ಕುರಿ-ಮೇಕೆ ಸಾಕಾಣಿಕೆಗೆ ಕುರಿ ನಿಗಮದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳು Karnataka Sheep and Goat Board facilities

Spread the love

Karnataka Sheep and Goat Board facilities : ಇತ್ತೀಚಿನ ದಿನಗಳಲ್ಲಿ ಕುರಿ ಮತ್ತು ಮೇಕೆ ಮಾಂಸದ ಬೇಡಿಕೆಗೆ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನೂ ಉತ್ತೇಜಿಸುವ ಹಿನ್ನಲೆಯಲ್ಲಿ ಸರಕಾರ ಕುರಿಗಾರರನ್ನು ಉತ್ತೇಜಿಸಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದ (Karnataka Sheep and Wool Development Corporation) ಮೂಲಕ ಹಲವಾರು ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಕುರಿ ನಿಗಮದಿಂದ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಇಲ್ಲಿದೆ…

ನಿಗಮದಲ್ಲಿ ಸಿಗುವ ಸೌಲಭ್ಯಗಳು
  • ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು.
  • ‘ಕುರಿ-ಮೇಕೆ ಸೊಸೈಟಿ’ (Sheep and Wool Producers Cooperative Society) ಸ್ಥಾಪಿಸಲು ನಿಗಮವು ಪ್ರೋತ್ಸಾಹಿಸುತ್ತ ಬಂದಿದ್ದು; ಈಗಾಗಲೇ ರಚನೆಯಾಗಿ ಅನುಮೋದನೆಗೊಂಡ ಸಂಘಗಳಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದು. ಮಾತ್ರವಲ್ಲ ಸಂಘದಲ್ಲಿ ಸದಸ್ಯತ್ವ ಪಡೆಯುವ ಮೂಲಕ ಅನೇಕ ಯೋಜನೆಗಳ ಲಾಭವನ್ನು ಕುರಿ-ಮೇಕೆ ಸಾಕಾಣಿಕೆದಾರರು ನೇರವಾಗಿ ಪಡೆಯಬಹುದು.
  • ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬದವರನ್ನು ಆರ್ಥಿಕ ಸಂಕಷ್ಟದಿ೦ದ ಪಾರು ಮಾಡಲು ಕುರಿಗಾಹಿಗಳಿಗೆ 5 ಲಕ್ಷ ರೂಪಾಯಿ ವಿಮಾ ಸೌಲಭ್ಯ.
  • ಆಡು-ಕುರಿಗಳ ಆಕಸ್ಮಿಕ ಸಾವಿಗೆ ‘ಅನುಗ್ರಹ’ ಯೋಜನೆಯಡಿ ಪರಿಹಾರ ಲಭ್ಯವಿದೆ. ಪ್ರಕೃತಿ ವಿಕೋಪ ಪರಿಹಾರ ವ್ಯಾಪ್ತಿಯಲ್ಲಿ ಬರುವ ಹಾಗೂ ವಿಮೆ ಮಾಡಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ಸಂದರ್ಭಗಳಲ್ಲಿ 6 ತಿಂಗಳು ಮೇಲ್ಪಟ್ಟ ಕುರಿ ಮತ್ತು ಮೇಕೆ ಆಕಸ್ಮಿಕ ಅಥವಾ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಕುರಿ-ಮೇಕೆಗೆ 5000 ರೂಪಾಯಿ ಪರಿಹಾರ ಧನ ಹಾಗೂ 3-6 ತಿಂಗಳ ವಯಸ್ಸಿನ ಕುರಿ-ಮೇಕೆಗಳಿಗೆ 3500 ರೂಪಾಯಿ ಪರಿಹಾರ ಧನವನ್ನು ನೀಡಲಾಗುವುದು.
WhatsApp Group Join Now
Telegram Group Join Now

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ : ವಾಹನ ಮಾಲೀಕರಿಗೆ ಖಡಕ್ ವಾರ್ನಿಂಗ್ | ಗಡುವು ಮೀರಿದರೆ ದಂಡ ಖಚಿತ HSRP Number Plate Registration

  • ಸಂಘದ ಎಲ್ಲಾ ಸದಸ್ಯರಿಗೆ ಕುರಿ ಸಾಕಾಣಿಕೆ ವೈಜ್ಞಾನಿಕ ತರಬೇತಿ ಮತ್ತು ಕುರಿಗಳಿಗೆ ನಿಗಮದಿಂದ ಉಚಿತವಾಗಿ ಜಂತುನಾಶಕ ಔಷಧಿ ವಿತರಣೆ.
  • ಕುರಿ ತಳಿ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಲಭ್ಯತೆಯ ಮೇರೆಗೆ ಮಿಶ್ರತಳಿ ಟಗರುಗಳಿಗೆ ಸಹಾಯಧನ ಮತ್ತು ಆಧುನಿಕ ಕುರಿ ತೂಕದ ಯಂತ್ರಗಳನ್ನು ನಿಗಮದಿಂದ ವಿತರಣೆ ಮಾಡಲಾಗುತ್ತದೆ.
  • ಸಂಘದ ಸದಸ್ಯರ ಕುರಿಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲು ಸ್ವಯಂಚಾಲಿತ ಯಂತ್ರಗಳ ಮೂಲಕ ಆ ಸಂಘದ ವ್ಯಾಪ್ತಿಯಲ್ಲಿ ಬರುವ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಉಚಿತವಾಗಿ ನೀಡಲಾಗುವುದು. ಇದರ ಉಪಯೋಗವನ್ನು ಸಂಘದ ಸದಸ್ಯರು ಪಡೆದುಕೊಳ್ಳಬೇಕು.
  • ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ / ಪರಿಶಿಷ್ಟ ಜಾತಿ (6+1) ಕುರಿ-ಮೇಕೆ ಘಟಕ ವಿತರಣೆ ಹಾಗೂ ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ 10+1 ಕುರಿ-ಮೇಕೆ ಸಾಕಾಣಿಕೆ ಸಹಾಯಧನ.
  • ಊರಿಂದ ಊರಿಗೆ ಅಲೆಯುವ ಸಂಚಾರಿ ಕುರಿಗಾರರಿಗೆ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರಬ್ಬರ್ ಪ್ಲೂರ್ ಮ್ಯಾಟ್ ಮತ್ತು ರೇನ್ ಕೋಟ್ ಸೇರಿದಂತೆ ಪರಿಕರಗಳ ಕಿಟ್‌ಗಳ ವಿತರಣೆ.
Karnataka Sheep and Goat Board facilities

