ರಾಜ್ಯ ಸರ್ಕಾರ ಪಂಚಮಿತ್ರ ವಾಟ್ಸಾಪ್ ಚಾಟ್ (Panchamitra WhatsApp Chat) ಸೇವೆ ಆರಂಭಿಸಿದ್ದು; ವಾಟ್ಸಾಪ್ ಮೂಲಕವೇ ಗ್ರಾಮ ಪಂಚಾಯತಿ ಸೇವೆಗಳನ್ನು (Grama panchayat Service) ಪಡೆಯಬಹುದಾಗಿದೆ…
ಗ್ರಾಮೀಣ ಭಾಗದ ಜನತೆಗೆ ವಿವಿಧ ಸರ್ಕಾರಿ ಸೇವೆಗಳಿಗಾಗಿ ಗ್ರಾಮ ಪಂಚಾಯತಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಕೆ ಅಥವಾ ದೂರು ನೀಡುವಂತಹ ವ್ಯವಸ್ಥೆ ಇತ್ತು. ಆದರೆ, ಈಗ ಎಲ್ಲ ಸೇವೆಗಳನ್ನು ನೇರವಾಗಿ ವಾಟ್ಸಾಪ್‌ನಲ್ಲಿ ಪಡೆಯಬಹುದಾಗಿದೆ. ರಾಜ್ಯ ಸರ್ಕಾರ ಇದಕ್ಕಾಗಿ ಪಂಚಮಿತ್ರ ವಾಟ್ಸಾಪ್ ಚಾಟ್ ಸೇವೆ ಆರಂಭಿಸಿದೆ.
‘ಪಂಚಮಿತ್ರ’ ಎನ್ನುವುದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನವೀನ ಡಿಜಿಟಲ್ ಚಾಟ್‌ಬಾಟ್ ವ್ಯವಸ್ಥೆಯಾಗಿದೆ. ಇದರ ಮೂಲಕ ಜನರು ಕಚೇರಿಗೆ ತೆರಳದೆ, ವಾಟ್ಸಾಪ್ ಮೂಲಕ ನೇರವಾಗಿ ತಮ್ಮ ಕುಂದು-ಕೊರತೆಗಳನ್ನು, ಅರ್ಜಿಗಳನ್ನು, ಸೇವಾ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಕುಳಿತಲ್ಲೇ ಪಡೆಯಿರಿ ನೂರಾರು ಸೇವೆಗಳು
82775 06000 ಈ ವಾಟ್ಸಾಪ್ ಸಂಖ್ಯೆಗೆ ಕೇವಲ ‘ಹಾಯ್’ ಎಂಬ ಸಂದೇಶ ಕಳುಹಿಸಿದರೆ ಸಾಕು, ನಂತರದ ನೀವು ಕೇಳಿದ ಎಲ್ಲಾ ಸೇವೆಗಳು ನಿಮ್ಮ ಮೊಬೈಲ್‌ನಲ್ಲಿ ಲಭ್ಯವಾಗುತ್ತವೆ. ಪಂಚಮಿತ್ರ ಸೇವೆ ಮೂಲಕ ಸಾರ್ವಜನಿಕರಿಗೆ ತಮ್ಮ ಅಹವಾಲುಗಳನ್ನು ಸುರಕ್ಷಿತವಾಗಿ ಹಾಗೂ ಗೌಪ್ಯವಾಗಿ ಸಲ್ಲಿಸಲು ಕೂಡ ಅವಕಾಶವಿದೆ.
ಗ್ರಾಮೀಣ ಜನತೆಗೆ 8277506000 ದೂರವಾಣಿ ಸಹಾಯವಾಣಿಯ ಮೂಲಕವೂ ಸಹ ಸೇವೆ ಪಡೆಯಬಹುದಾಗಿದೆ. ವಾಟ್ಸಾಪ್ ಹಾಗೂ ಕರೆ ಮೂಲಕ ಅಹವಾಲು ಅಥವಾ ಸೇವೆಗಳನ್ನು ಪಡೆಯಬಹುದು.
