Guarantee Scheme Verification- ಜುಲೈ 2025ರಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆ ಬಂದ್ | ಗೃಹಲಕ್ಷ್ಮಿ, ಗೃಹಜ್ಯೋತಿ ನೆರವಿಗೆ ಕುತ್ತು

ಗ್ಯಾರಟಿ ಯೋಜನೆಗಳ ಸೋರಿಕೆ ತಡೆಯಲು ರಾಜ್ಯ ಸರ್ಕಾರ ಇದೇ ಜುಲೈನಿಂದ ಅನರ್ಹರರ ಶುದ್ಧಿಕರಣ ಕಾರ್ಯಕ್ಕೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಹಿತಿ ಇಲ್ಲಿದೆ…
ರಾಜ್ಯ ಸರ್ಕಾರದ ಐದು ಮಹತ್ವದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿವೆ. ಆದರೆ, ಇತ್ತೀಚೆಗೆ ಅನರ್ಹ ಫಲಾನುಭವಿಗಳು ಕೂಡ ಈ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜುಲೈ 2025ರಿಂದ ಹೊಸ ನಿಯಮಾವಳಿ ಜಾರಿಗೆ ತರಲು ತೀರ್ಮಾನಿಸಿದೆ.
ಅನರ್ಹ ಫಲಾನುಭವಿಗಳ ವಿರುದ್ಧ ಕಾರ್ಯಾಚರಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಈ ವಿಷಯದ ಕುರಿತು ಸ್ಪಷ್ಟನೆ ನೀಡಿ, ‘ಅನರ್ಹ ವ್ಯಕ್ತಿಗಳಿಗೂ ಯೋಜನೆಗಳ ಲಾಭ ತಲುಪುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಮುಂದಿನ ತಿಂಗಳಿಂದ ಈ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೃಢ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ರಾಯರೆಡ್ಡಿ ಅವರ ಪ್ರಕಾರ, ಮನೆ ಬಾಡಿಗೆದಾರರೂ ‘ಗೃಹಜ್ಯೋತಿ’ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಜಿಎಸ್‌ಟಿ ಅಥವಾ ಇತರೆ ವಾಣಿಜ್ಯ ತೆರಿಗೆ ಪಾವತಿಸುತ್ತಿರುವ ಕುಟುಂಬಗಳು ಸಹ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಡೆದಿದ್ದಾರೆ ಎಂಬ ದೂರುಗಳಿವೆ.

ಡೇಟಾ ಶುದ್ಧೀಕರಣ ಮತ್ತು ಡಿಜಿಟಲ್ ತಪಾಸಣೆ
ಅನರ್ಹರ ಪತ್ತೆಗೆ ಸಂಬಂಧಿಸಿದಂತೆ ಸರ್ಕಾರ ಇದೀಗ ರಾಜ್ಯಾದ್ಯಂತ ಡಿಜಿಟಲ್ ವೆರಿಫಿಕೇಶನ್ ಪ್ರಕ್ರಿಯೆ ಆರಂಭಿಸಿದೆ. ಪಡಿತರ ಕಾರ್ಡ್ಗಳ, ಆಧಾರ್ ಲಿಂಕ್‌ಗಳ, ಬ್ಯಾಂಕ್ ಖಾತೆಗಳ ಡೇಟಾವನ್ನು ಸಮನ್ವಯಗೊಳಿಸಿ ತಪಾಸಣೆ ಮಾಡಲಾಗುತ್ತಿದೆ. ರಾಜ್ಯ ಮಟ್ಟದ ಡೇಟಾ ಶುದ್ಧೀಕರಣ ಅಭಿಯಾನ ಹೀಗಿದೆ:
- ಬಡವರ ಪಡಿತರ ಕಾರ್ಡ್’ಗಳನ್ನು ವಾಸ್ತವಕ್ಕೆ ತಂದು ಹೊಸ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ.
- ಶಕ್ತಿ ಯೋಜನೆಯ ಪ್ರಯಾಣಿಕ ಮಾಹಿತಿಯನ್ನು KSRTC ಮೂಲಕ ಸ್ಕ್ಯಾನ್ ಮಾಡುವುದು.
- ಗೃಹಲಕ್ಷ್ಮಿಗೆ ಅರ್ಹ ಮಹಿಳೆಯರು ಐಟಿ ತೆರಿಗೆ ಪಾವತಿಸುತ್ತಿಲ್ಲ ಎಂಬ ದೃಢೀಕರಣ.
- ಗೃಹಜ್ಯೋತಿಯ ವಿದ್ಯುತ್ ಖಾತೆಗಳನ್ನು ಮನೆ ಮಾಲೀಕರು ಬಳಸುತ್ತಿರುವ ಬಗ್ಗೆ ದಾಖಲೆ ಪರಿಶೀಲನೆ.
