ಶಿಕ್ಷಣ ಸಚಿವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2 ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 3ರ ದಿನಾಂಕ ಪ್ರಕಟಿಸಿದ್ದು; ಈ ಕುರಿತ ಅಪ್ಡೇಟ್ ಇಲ್ಲಿದೆ…
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗಿರುವ ಅಥವಾ ತೃಪ್ತಿಕರ ಅಂಕಗಳನ್ನು ಪಡೆಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಇನ್ನೆರಡು ಅವಕಾಶಗಳನ್ನು ನೀಡಲು ಮುಂದಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತಂತೆ ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಒಂದೇ ವರ್ಷದಲ್ಲಿ ಮೂರು ಪರೀಕ್ಷೆಗಳು
ಈ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, ಶೇ.66.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಳಿದ ಶೇ.33.86ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.
ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತೆರಡು ಅವಕಾಶಗಳನ್ನು ಕಲ್ಪಿಸಿದ್ದು; ಒಂದೇ ಶಿಕ್ಷಣ ವರ್ಷದಲ್ಲಿ ಒಟ್ಟು ಮೂರು ಬಾರಿ ಪರೀಕ್ಷೆ ಬರೆಯುವ ಸದಾವಕಾಶ ಒದಗಿಸಲಾಗಿದೆ. ಈ ಕುರಿತು ಸಚಿವ ಮಧು ಬಂಗಾರಪ್ಪ ಅವರು ಕೊಟ್ಟ ಅಪ್ಡೇಟ್ಸ್ ಏನು ಎನ್ನುವ ವಿವರ ಇಲ್ಲಿದೆ.
ಹೆಚ್ಚಿನ ಅಂಕ ಗಳಿಕೆಗೆ ಮತ್ತೆರಡು ಅವಕಾಶಗಳು
ಮೇ 2ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಘೋಷಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಹೆಚ್ಚಿನ ಅಂಕ ಗಳಿಕೆಗೆ ಮತ್ತೆರಡು ಅವಕಾಶಗಳು ನೀಡಲಾಗಿದೆ ಎಂದು ಹೇಳಿದ್ದಾರೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-2 ಮತ್ತು ಪರೀಕ್ಷೆ-3 ಅನ್ನು ಬರೆಯುವ ವರೆಗೂ ಅವರ ಡಿಜಿಟಲ್ ಅಂಕಪಟ್ಟಿಯಲ್ಲಿ ‘Fail’ (ಅನುತ್ತೀರ್ಣ) ಎಂದು ನಮೂದಿಸುವುದಿಲ್ಲ. ಬದಲಾಗಿ ‘Progressing’ (ಪ್ರಗತಿಯಲ್ಲಿದೆ) ಎಂದು ಮಾತ್ರ ಉಲ್ಲೇಖಿಸಲಾಗುವುದು ಎಂದಿದ್ದಾರೆ.


ಎಸ್‌ಎಸ್‌ಎಲ್‌ಸಿ 2 ಮತ್ತು 3ನೇ ಪರೀಕ್ಷೆ ಯಾವಾಗ?
ಎಸ್‌ಎಸ್‌ಎಲ್‌ಸಿ 2 ಮತ್ತು 3ನೇ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನಡೆಸಲಿದ್ದು; ಪರೀಕ್ಷೆ ನಡೆಯುವ ದಿನಾಂಕಗಳು ಈ ಕೆಳಗಿನಂತಿವೆ:
- ಎಸ್‌ಎಸ್‌ಎಲ್‌ಸಿ ಪರೀಕ್ಷೆ 2: 26-05-2025 ರಿಂದ 02-06-2025ರ ವರೆಗೆ
- ಎಸ್‌ಎಸ್‌ಎಲ್‌ಸಿ ಪರೀಕ್ಷೆ 3: 23-06-2025 ರಿಂದ 30-06-2025ರ ವರೆಗೆ
ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಮರು ಪರೀಕ್ಷೆಯನ್ನು ತೆಗೆದುಕೊಂಡಿದ್ದು; ಮತ್ತಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಆಸಕ್ತ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ 2 ಮತ್ತು 3ನೇ ಪರೀಕ್ಷೆಗೆ ನೋಂದಾಯಿಸಲು ಸಂಬಂಧಿತ ಶಾಲೆಗಳ ಮೂಲಕ ಅಥವಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವಿಷಯವಾರು ವೇಳಾಪಟ್ಟಿ
- 26-05-2025 / ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ಎನ್ ಸಿ ಇ ಆರ್ ಟಿ, ಸಂಸ್ಕೃತ.
- 27-05-2025 ಕೋರ್ ಸಬ್ಜೆಕ್ಟ್: ಗಣಿತ, ಸಮಾಜ ಶಾಸ್ತ್ರ
- 28-05-2025 ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ
- 29-05-2025 ಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನ
- 30-05-2025 ತೃತೀಯ ಭಾಷೆ: ಹಿಂದಿ ಎನ್‌ಸಿಇಆರ್‌ಟಿ, ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಎನ್ ಎಸ್ ಕ್ಯೂ ಎಫ್ ವಿಷಯಗಳಾದಂತ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಬ್ಯೂಟಿ ಅಂಡ್ ವೆಲ್ ನೆಸ್, ಆಪರೆಲ್ ಮೇಡ್ ಆಪ್ಸ್ ಮತ್ತು ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ ವೇರ್
- 31-05-2025 ಕೋರ್ ಸಬ್ಜೆಕ್: ರಾಜ್ಯ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
- 02-06-2025 ಜೆಟಿಎಸ್ ವಿಷಯಗಳು: ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-ಐವಿ, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-ಐವಿ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್- ಐವಿ, ಪ್ರೋಗ್ರಾಮಿಂಗ್ ಇನ್ ANSI C, ಅರ್ಥಶಾಸ್ತ್ರ
ನೋಂದಣಿ ಕೊನೇ ದಿನಾಂಕ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಫಲಿತಾಂಶ ಪಡೆದಿರುವ ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ದಿನಾಂಕ 03-05-2025ರಿಂದ 10-05-2025ರೊಳಗೆ ನೋಂದಾಯಿಸಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ 2025ರ ಪರೀಕ್ಷೆ-3 ದಿನಾಂಕ 23-06-2025ರಿಂದ 30-06-2025ರ ವರೆಗೆ ನಡೆಯಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.