ಪಂಚಮಿತ್ರ ವಾಟ್ಸಾಪ್ ಚಾಟ್ ಪ್ರಮುಖ ಸೇವೆಗಳ ಪಟ್ಟಿ
ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ 17 ಪ್ರಮುಖ ಸೇವೆಗಳು, ಇತರೆ ಇಲಾಖೆಗಳ 72 ಸೇವೆಗಳು ಸೇರಿ ಒಟ್ಟು 89ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ವಾಟ್ಸಾಪ್‌ನಲ್ಲಿ ಸಿಗುತ್ತವೆ. ಪಂಚಮಿತ್ರ ವಾಟ್ಸಾಪ್ ಚಾಟ್ ಮೂಲಕ ದೊರೆಯುವ ಪ್ರಮುಖ ಸೇವೆಗಳ ಪಟ್ಟಿ ಈ ಕೆಳಗಿನಂತಿವೆ:
- ಕಟ್ಟಡ ನಿರ್ಮಾಣ ಪರವಾನಗಿ
- ಹೊಸ ನೀರು ಸಂಪರ್ಕ / ಸಂಪರ್ಕ ಕಡಿತ ಸಮಸ್ಯೆ ಪರಿಹಾರ
- ಬೀದಿ ದೀಪ ದುರಸ್ತಿ
- ಗ್ರಾಮ ನೈರ್ಮಲ್ಯ ನಿರ್ವಹಣೆ
- ಉದ್ದಿಮೆ ಪರವಾನಗಿ
- ಸ್ವಾಧೀನ ಪ್ರಮಾಣ ಪತ್ರ
- ನರೇಗಾ ಯೋಜನೆಯ ಜಾಬ್ ಕಾರ್ಡ್ ವಿತರಣೆ
- ಕೈಗಾರಿಕೆ/ ಕೃಷಿ ಆಧಾರಿತ ಘಟಕಗಳ ಅನುಮತಿ
- ದೂರಸಂಪರ್ಕ ಗೋಪುರ ಅಥವಾ ಕೇಬಲ್ ಸಂಪರ್ಕ ಅನುಮತಿ
- ನಮೂನೆ 9/11ಎ, 11ಬಿ ಪತ್ರಗಳು
- ರಸ್ತೆ ಅಗೆತಕ್ಕೆ ಅನುಮತಿ ಪತ್ರ
KCET 2025 Result- ಕೆಸಿಇಟಿ ಫಲಿತಾಂಶ ಮೇ 21ಕ್ಕೆ ನಿರ್ಧಾರ | ಈ ವಾರದಲ್ಲೇ ರಿಸಲ್ಟ್ ಪ್ರಕಟ

ಹೆಚ್ಚುವರಿ ಮಾಹಿತಿಗಳು
ಪಂಚಮಿತ್ರ ವಾಟ್ಸಾಪ್ ಸೇವೆ ಮೇಲ್ಕಾಣಿಸಿದ ಪ್ರಮುಖ ಸೇವೆಗಳು ಮಾತ್ರವಲ್ಲದೇ ನಿಮಗೆ ಈ ಕೆಳಗಿನ ಮಾಹಿತಿಯನ್ನೂ ನೀಡುತ್ತದೆ:
- ಗ್ರಾಮ ಪಂಚಾಯತ್ ಸದಸ್ಯರ ಮಾಹಿತಿ
- ಸಿಬ್ಬಂದಿಯ ವಿವರಗಳು
- ಪೂರ್ತಿಯಾದ ಹಾಗೂ ಮುಂಬರುವ ಗ್ರಾಮ ಸಭೆಗಳ ಮಾಹಿತಿ
- ಗ್ರಾಮದ ಆದಾಯ-ವೆಚ್ಚದ ವಿವರಗಳು
- ಸ್ವ ಸಹಾಯ ಗುಂಪುಗಳ ನೊಂದಣಿ ಮಾಹಿತಿಗಳು
- ಪಂಚಾಯಿತಿ ಮಟ್ಟದ ಯೋಜನೆಗಳ ಪ್ರಗತಿ ವರದಿ
ಅಹವಾಲು ಸಲ್ಲಿಕೆ ಮತ್ತು ದೂರು ಗೌಪ್ಯತೆ
ಹಳ್ಳಿಗಳಲ್ಲಿ ದೂರು ನೀಡುವುದು ಎಂದರೆ ಕೆಲವೊಮ್ಮೆ ಬಹಳಷ್ಟು ಧೈರ್ಯ ಬೇಕಾಗುತ್ತದೆ. ಸಮಸ್ಯೆ ಬಗೆಹರಿಯುವುದಕ್ಕಿಂತ, ದ್ವೇಷ ಮತ್ತು ರಾಜಕೀಯ ಮತ್ಸರಕ್ಕೆ ಕಾರಣವಾಗಬಹುದು. ಆದರೆ ಪಂಚಮಿತ್ರ ವಾಟ್ಸಾಪ್ ಚಾಟ್ ಈ ಸಮಸ್ಯೆಗಳಿಗೆ ಸುಧಾರಿತ ಪರಿಹಾರವಾಗಿದೆ.
