ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result 2025) ಕುರಿತು ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿ (KSEAB) ಮೂಲಗಳಿಂದ ಹೊಸ ಮಾಹಿತಿ ಹೊರ ಬಿದ್ದಿದ್ದು; ಈ ಕುರಿತ ವಿವರ ಇಲ್ಲಿದೆ…
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಏಪ್ರಿಲ್ 15ರಿಂದ ಮೌಲ್ಯ ಮಾಪನ ಕಾರ್ಯ ಶುರುವಾಗಿದ್ದು; ಅಂತಿಮ ಹಂತಕ್ಕೆ ಬಂದಿದೆ. ಹಾಗಿದ್ದರೆ, ಫಲಿತಾಂಶ ಯಾವ ಪ್ರಕಟವಾಗಲಿದೆ?
ಮೂಲಗಳ ಪ್ರಕಾರ ರಾಜ್ಯದ ಬಹುತೇಕ ಎಲ್ಲಾ ಕೇಂದ್ರಗಳಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದೆ. ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಫಲಿತಾಂಶವನ್ನು ಪ್ರಕಟಿಸಲು ತಯಾರಿ ನಡೆಸಿದೆ.
ಹಿಂದಿನ ವರ್ಷಗಳ ಫಲಿತಾಂಶದ ಮಾಹಿತಿ
ಕಳೆದ 2022ರಲ್ಲಿ ಕೋವಿಡ್ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಜುಲೈ ತಿಂಗಳಿನಲ್ಲಿ ಫಲಿತಾಂಶ ಪ್ರಕಟ ಮಾಡಲಾಗಿತ್ತು. ಆನಂತರ ಕಳೆದ 2023ರಲ್ಲಿ ಮೇ 8ರಂದು ಹಾಗೂ 2022ರಲ್ಲಿ ಮೇ 19 ರಂದು ಫಲಿತಾಂಶ ಪ್ರಕಟ ಆಗಿತ್ತು.
ಕಳೆದ ವರ್ಷ 2024ರಲ್ಲಿ ಮೇ 9ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿತ್ತು. ಇನ್ನು ಈ ವರ್ಷ ಅಂದರೆ 2025ನೇ ಸಾಲಿನ ಫಲಿತಾಂಶದ ದಿನಾಂಕ ಮತ್ತು ಸಮಯದ ಬಗ್ಗೆ ಅಧಿಕೃತ ಅಧಿಸೂಚನೆಯವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ
ಈಗಾಗಲೇ ಏಪ್ರಿಲ್ 8ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಆಗಿದ್ದು, ಇನ್ನುಳಿದಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶ ಯಾವಾಗ ಬಿಡುಗಡೆ ಆಗಲಿದೆ ಎಂದು ಕಾತುರ ಹೆಚ್ಚಾಗುತ್ತಿದೆ.
ಮೇ ಮೊದಲ ವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದ್ದು; ಕೆಎಸ್‌ಇಎಬಿ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಿದೆ.
ತಾತ್ಕಾಲಿಕ ಕೀ ಉತ್ತರಗಳ ಬಿಡುಗಡೆ
ಈಗಾಗಲೇ ಕೆಎಸ್‌ಇಎಬಿ (KSEAB) ಸಂಸ್ಥೆಯು ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಅಂದಾಜು ಅಂಕಗಳನ್ನು ಲೆಕ್ಕ ಹಾಕಿಕೊಳ್ಳಬಹುದಾಗಿದೆ.
ಫಲಿತಾಂಶದ ಜೊತೆಗೆ ಒಟ್ಟಾರೆ ಉತ್ತೀರ್ಣ ಶೇಕಡಾವಾರು, ವಿದ್ಯಾರ್ಥಿಗಳ ಲಿಂಗಾಧಾರಿತ ಫಲಿತಾಂಶ, ತಾಲೂಕು-ಜಿಲ್ಲಾ ಆಧಾರಿತ ಫಲಿತಾಂಶ, 100% ಉತ್ತೀರ್ಣತೆಯನ್ನು ಸಾಧಿಸಿದ ಶಾಲೆಗಳ ಪಟ್ಟಿ, ರಾಜ್ಯದ ಟಾಪರ್‌ಗಳ ಹೆಸರುಗಳು ಮತ್ತು ಅಂಕಗಳು ಸೇರಿದಂತ ಅನೇಕ ಮಾಹಿತಿ ಪ್ರಕಟವಾಗಲಿದೆ.
ಫಲಿತಾಂಶ ವೀಕ್ಷಣೆ ವಿಧಾನ
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿ karresults.nic.in ಅಥವಾ kseab.karnataka.gov.in ವೀಕ್ಷಿಸಬಹುದಾಗಿದೆ. ಅಲ್ಲಿ SSLC Main Examination Result 2025 ಲಿಂಕ್ ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕ ನಮೂದಿಸಿ, Submit ಕ್ಲಿಕ್ ಮಾಡಿದರೆ, ಫಲಿತಾಂಶದ ವಿವರ ಸಿಗುತ್ತದೆ. ನೀವು ಅದನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು.
Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…
ಫಲಿತಾಂಶ ಪ್ರಕಟವಾದ ನಂತರ
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಡೆದ ಅಂಕಗಳ ಪರಿಶೀಲನೆ ನಂತರ ಮರುಮೌಲ್ಯಮಾಪನಕ್ಕೆ (Revaluation/Retotalling) ಅರ್ಜಿ ಹಾಕಬಹುದಾಗಿದೆ. ಉತ್ತರಪತ್ರಿಕೆ ಪ್ರತಿ ಪಡೆಯಲು (Answer Script Copy) ಅವಕಾಶ ದೊರೆಯಲಿದೆ. ಮರುಪರೀಕ್ಷೆ (Supplementary Examination) ತಯಾರಿಗಾಗಿ ಸೂಚನೆಗಳು ಬಿಡುಗಡೆಯಾಗಲಿವೆ.
ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ಆಯ್ಕೆಗಾಗಿ ಈ ಫಲಿತಾಂಶದ ಮೇಲೆ ಅವಲಂಬಿತರಿದ್ದಾರೆ. ಈಗಾಗಲೇ ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 8ರಂದು ಪ್ರಕಟವಾಗಿದೆ. ಇದರ ಬೆನ್ನಲ್ಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕವನ್ನು ಬಹುತೇಕ ಎಲ್ಲ ವಿದ್ಯಾರ್ಥಿಗಳು, ಪೋಷಕರು ನಿರೀಕ್ಷಿಸುತ್ತಿದ್ದಾರೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.