎಸ್‌ಪಿ (SSP) ಐಡಿ
- ಪಾಸ್‌ಪೋರ್ಟ್ ಗಾತ್ರದ ಇತ್ತೀಚಿನ ಪೋಟೋ
- ಹಿಂದಿನ ತರಗತಿಯ ಮಾರ್ಕ್ಸ್ ಶೀಟ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವಾಸಸ್ಥಳ ದೃಢೀಕರಣ ಪತ್ರ
- ಸಕ್ರಿಯ ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಕೆ ವಿಧಾನ ಹೇಗೆ?
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು SSP ಪೋರ್ಟಲ್ shp.karnataka.gov.in ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ bcwd.karnataka.gov.in ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಸರಿಯಾದ ವಿವರಗಳೊಂದಿಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 14, 2025
- ಅರ್ಜಿಗಳ ತಾಲೂಕು ಮಟ್ಟದ ಪರಿಶೀಲನೆಗೆ ಕೊನೆಯ ದಿನ: ಆಗಸ್ಟ್ 19, 2025
- ಆಯ್ಕೆಪಟ್ಟಿ ಪ್ರಕಟಣೆ: ಆಗಸ್ಟ್ 21, 2025
- ಆಯ್ಕೆಯಾದ ವಿದ್ಯಾರ್ಥಿಗಳ ಪ್ರವೇಶಕ್ಕೆ ಕೊನೆಯ ದಿನ: ಆಗಸ್ಟ್ 30, 2025
ವಿಶೇಷ ಸೂಚನೆಗಳು
- ಹಾಸ್ಟೆಲ್ ಪ್ರವೇಶ ಪ್ರಕ್ರಿಯೆ ಸಂಪೂರ್ಣವಾಗಿ ಆಧಾರ್ ಲಿಂಕ್ ಮಾಡಲಾದ ಎಸ್‌ಎಸ್‌ಪಿ ಪೋರ್ಟಲ್ ಮೂಲಕ ನಡೆಯುತ್ತದೆ.
- ಅರ್ಜಿ ಸಲ್ಲಿಸುವವರು ತಮ್ಮ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿ ಸರಿಯಾದ ಮಾಹಿತಿಯನ್ನು ನೀಡಬೇಕು.
- ತಕ್ಷಣವೇ ಅರ್ಜಿ ಸಲ್ಲಿಸುವ ಮೂಲಕ ಅವಕಾಶವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ bcwd.karnataka.gov.in ಅಥವಾ ಸಹಾಯವಾಣಿ 8050770004 / 8050770005 ಸಂಖ್ಯೆಯನ್ನು ಸಂಪರ್ಕಿಸಿ.
ಅರ್ಜಿ ಲಿಂಕ್: Apply Now