ದೂರುದಾರರ ಹೆಸರು ಅಥವಾ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಯಾವುದೇ ರಾಜಕೀಯ ಅಥವಾ ವ್ಯಕ್ತಿಗತ ಪ್ರಭಾವವಿಲ್ಲದೆ ನೀವು ಬಯಸಿದ ಸೇವೆ ಸಿಗುತ್ತದೆ. ತಪಾಸಣಾ ಸಂಖ್ಯೆಯ ಮೂಲಕ ಮುಂದಿನ ಪ್ರಗತಿ ಮಾಹಿತಿ ಪಡೆಯಬಹುದು.
Atal Pension Yojana- ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ…
ವಾಟ್ಸಾಪ್ ಮೂಲಕ ಸೇವೆ ಪಡೆಯುವುದು ಹೇಗೆ?
- ಹಂತ 1: ವಾಟ್ಸಾಪ್‌ನಲ್ಲಿ 8277506000 ಗೆ ‘ಹಾಯ್’ ಎಂದು ಸಂದೇಶ ಕಳುಹಿಸಿ
- ಹಂತ 2: ಭಾಷೆ ಆಯ್ಕೆ (ಕನ್ನಡ / ಇಂಗ್ಲಿಷ್) ಮಾಡಿ
- ಹಂತ 3: ಜಿಲ್ಲೆ → ತಾಲ್ಲೂಕು → ಗ್ರಾಮ ಪಂಚಾಯತಿ ಸಂಖ್ಯೆಯನ್ನು ನಮೂದಿಸಿ
- ಹಂತ 4: ಬೇಕಾದ ಸೇವೆ ಅಥವಾ ಅಹವಾಲು ಆಯ್ಕೆ ಮಾಡಿ, ವಿವರ ನೀಡಿ
- ಹಂತ 5: ಈಗ ನಿಮಗೆ ಬೇಕಿರುವ ಮಾಹಿತಿ, ಕುಂದುಕೊರತೆ ಅಥವಾ ಸೇವೆಗಳ ಮಾಹಿತಿ ಸಿಗಲಿದೆ
ಗ್ರಾಮೀಣ ಆಡಳಿತಕ್ಕೆ ಡಿಜಿಟಲ್ ಸ್ಪರ್ಶ
ಇದು ಕೇವಲ ಸೇವೆ ನೀಡುವ ವ್ಯವಸ್ಥೆಯಲ್ಲದೇ, ಇದು ಜನತಾ ಆಡಳಿತವನ್ನು ಬಲವರ್ಧನೆ ಮಾಡುವ ಡಿಜಿಟಲ್ ಮಾರ್ಗವಾಗಿದೆ. ರಾಜ್ಯದ 5,991 ಗ್ರಾಮ ಪಂಚಾಯತಿಗಳಲ್ಲಿ ಈ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರ ಸೇವೆಗಳನ್ನು ಸೇರಿಸಿ ಈ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಯೋಜಿಸುತ್ತಿದೆ.
‘ಪಂಚಮಿತ್ರ ವಾಟ್ಸಾಪ್ ಚಾಟ್’ ಎಂಬ ಸೇವೆ ಹಳ್ಳಿಯ ಜನತೆಗೆ ಕಚೇರಿಯನ್ನು ತಲುಪದೆ ಕುಳಿತಲ್ಲೇ ತಮ್ಮ ಹಕ್ಕುಗಳನ್ನು ಪಡೆಯುವ ಬಾಗಿಲು ತೆರೆದಿದೆ. ಇದು ಸುಧಾರಿತ ಆಡಳಿತದ ದಿಕ್ಕಿಗೆ ನಾಯಕತ್ವ ನೀಡುವ ಪ್ರಯತ್ನವಾಗಿದೆ. ಹಳ್ಳಿಯ ಪ್ರತಿಯೊಬ್ಬ ನಿವಾಸಿಯೂ ಈ ಡಿಜಿಟಲ್ ಸೇವೆಯ ಸದುಪಯೋಗ ಪಡೆದು, ಅಗತ್ಯ ಸೇವೆಗಳನ್ನು ನೇರವಾಗಿ ಪಡೆದುಕೊಳ್ಳಬೇಕು…