ಕಾರ್ಮಿಕರು ಮತ್ತು ಕಾರ್ಮಿಕರ ಮಕ್ಕಳ ಮದುವೆಗೆ ಸರಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ…. Labor Board Facilities karbwwb karnataka

ಅಮೃತ ಸ್ವಾಭಿಮಾನಿ ಯೋಜನೆ

ಈ ಎಲ್ಲ ಸೌಲಭ್ಯಗಳ ಜೊತೆಗೆ ಇದೀಗ ಕುರಿ ಸಾಕಾಣಿಕೆದಾರರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನಿಂದ ‘ಅಮೃತ ಸ್ವಾಭಿಮಾನಿ ಯೋಜನೆ’ಯಡಿ 20+1 ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಪ್ರತಿ ಫಲಾನುಭವಿಗೆ 1.75 ಲಕ್ಷ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ರೈತರಿಗೆ ಇದೊಂದು ಲಾಭದಾಯಕ ಯೋಜನೆಯಾಗಿದೆ.

ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ 20,000 ಅರ್ಹ ಸದಸ್ಯರಿಗೆ ಈ ಯೋಜನೆ ಅನ್ವಯವಾಗಿದ್ದು; ಕುರಿ ಸೊಸೈಟಿಯಲ್ಲಿ ಸದಸ್ಯರಾದವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಸದರಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿಗಾಹಿ ಸದಸ್ಯರಿಗೆ ನೀಡಲಾಗುವ ಘಟಕ ವೆಚ್ಚ 1.75 ಲಕ್ಷ ರೂಪಾಯಿ ಪೈಕಿ ಶೇ.50ರಷ್ಟನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ. ಶೇ.25ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನವಾಗಿ ಸಿಗಲಿದೆ. ಉಳಿಕೆ ಶೇ.25 ಫಲಾನುಭವಿ ವಂತಿಕೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ.

ಆಧಾರ್ ಕಾರ್ಡ್ ಜೂನ್ 14ರ ನಂತರ ನಿಷ್ಕ್ರಿಯವಾಗುತ್ತಾ? ಏನಿದು ಹೊಸ ವದಂತಿ? ಇಲ್ಲಿದೆ ಯುಐಡಿಎಐ ಕೊಟ್ಟ ಮಾಹಿತಿ Aadhaar Update Online Process

ಈ ಸೌಲಭ್ಯಗಳನ್ನು ಪಡೆಯಲು  ಯಾರೆಲ್ಲ ಅರ್ಹರು?

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮವು ಇಡೀ ರಾಜ್ಯಾದ್ಯಂತ ಕುರಿ-ಮೇಕೆ ಸಾಕಾಣಿಕೆದಾರರಿಗೆ ವಿವಿಧ ಯೋಜನೆಗಳನ್ನು ತಲುಪಿಸಲು ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ’ಗಳನ್ನು ಸ್ಥಾಪಿಸಿದೆ.

ರಾಜ್ಯದಲ್ಲಿ ಹೋಬಳಿ ಮಟ್ಟದಲ್ಲಿ ಪ್ರತಿ 15,000 ಕುರಿ-ಮೇಕೆಗಳಿಗೆ ಒಂದು ಸಹಕಾರ ಸಂಘದ೦ತೆ ನೂರಾರು ಕುರಿ ಸೊಸೈಟಿಗಳು ಸ್ಥಾಪನೆಯಾಗಿವೆ. ನಿಗಮದ ಪ್ರತಿ ಕಾರ್ಯಕ್ರಮಗಳನ್ನು ಈ ಸಹಕಾರ ಸಂಘಗಳ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ.

ಮೇಲ್ಕಾಣಿಸಿದ ಈ ಎಲ್ಲ ಸೌಲಭ್ಯಗಳನ್ನು ಪಡೆಯಲು ಕುರಿ ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು. ನಿಮ್ಮ ಹತ್ತಿರದ ಕುರಿ ಸೊಸೈಟಿ ಸದಸ್ಯರಾಗಲು ಸ್ಥಳೀಯ ಪಶುವೈದ್ಯರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಮಾಹಿತಿ FID Registration


Spread the love
WhatsApp Group Join Now
Telegram Group Join Now
error: Content is protected !!