ಆರ್‌ಬಿಐ ಸತತ ಮೂರನೇ ಬಾರಿಗೆ ರೆಪೋ ದರ ಇಳಿಕೆ (RBI Repo Rate Cut) ಮಾಡಿದೆ. ಇದರಿಂದ ಬ್ಯಾಂಕುಗಳಿಂದ ಪಡೆಯುವ ಎಲ್ಲಾ ರೀತಿಯ ಸಾಲಗಳು ಕಡಿಮೆ ಬಡ್ಡಿಗೆ ಸಿಗಲಿವೆ. ಈ ಕುರಿತ ಮಾಹಿತಿ ಇಲ್ಲಿದೆ…
ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಆರ್ಥಿಕತೆಗೆ ಮತ್ತಷ್ಟು ಚೈತನ್ಯ ನೀಡುವ ಉದ್ದೇಶದಿಂದ ರೆಪೋ ದರವನ್ನು ಶೇ.6.25ರಿಂದ ಶೇ.5.50ಕ್ಕೆ ಇಳಿಸಿದೆ. 50 ಬೇಸಿಸ್ ಪಾಯಿಂಟ್‌ಗಳ ಇಳಿಕೆ ಇದೇ ಮೊದಲಲ್ಲ – ಕಳೆದ ಫೆಬ್ರವರಿ ಹಾಗೂ ಏಪ್ರಿಲ್ 2025ರ ದ್ವೈಮಾಸಿಕ ಹಣಕಾಸು ನೀತಿ ಸಭೆಗಳಲ್ಲಿ ತಲಾ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿತ್ತು.
1 ಬೇಸಿಸ್ ಪಾಯಿಂಟ್ (BPS) ಎಂದರೆ ಶೇ.0.01. ಹೀಗಾಗಿ, 50 ಬಿಪಿಎಸ್ ಇಳಿಕೆ ಎಂದರೆ ಶೇ.0.50 ಇಳಿಕೆ. ಇದರಿಂದಲೇ ಬಡ್ಡಿದರ ಶೇ.6.25ರಿಂದ ಶೇ.5.75 ಅಥವಾ ಶೇ.5.50ಕ್ಕೆ ಇಳಿಯುತ್ತದೆ.
ಈ ಬಾರಿ, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನಿನ್ನೆ ಮೇ 6ರಂದು ಮಾಡಿದ ಘೋಷಣೆಯ ಪ್ರಕಾರ, ಈ ಕಡಿತದ ಪರಿಣಾಮವಾಗಿ ಎಲ್ಲಾ ರೀತಿಯ ಸಾಲಗಳ ಬಡ್ಡಿದರ ಇಳಿಕೆಯಾಗಲಿದ್ದು, ಜನ ಸಾಮಾನ್ಯರಿಗೆ ಪ್ರತಿ ತಿಂಗಳು EMI ಕಡಿಮೆ ಆಗಲಿದೆ.
ಬ್ಯಾಂಕುಗಳಿಗೆ ಹೆಚ್ಚುವರಿ ನಿಧಿ
ರಿಸರ್ವ್ ಬ್ಯಾಂಕ್ ಮತ್ತೊಂದು ಮಹತ್ವದ ನಿರ್ಧಾರವಾಗಿ ನಗದು ಮೀಸಲು ಅನುಪಾತವನ್ನು (CRR) ಶೇ.4ರಿಂದ ಶೇ.3ಕ್ಕೆ ಇಳಿಸುವ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಬ್ಯಾಂಕುಗಳಿಗೆ ಸುಮಾರು ₹2.5 ಲಕ್ಷ ಕೋಟಿ ಹೆಚ್ಚುವರಿ ನಿಧಿ ಸಿಗಲಿದೆ.
ಬ್ಯಾಂಕುಗಳು ಈ ಹಣವನ್ನು ಹೊಸ ಸಾಲ ವಿತರಣೆಗೆ ಬಳಸುವ ಸಾಧ್ಯತೆಯಿದೆ. ಡಿಸೆಂಬರ್ 2025ರ ಒಳಗೆ ನಾಲ್ಕು ಹಂತಗಳಲ್ಲಿ ಈ ಸಿಆರ್‌ಆರ್ ಇಳಿಕೆಯಾಗಲಿದೆ. ಇದು ಬ್ಯಾಂಕುಗಳ ಸಾಲ ವಿತರಣಾ ಸಾಮರ್ಥ್ಯವನ್ನು ಹೆಚ್ಚಿಸಿ ದೇಶದ ಹಣಕಾಸು ಹರಿವನ್ನು ಗಟ್ಟಿ ಮಾಡಲಿದೆ.

ಬಡ್ಡಿದರ ಇಳಿಕೆಯಿಂದ ಯಾರಿಗೆ ಏನು ಪ್ರಯೋಜನ?