ಅನ್ನಭಾಗ್ಯ ಯೋಜನೆ ಬದಲಾವಣೆ
ಅನ್ನಭಾಗ್ಯ ಯೋಜನೆಯಡಿ ಇದೀಗ 5 ಕೆ.ಜಿ ಅಕ್ಕಿ ಮತ್ತು ₹100 ನಗದು ಪಡಿತರ ರೂಪದಲ್ಲಿ ಲಭ್ಯವಾಗುತ್ತಿದೆ. ಆದರೆ ಇದು ಕೆಲವೊಮ್ಮೆ ವ್ಯಾಪಾರಿಗಳ ಕೈಯಲ್ಲಿ ದುರುಪಯೋಗವಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ತೊಗರಿ ಬೇಳೆ, ಸಕ್ಕರೆ, ಕೊಬ್ಬರಿ ಎಣ್ಣೆ ಮೊದಲಾದ ಆಹಾರ ಕಿಟ್‌ಗಳನ್ನು ನೀಡುವ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಬಸವರಾಜ ರಾಯರೆಡ್ಡಿ ಈ ಕುರಿತು ‘ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡುವ ಬದಲು, ಅಗತ್ಯ ಆಹಾರ ಸಾಮಗ್ರಿಗಳ ಪೂರೈಕೆಯಿಂದ ಫಲಾನುಭವಿಗಳಿಗೆ ಉತ್ತಮ ಪೋಷಕಾಂಶ ದೊರಕಿಸಬಹುದು’ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ₹65,000 ಕೋಟಿ ವೆಚ್ಚ
ರಾಜ್ಯ ಸರ್ಕಾರದ ಈ ಐದು ಯೋಜನೆಗಳಿಗೆ ಪ್ರತಿ ವರ್ಷ ಸರಾಸರಿ ₹65,000 ಕೋಟಿ ವೆಚ್ಚವಾಗುತ್ತಿದೆ. ರಾಜ್ಯ ಸರ್ಕಾರ ನೀಡಿದ ಯೋಜನೆಗಳ ಪ್ರಸ್ತುತ ಅಂಕಿ-ಅAಶಗಳು ಹೀಗಿವೆ:
- ಅನ್ನಭಾಗ್ಯ: 4.10 ಕೋಟಿ ಜನ ಫಲಾನುಭವಿಗಳಿಗೆ ₹1,000 ಕೋಟಿ (ಅಂದಾಜು)
- ಗೃಹಲಕ್ಷ್ಮಿ: 1.29 ಕೋಟಿ ಮಹಿಳೆಯರಿಗೆ ₹2,500 ಕೋಟಿ
- ಶಕ್ತಿ ಯೋಜನೆ: ಪ್ರತಿದಿನ 62 ಲಕ್ಷ ಮಹಿಳೆಯರ ಪ್ರಯಾಣಕ್ಕೆ ಪ್ರತೀ ತಿಂಗಳು ₹600-800 ಕೋಟಿ
- ಗೃಹಜ್ಯೋತಿ ಯೋಜನೆ: 1.24 ಕೋಟಿ ಕುಟುಂಬಗಳಿಗೆ ₹1,200 ಕೋಟಿ
ಒಟ್ಟಾರೆ, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ ₹250 ಕೋಟಿ ವೆಚ್ಚದ ಸರ್ಕಾರಿ ಸೌಲಭ್ಯಗಳು ತಲುಪುತ್ತಿವೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶದಾದ್ಯಂತ ಗಮನ ಸೆಳೆದಿವೆ. ಬಡವರಿಗೆ ಬೆಂಬಲ ನೀಡುವ ದೃಷ್ಟಿಯಿಂದ ಉತ್ತಮ ಉದ್ದೇಶದಿಂದ ರೂಪಗೊಂಡ ಈ ಯೋಜನೆಗಳು, ಅನರ್ಹ ಫಲಾನುಭವಿಗಳ ದುರುಪಯೋಗದಿಂದ ಮೂಲ ಉದ್ದೇಶವೇ ಹಳ್ಳ ಹಿಡಿಯುತ್ತಿದೆ. ಈ ಹಿನ್ನಲೆಯಲ್ಲಿ ಜುಲೈ 2025ರಿಂದ ನಡೆಯಲಿರುವ ಅನರ್ಹರÀ ಶುದ್ಧಿಕರಣ ಕಾರ್ಯ ಎಷ್ಟರ ಮಟ್ಟಿಗೆ ಸಫಲವಾಗುವುದೋ ನೋಡಬೇಕು.
e-Swathu Property Details- ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