8ನೇ ವೇತನ ಆಯೋಗ (8th Pay Commission) ರಚನೆಗೆ ಕುರಿತು ಶುಭಸುದ್ದಿ ಹೊರ ಬಿದ್ದಿದೆ. ಸದರಿ ಆಯೋಗದ ಅನ್ವಯ ಸರ್ಕಾರಿ ನೌಕರರ (Government Employees) ಸಂಬಳ ಏರಿಕೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಇಲ್ಲಿದೆ…
ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ 8ನೇ ವೇತನ ಆಯೋಗದ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ಈ ಆಯೋಗದ ಸಮಿತಿಯನ್ನು ರಚಿಸಲಿದ್ದು, ಮುಂದಿನ ಕೆಲವು ವಾರಗಳಲ್ಲಿ ಈ ಕುರಿತು ಅಧಿಕೃತ ಅಧಿಸೂಚನೆಯು ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.
2026ರ ಜನವರಿಯಿಂದ ಸಂಬಳ ಪರಿಷ್ಕರಣೆ
ಮೂಲಗಳ ಪ್ರಕಾರ, 8ನೇ ವೇತನ ಆಯೋಗ ಸಮಿತಿಯು 2026ರ ಮಧ್ಯಭಾಗದಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಆ ವರದಿಯ ಆಧಾರದ ಮೇಲೆ ನೌಕರರ ಸಂಬಳ ಪರಿಷ್ಕರಣೆ ಮಾಡಲಾಗುತ್ತದೆ.
ಆದರೆ, 2026ರ ಮಧ್ಯಭಾಗದಲ್ಲಿ ಸರ್ಕಾರವು ಈ ಶಿಫಾರಸುಗಳನ್ನು ಅಂಗೀಕರಿಸಿದರೂ, 2026ರ ಜನವರಿಯಿಂದಲೇ ಅನ್ವಯವಾಗಲಿದ್ದು; ನೌಕರರಿಗೆ ಅರಿಯರ್ಸ್ (Arrears) ರೂಪದಲ್ಲಿ ಬಾಕಿ ಸಂಬಳ ಪಾವತಿಯಾಗುವ ