KCET 2025 Result Date- ಕೆಸಿಇಟಿ 2025 ಫಲಿತಾಂಶ ಶೀಘ್ರ ಬಿಡುಗಡೆ | ವಿದ್ಯಾರ್ಥಿಗಳಿಗೆ KEA ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

Spread the love

ಸಿಇಟಿ ರಿಸಲ್ಟ್ (KCET 2025 Result) ಯಾವಾಗ? ಎಂದು ಕಾದು ಕೂತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority- KEA) ಮಹತ್ವದ ಮಾಹಿತಿ ನೀಡಿದ್ದು; ಈ ಕುರಿತ ವಿವರ ಇಲ್ಲಿದೆ…

WhatsApp Group Join Now
Telegram Group Join Now

2025ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಈಗ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಶೀಘ್ರದಲ್ಲಿ ಫಲಿತಾಂಶ ಪ್ರಕಟಿಸಲು ಸಜ್ಜಾಗಿರುವ ಬಗ್ಗೆ ಮಹತ್ವದ ಮಾಹಿತಿ ಹೊರಡಿಸಿದೆ.

ಸಿಇಟಿ ಫಲಿತಾಂಶ ಹೆಚ್ಚಿದ ಕೌತುಕ

ಕೆಸಿಇಟಿ ಪರೀಕ್ಷೆ ಮೂಲಕ ಎಂಜಿನಿಯರಿಂಗ್, ಆಯುಷ್, ಫಾರ್ಮಸಿ, ಕೃಷಿ ಮತ್ತು ಇತರ ವೃತ್ತಿಪರ ಪದವಿ ಕೋರ್ಸ್’ಗಳಿಗೆ ಪ್ರವೇಶ ನೀಡಲಾಗುತ್ತದೆ. ಈ ಬಾರಿ ಏಪ್ರಿಲ್ 16 ಮತ್ತು 17, 2025ರಂದು ನಡೆದ ಸಿಇಟಿ ಪರೀಕ್ಷೆಗೆ ರಾಜ್ಯದಾದ್ಯಂತ ಹಾಗೂ ಹೊರ ರಾಜ್ಯಗಳಿಂದ ಕೂಡ ಸುಮಾರು 3.30 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ಈ ವೇಳೆ ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಾರೀ ಕುತೂಹಲವಿದೆ. ಹಲವು ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಯೋಜನೆಗಳನ್ನು ರೂಪಿಸಿಕೊಳ್ಳಲು ಈ ಫಲಿತಾಂಶದ ನಿರೀಕ್ಷೆಯಲ್ಲಿ ನಿತ್ಯವಾಗಿ ಅಧಿಕೃತ ವೆಬ್‌ಸೈಟ್ ಪರಿಶೀಲಿಸುತ್ತಿದ್ದಾರೆ.

HDFC Bank Loan- ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಮೇ 07ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ಹೊಸ ಬಡ್ಡಿದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಹತ್ವದ ಮಾಹಿತಿ

ಮೇ 16 ರಂದು ಕರ್ನಾಟಕ 2ನೇ ಪಿಯುಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಕೆಸಿಇಟಿ ಫಲಿತಾಂಶ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸದ್ಯದ ವರೆಗೆ ಕೃಷಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ನಮಗೆ ಲಭ್ಯವಾಗಿಲ್ಲ. ಜೊತೆಗೆ ಕೇರಳದ ಪಿಯುಸಿ ಫಲಿತಾಂಶ ಇನ್ನೂ ಪ್ರಕಟವಾಗಬೇಕಿದೆ. ಅಲ್ಲಿಂದ ಸುಮಾರು 2,000 ವಿದ್ಯಾರ್ಥಿಗಳು ನಮ್ಮ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಆ ಫಲಿತಾಂಶಗಳು ನಮಗೆ ಲಭ್ಯವಾದ 4-5 ದಿನಗಳಲ್ಲಿ ಸಿಇಟಿ ಫಲಿತಾಂಶವನ್ನು ನಾವು ಪ್ರಕಟಿಸಲಾಗುವುದು ಎಂದಿದ್ದಾರೆ.

ಸಿಇಟಿ ರಿಸಲ್ಟ್ ಯಾವಾಗ? ಎಂದು ಕಾದು ಕೂತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಹತ್ವದ ಮಾಹಿತಿ ನೀಡಿದ್ದು; ಈ ಕುರಿತ ವಿವರ ಇಲ್ಲಿದೆ...
KCET 2025 Result Date and Important Info
ಸಿಇಟಿ ರಿಸಲ್ಟ್ ಬಿಡುಗಡೆ ಯಾವಾಗ?

ಇತ್ತೀಚಿನ ವರ್ಷಗಳಲ್ಲಿ ಸಿಇಟಿ ಫಲಿತಾಂಶ ಈ ಕೆಳಗಿನ ದಿನಾಂಕಗಳಲ್ಲಿ ಪ್ರಕಟಿಸಲಾಗಿತ್ತು:

  • 2024: ಮೇ 20
  • 2023: ಜೂನ್ 15
  • 2022: ಜುಲೈ 30

ಈ ಮಾಹಿತಿಯ ಪ್ರಕಾರ, 2025ರ ಫಲಿತಾಂಶವೂ ಮೇ 20 ಅಥವಾ ಅದಕ್ಕೂ ನಂತರದಲ್ಲಿ ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ.

E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ

ಫಲಿತಾಂಶ ಪ್ರಕಟಗೊಂಡ ನಂತರದ ಹಂತಗಳು

KCET ಫಲಿತಾಂಶ ಪ್ರಕಟಗೊಂಡ ನಂತರ, ವಿದ್ಯಾರ್ಥಿಗಳು ತಮ್ಮ ಯೋಜನೆಯ ಕೋರ್ಸ್’ಗಳಿಗೆ ಸ್ಪರ್ಧೆ ನಡೆಸಲು ಮೆರಿಟ್ ರ‍್ಯಾಂಕಿಂಗ್ (Merit Rank), ಕೌನ್ಸೆಲಿಂಗ್ ಪಟ್ಟಿ ಪ್ರಕಟಣೆ, ಆನ್ಲೈನ್ ಆಯ್ಕೆ ಪ್ರಕ್ರಿಯೆ (Option Entry) ಹಾಗೂ ಡಾಕ್ಯುಮೆಂಟ್ ತಪಾಸಣೆ ಮತ್ತು ಹಾಜರಾತಿ ದೃಢೀಕರಣ ಹಂತಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಈಗಿನಿಂದಲೇ ಸಿದ್ಧಪಡಿಸಿಟ್ಟುಕೊಳ್ಳುವುದು ಉತ್ತಮ.

ಫಲಿತಾಂಶವನ್ನು ಪರಿಶೀಲಿಸುವ ವಿಧಾನ
  • ಕೆಸಿಇಟಿ ಫಲಿತಾಂಶವನ್ನು ನೋಡಲು KEA ಅಧಿಕೃತ ವೆಬ್‌ಸೈಟ್ cetonline.karnataka.gov.in/keaಗೆ ಭೇಟಿ ನೀಡಿ.
  • UGCET 2025 RESULT ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ Register Number ಮತ್ತು Date of Birth ನಮೂದಿಸಿ.
  • Submit ಕ್ಲಿಕ್ ಮಾಡಿದ ಮೇಲೆ, ನಿಮ್ಮ ವೈಯಕ್ತಿಕ ಫಲಿತಾಂಶ ಪ್ರದರ್ಶಿತವಾಗುತ್ತದೆ.
  • ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Canara Bank Loan- ಕೆನರಾ ಬ್ಯಾಂಕ್‌ನಲ್ಲಿ ಮೇ 12ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ವಾಹನ ಹಾಗೂ ವೈಯಕ್ತಿಕ ಸಾಲ ಪಡೆಯುವವರಿಗೆ ಸುವರ್ಣಾವಕಾಶ

ಈಗಿಂದಲೇ ತಯಾರಿ ನಡೆಸಿ…

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂಬ ವಿಷಯ ಈಗ ಸ್ಪಷ್ಟವಾಗಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಹೆಚ್ಚಿನ ಸಮಯವನ್ನು ತಯಾರಿ, ಡಾಕ್ಯುಮೆಂಟ್ ಸಿದ್ಧತೆ ಮತ್ತು ಆಯ್ಕೆ ಪ್ರಕ್ರಿಯೆಗೆ ಮೀಸಲಿಡಬೇಕು.

ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಣೆಗೆ ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ. ಸಿಇಟಿ ಫಲಿತಾಂಶ ಪ್ರಕಟಣೆಯ ಬಗ್ಗೆ ನಿಖರ ಮಾಹಿತಿ ಪಡೆಯಲು ಕೆಇಎ ವೆಬ್‌ಸೈಟ್ ವೀಕ್ಷಿಸಿ. ಸಿಇಟಿ ಫಲಿತಾಂಶ ಪ್ರಕಟಣೆಯ ತಕ್ಷಣದ ನಿಖರ ಮಾಹಿತಿ ಹಾಗೂ ಮುಂದಿನ ಹಂತಗಳ ಬಗ್ಗೆ ತಿಳಿಯಲು ನಮ್ಮ mahitimane.com ವೆಬ್‌ಸೈಟ್ ಫಾಲೋ ಮಾಡಿ.

Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!