ನೌಕರರು, ಸಂಬಳದಾರರು, ಈಗಾಗಲೇ ಸಾಲ ಪಡೆದು ಇಎಂಐ ಕಟ್ಟುತ್ತಿರುವವರಿಗೆ ಹಾಗೂ ಹೊಸದಾಗಿ ಸಾಲ ಪಡೆಯ ಬಯಸುವವರಿಗೆ ಇದರ ಪ್ರಯೋಜನ ಸಿಗಲಿದೆ. ವಿವಿಧ ರೀತಿಯ ಸಾಲಗಳಿಗೆ ಆಗುವ ಲಾಭಗಳು ಈ ಕೆಳಗಿನಂತಿವೆ:
ಗೃಹ ಸಾಲದವರು: 30 ವರ್ಷ ಅವಧಿಯ ₹50 ಲಕ್ಷ ಗೃಹಸಾಲದ ಇಎಂಐ ಶೇ.8.70 ಬಡ್ಡಿದರದಲ್ಲಿ ₹39,136 ಆಗಿದ್ದರೆ, ಶೇ.8.20 ಬಡ್ಡಿದರದಲ್ಲಿ ₹37,346ಗೆ ಇಳಿಯಲಿದೆ. ಪ್ರತಿ ತಿಂಗಳು ₹1,790 ಹಾಗೂ ವರ್ಷಕ್ಕೆ ₹21,840 ಉಳಿತಾಯ!
ವೈಯಕ್ತಿಕ ಸಾಲಗಾರರು: 5 ವರ್ಷ ಅವಧಿಯ ₹5 ಲಕ್ಷ ಸಾಲದ ಇಎಂಐ ₹11,122 ಇಂದ ₹10,963ಕ್ಕೆ ಇಳಿಯಲಿದೆ. ತಿಂಗಳಿಗೆ ₹159, ವರ್ಷಕ್ಕೆ ₹1,908 ಉಳಿತಾಯ!
ವ್ಯವಹಾರಿಕ ಸಾಲ, ಶಿಕ್ಷಣ ಸಾಲ, ವಾಹನ ಸಾಲ: ಎಲ್ಲ ಸಾಲಗಳ ಬಡ್ಡಿದರದಲ್ಲಿ ಇಳಿಕೆ ಕಂಡುಬಂದರೆ, ಇವುಗಳ Monthly Installments ಕೂಡ ಇಳಿಯುವ ಸಾಧ್ಯತೆ ಇದೆ.
ಬ್ಯಾಂಕುಗಳಿಗೆ ಲಾಭವೇನು?
- ಸಿಆರ್‌ಆರ್ (CRR) ಕಡಿತದಿಂದ ಹೆಚ್ಚಿನ ಹಣ ಲಭ್ಯವಾಗುವುದು.
- ಸಾಲ ವಿತರಣೆಯಲ್ಲಿ ಸ್ಪರ್ಧಾತ್ಮಕ ಬಡ್ಡಿದರ ನೀಡುವ ಸಾಧ್ಯತೆ.
- ಹೆಚ್ಚು ಗ್ರಾಹಕರನ್ನು ಸೆಳೆಯುವ ಅವಕಾಶ.
ಇನ್ನು ಸುಲಭದಲ್ಲಿ ಸಿಗಲಿದೆ ಸಾಲ…
ಈ ಪ್ರಕ್ರಿಯೆಯಿಂದ ದೇಶದ ಆರ್ಥಿಕತೆಗೆ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ಹೆಚ್ಚುವರಿ ಹಣ ಮಾರುಕಟ್ಟೆಗೆ ಬರುವುದರಿಂದ ಖರೀದಿ ಶಕ್ತಿ (Purchasing Power) ಹೆಚ್ಚುತ್ತದೆ.
ಲಘು, ಕಿರಿಯ, ಮಧ್ಯಮ ಉದ್ಯಮಗಳಿಗೆ ಸಾಲ ಪಡೆಯಲು ಸುಲಭವಾಗುತ್ತದೆ. ಉದ್ಯೋಗಾವಕಾಶ ಹಾಗೂ ಉತ್ಪಾದನೆ ಹೆಚ್ಚು ಆಗುವ ಸಾಧ್ಯತೆ ಇದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತವೆ.
ಆರ್‌ಬಿಐ ತೆಗೆದುಕೊಂಡ ಈ ಪ್ರಮುಖ ಹಣಕಾಸು ತೀರ್ಮಾನಗಳು ದೇಶದ ಆರ್ಥಿಕತೆ, ಬ್ಯಾಂಕುಗಳು ಮತ್ತು ಗ್ರಾಹಕರ ನಡುವಿನ ಸಂಬಂಧವನ್ನು ಮತ್ತಷ್ಟು ಸುಧಾರಿಸಲಿವೆ. ಗೃಹ ಸಾಲ, ವೈಯಕ್ತಿಕ ಸಾಲ, ವ್ಯವಹಾರಿಕ ಸಾಲ ಪಡೆಯುವ ಯೋಜನೆಯಲ್ಲಿ ಇರುವವರು ವ್ಯವಸ್ಥಿತ ಪ್ಲಾನ್ ಮಾಡಿಕೊಂಡರೆ ಹೆಚ್ಚು ಲಾಭ ಪಡೆಯಬಹುದಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.