Post office Savings Schemes- 100% ಗ್ಯಾರಂಟಿ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮುಗಳು | ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಅಂಚೆ ಕಚೇರಿಯಲ್ಲಿ (PostOffice) ಹೂಡಿಕೆ ಮಾಡುವವರಿಗೆ ಯಾವ ಯೋಜನೆಗಳಿಗೆ ಎಷ್ಟು ಬಡ್ಡಿದರ (Interest rate) ಸಿಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…

WhatsApp Group Join Now
Telegram Group Join Now

ಪ್ರತಿಯೊಬ್ಬರು ತಮ್ಮ ದುಡಿಮೆಯ ಕೆಲವು ಭಾಗವನ್ನು ಭವಿಷ್ಯದ ಯೋಜನೆಗಳಿಗಾಗಿ (Future Plans) ಉಳಿತಾಯ ಮಾಡುವ ಕನಸನ್ನು ಹೊಂದಿರುತ್ತಾರೆ. ಆದರೆ ಹಲವಾರು ಜನರಿಗೆ ಹೆಚ್ಚಿನ ಬಡ್ಡಿ ದರ ಯಾವ ಉಳಿತಾಯ ಯೋಜನೆಗಳಲ್ಲಿ ಸಿಗುತ್ತವೆ ಎಂಬ ಸರಿಯಾದ ಮಾರ್ಗದರ್ಶನವಿಲ್ಲದೆ, ಎಲ್ಲೆಲ್ಲೋ ಹೂಡಿಕೆ ಮಾಡಿ ಬಿಡುತ್ತಾರೆ.

ಉಳಿತಾಯ ಮಾಡುವವರಿಗೆ ಅಂಚೆ ಕಚೇರಿಯ ಲಾಭದಾಯಕವಾದ ಈ ಯೋಜನೆಗಳು 100% ಲಾಭವನ್ನು ಕೊಡಬಲ್ಲವು. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವವರಿಗೆ ಯಾವ್ಯಾವ ಯೋಜನೆಗಳಿಗೆ ಎಷ್ಟೆಷ್ಟು ಬಡ್ಡಿ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

Bank Holidays Detail- ನಾಳೆಯಿಂದ ಬ್ಯಾಂಕುಗಳಿಗೆ ಸಾಲು ಸಾಲು ರಜೆ: ಸಂಪೂರ್ಣ ವಿವರ ಇಲ್ಲಿದೆ…

ಅಂಚೆ ಕಚೇರಿಯ ಉಳಿತಾಯ ಯೋಜನೆಗಳು Post Office Saving Schemes
  • ಹಿರಿಯ ನಾಗರಿಕ ಉಳಿತಾಯ ಯೋಜನೆ
  • ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್
  • ಕಿಸಾನ್ ವಿಕಾಸ ಪತ್ರ ಯೋಜನೆ
  • ಸುಕನ್ಯಾ ಸಮೃದ್ಧಿ ಯೋಜನೆ
  • ಪೋಸ್ಟ್ ಆಫೀಸ್ ಉಳಿತಾಯ ಖಾತೆ
  • ಮರುಕಳಿಸುವ ಠೇವಣಿ
  • ಫಿಕ್ಸೆಡ್ ಡೆಪಾಸಿಟ್ ಮತ್ತು ಟೈಮ್ ಡೆಪಾಸಿಟ್
ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Savings Scheme)

60 ವರ್ಷ ಮೇಲ್ಪಟ್ಟ ಹಿರಿಯರಿಗೆ ಇದು ಉತ್ತಮ ಉಳಿತಾಯ ಯೋಜನೆಯಾಗಿದೆ. ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ತಮ್ಮ ಉಳಿತಾಯದ ಮೇಲೆ 8.2% ರಷ್ಟು ಬಡ್ಡಿ ದರ (Rate of Interest) ಸಿಗುತ್ತದೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ತೆರಿಗೆ ಪ್ರಯೋಜನೆಯನ್ನು ಕೂಡ ಪಡೆಯಬಹುದು.

ಉದಾಹರಣೆಗೆ, ನೀವು ಯೋಜನೆಯ ಅಡಿಯಲ್ಲಿ 30 ಲಕ್ಷವನ್ನು ಠೇವಣಿ ಮಾಡಿದರೆ, ಪ್ರತಿ ಮೂರು ತಿಂಗಳಿಗೊಮ್ಮೆ ನಿಮಗೆ 61,500 ರೂಪಾಯಿ ಬಡ್ಡಿ ಹಣ ಸಿಗಲಿದೆ. 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮತ್ತು ನಿವೃತ್ತಿ ಹೊಂದಿದ ನೌಕರರಿಗೆ ಇದು ಒಂದು ಉತ್ತಮ ಉಳಿತಾಯ ಯೋಜನೆಯಾಗಿದೆ.

Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (National Savings certificate)

ಅಂಚೆ ಕಚೇರಿಯ ಅದ್ಭುತ ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯು ಐದು ವರ್ಷಗಳ ಯೋಜನೆಯಾಗಿದೆ. ಈ ಯೋಜನೆಯಡಿ ಠೇವಣಿ ಇಡಲು ಯಾವುದೇ ರೀತಿಯ ಗರಿಷ್ಠ ಠೇವಣಿ ಮಿತಿ ಇಲ್ಲ. ಒಮ್ಮೆ ನೀವು ಐದು ವರ್ಷಗಳ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ ವಾರ್ಷಿಕ 7.7% ಬಡ್ಡಿ ದರವನ್ನು ಪಡೆಯುತ್ತೀರಿ.

ಉದಾಹರಣೆಗೆ, ಒಂದು ವೇಳೆ ನೀವು 10 ಲಕ್ಷ ರೂಪಾಯಿ ಠೇವಣಿ ಮಾಡಿದರೆ ಐದು ವರ್ಷಗಳ ನಂತರ ನಿಮ್ಮ ಮೆಚುರಿಟಿ ಮೊತ್ತವು 14,64,247 ರೂಪಾಯಿ ಆಗಿರುತ್ತದೆ. ದೀರ್ಘಕಾಲದ ಉಳಿತಾಯ (long term investment) ಯೋಜನೆ ಮಾಡುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.

ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವವರಿಗೆ ಯಾವ ಯೋಜನೆಗಳಿಗೆ ಎಷ್ಟು ಬಡ್ಡಿದರ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ...
Post office Savings Schemes
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public provident fund)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯು 15 ವರ್ಷಗಳ ಅವಧಿಯ ಯೋಜನೆಯಾಗಿದ್ದು, ಹೂಡಿಕೆದಾರರಿಗೆ ಹೆಚ್ಚಿನ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆ ಅಡಿಯಲ್ಲಿ ನೀವು ಠೇವಣಿ ಮಾಡುವುದಾದರೆ, 7.1% ಬಡ್ಡಿ ದರ ನಿಮಗೆ ಸಿಗಲಿದೆ.

ಉದಾಹರಣೆಗೆ, ನೀವು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5000 ಠೇವಣಿ ಮಾಡುವುದಾದರೆ ಮೆಚ್ಯುರಿಟಿ ಅವಧಿಯ ನಂತರ ಅಂದರೆ 15 ವರ್ಷಗಳ ಅವಧಿ ನಂತರ ನಿಮಗೆ 15,77,840 ರೂಪಾಯಿ ಹಣ ಸಿಗಲಿದೆ.

Free Cycle Scheme- ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ: ಯಾರಿಗೆಲ್ಲ ಸಿಗಲಿದೆ ಈ ಅವಕಾಶ? | ಸಂಪೂರ್ಣ ಮಾಹಿತಿ ಇಲ್ಲಿದೆ…

ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra scheme)

ಅಂಚೆ ಇಲಾಖೆ ಈ ಯೋಜನೆ ಮೂಲಕ ಹೂಡಿದ ಹಣವನ್ನು 9 ವರ್ಷ 5 ತಿಂಗಳಲ್ಲಿ ಡಬಲ್ ಮಾಡುವ ಗ್ಯಾರಂಟಿಯನ್ನು ನೀಡುತ್ತದೆ. ಇದೇ ಕಾರಣದಿಂದಾಗಿ, ಈ ಯೋಜನೆ ‘ಹಣ ಡಬಲ್ ಮಾಡುವ ಸ್ಕೀಮು’ ಎಂದು ಹೇಳಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದರೆ ವಾರ್ಷಿಕ ನಿಮಗೆ 7.5% ಬಡ್ಡಿ ದರ ಸಿಗಲಿದ್ದು, ನೀವು ಹೂಡಿಕೆ ಮಾಡಿದ ಹಣ 9 ವರ್ಷ 7 ತಿಂಗಳಲ್ಲಿ ದ್ವಿಗುಣಗೊಳ್ಳಲಿದೆ. ಉದಾಹರಣೆಗೆ, ₹5 ಲಕ್ಷ ಹೂಡಿದರೆ, 9 ವರ್ಷ 5 ತಿಂಗಳಲ್ಲಿ ₹10 ಲಕ್ಷವಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)

ಅಂಚೆ ಕಚೇರಿಯ ಈ ಯೋಜನೆಯು ವಿಶೇಷವಾಗಿ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿಯೆ ಜಾರಿಗೆ ತಂದAತಹ ಯೋಜನೆಯಾಗಿದೆ. ಈ ಒಂದು ಉಳಿತಾಯ ಯೋಜನೆಯ ಅಡಿಯಲ್ಲಿ 15 ವರ್ಷಗಳ ಅವಧಿಗೆ ಅಥವಾ ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಠೇವಣಿಯಲ್ಲಿ ಹಣ ಇಡಬಹುದು.

ಈ ಯೋಜನೆಯ ಅಡಿಯಲ್ಲಿ ನೀವು ಠೇವಣಿ ಇಡುವುದಾದರೆ ನಿಮಗೆ ವಾರ್ಷಿಕ 8.2% ಬಡ್ಡಿ ದರ ಸಿಗಲಿದೆ. ಉದಾಹರಣೆಗೆ, ನೀವು ಪ್ರತಿ ತಿಂಗಳು 5000 ರೂಪಾಯಿ ಠೇವಣಿ ಇಟ್ಟರೆ ಅವಧಿಯ ನಂತರ ನಿಮಗೆ 26,97,246 ರೂಪಾಯಿ ಸಿಗಲಿದೆ.

Auto Taxi Loan Subsidy- ಆಟೋ ಮತ್ತು ಟ್ಯಾಕ್ಸಿ ಖರೀದಿಗೆ ಸರ್ಕಾರದ ಸಬ್ಸಿಡಿ | ಈಗಲೇ ಅರ್ಜಿ ಹಾಕಿ

ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post office savings account)

ಪೋಸ್ಟ್ ಆಫೀಸಿನ ಉಳಿತಾಯ ಖಾತೆಯಲ್ಲಿ ನಿಮಗೆ ವಾರ್ಷಿಕ 4% ಬಡ್ಡಿ ದರ ಸಿಗಲಿದೆ. ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಲು ಕನಿಷ್ಠ ಠೇವಣಿ ಮೊತ್ತ 500 ರೂಪಾಯಿ ಆಗಿದೆ.

ಅಂಚೆ ಕಚೇರಿ ಉಳಿತಾಯ ಯೋಜನೆಗಳು ಹೆಚ್ಚಿನ ಭದ್ರತೆ, ಸ್ಥಿರ ಆದಾಯ, ಮತ್ತು ಹಲವಾರು ತೆರಿಗೆ ಪ್ರಯೋಜನಗಳು ನೀಡುವ ಮೂಲಕ, ನಿಮ್ಮ ಹಣವನ್ನು ಸುಧಾರಿತವಾಗಿ ಬೆಳಸಲು ಅತ್ಯುತ್ತಮ ಮಾರ್ಗವಾಗಿವೆ. ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ ಅಥವಾ ಈ ಕೆಳಗಿನ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ…

ಹೆಚ್ಚಿನ ಮಾಹಿತಿಗಾಗಿ: Click Here

Karnataka SSLC Result 2025- ಮೇ 2ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಣೆ | ಕೆಎಸ್‌ಇಎಬಿ ಅಧಿಕೃತ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!