ಸ್ವಂತ ಮನೆ ಕಟ್ಟಲು ಸರಕಾರವೇ ನೀಡುತ್ತೆ ಸಾಲ ಮತ್ತು ಸಬ್ಸಿಡಿ | ಇಲ್ಲಿ ಅರ್ಜಿ ಸಲ್ಲಿಸಿ… Pradhan Mantri Awas Yojana 2024

Spread the love

Pradhan Mantri Awas Yojana 2024 : ದೇಶದ 3 ಕೋಟಿ ವಸತಿರಹಿತ ಬಡ ಕುಟುಂಬಗಳಿಗೆ ನಿಗದಿತ ಕಾಲಮಿತಿಯೊಳಗೆ ಮನೆ ವಿತರಿಸಲು ಕೇಂದ್ರ ಸಂಪುಟ ಸಭೆ ತೀರ್ಮಾನಿಸಿದೆ. ನಿನ್ನೆ ಜೂನ್ 10ರಂದು ನಡೆದ ‘ಮೋದಿ 3.0’ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ (Pradhan Mantri Awas Yojana-PMAY) ಅಡಿಯಲ್ಲಿ ಬರೋಬ್ಬರಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ.

WhatsApp Group Join Now
Telegram Group Join Now

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಸ್ವಂತ ಮನೆ ಹೊಂದುವ ಕನಸು ನೆರವೇರಿಸುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಫಲಾನುಭವಿಗಳಿಗೆ ಸಿಗುವ ಲಾಭಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಸೂರ್ಯ ಘರ್ ಯೋಜನೆಗೆ ಅಧಿಕೃತ ಚಾಲನೆ | ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024

ಏನಿದು ಪಿಎಂ ಆವಾಸ್ ಯೋಜನೆ?

ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಬ್ಬ ಬಡವರು ಸ್ವಂತ ಮನೆಯನ್ನು ಹೊಂದಬೇಕು ಎಂಬ ಉದ್ದೇಶದಿಂದ 2015ರ ಜೂನ್’ನಲ್ಲಿ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (PMAY) ಜಾರಿಗೆ ತಂದಿದೆ. ಬಡವರಿಗೆ ಸ್ವಂತ ಮನೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇದಕ್ಕೆ ಪೂರಕವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕಳೆದ ವರ್ಷ 2023-24ರಲ್ಲಿ ಸುಮಾರು 790 ಬಿಲಿಯನ್ ರೂಪಾಯಿ ಖರ್ಚು ಮಾಡಲಾಗಿದೆ. ಈ ವರ್ಷ 2024-25ರ ಸಾಲಿಗೆ ಈ ಅನುದಾನವನ್ನು ಶೇಕಡಾ 15ರಷ್ಟು ಹೆಚ್ಚಿಸಿದ್ದು; ಈ ಯೋಜನೆಗೆ ಸುಮಾರು 1013 ಬಿಲಿಯನ್ ರೂಪಾಯಿ ನಿಗದಿಪಡಿಸಲಾಗಿದೆ.

ಕರ್ನಾಟಕ ವಿದ್ಯಾಧನ್ : ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 75,000 ರೂಪಾಯಿ ಆರ್ಥಿಕ ನೆರವು | ಜೂನ್ 30ರೊಳಗೇ ಅರ್ಜಿ ಹಾಕಿ Karnataka Vidyadhan Scholarship

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ವಾಸಿಸಲು ಸ್ವಂತ ಮನೆಯ ಇಲ್ಲದ ಭಾರತದ ಪ್ರತಿಯೊಬ್ಬರೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮುನ್ನ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯಾವುದೇ ವಸತಿ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದಿರಬಾರದು.

ದೇಶದ ಮಹಿಳಾ ಫಲಾನಭವಿಗಳಿಗೆ ಪಿಎಂ ಆವಾಸ್ ಯೋಜನೆಯಲ್ಲಿ ಹೆಚ್ಚಿನ ಆದ್ಯತೆ ಇದೆ. ಅರ್ಜಿದಾರರ ವಾರ್ಷಿಕ ಆದಾಯವು EWS ವರ್ಗದವರಿಗೆ 6 ಲಕ್ಷದ ಒಳಗಿರಬೇಕು. LIG (Low Income Group) ವರ್ಗದವರಿಗೆ 6 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ ಒಳಗಿರಬೇಕು.

MIG I (Middle Income Group I) ವರ್ಗದ ಅಡಿಯಲ್ಲಿ ಬರುವಂತಹ ಫಲಾನುಭವಿಗಳ ವಾರ್ಷಿಕ ಆದಾಯವು 12 ಲಕ್ಷ ರೂಪಾಯಿಯಿಂದ 18 ಲಕ್ಷ ರೂಪಾಯಿ ಒಳಗಿರಬೇಕು. ಇನ್ನು MIG II (Middle Income Group) ವರ್ಗದ ಅಡಿಯಲ್ಲಿ ಬರುವಂತಹ ಫಲಾನುಭವಿಗಳ ವಾರ್ಷಿಕ ಆದಾಯವು 18 ಲಕ್ಷ ಮೇಲಿರಬಾರದು.

₹85.76 ಕೋಟಿ ಬೆಳೆ ವಿಮೆ ಬಿಡುಗಡೆ | ನಿಮ್ಮ ಖಾತೆಗೆ ಹಣ ಬಂತಾ? ಚೆಕ್ ಮಾಡಿಕೊಳ್ಳಿ… 85 crore Rupee Crop insurance Released

Pradhan Mantri Awas Yojana 2024
ಅರ್ಜಿ ಸಲ್ಲಿಸಲು ಏನೆಲ್ಲ ಬೇಕು?
  • ಅರ್ಜಿದಾರರ ಆಧಾರ್ ಕಾರ್ಡ್
  • ವಿಳಾಸ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆ ಪುಸ್ತಕ
  • ಪಾಸ್ಪೋರ್ಟ್ ಸೈಜ್ ಫೋಟೋ
ಹೇಗೆ ಅರ್ಜಿ ಸಲ್ಲಿಸಬೇಕು?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅರ್ಹ ಫಲಾನುಭವಿಗಳು ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ಜಾಲತಾಣದ ವೆಬ್‌ಸೈಟ್ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ.

ಇಲ್ಲಿ ನೀಡಿರುವ ಲಿಂಕ್ ಮೂಲಕ ಸ್ವತಃ ನೀವೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಆಗದಿದ್ದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಮೇಲೆ ತಿಳಿಸಿದ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಲಿಂಕ್ : https://pmaymis.gov.in/

ಕುರಿ-ಮೇಕೆ ಸಾಕಾಣಿಕೆಗೆ ಕುರಿ ನಿಗಮದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳು Karnataka Sheep and Goat Board facilities


Spread the love
WhatsApp Group Join Now
Telegram Group Join Now
error: Content is protected !!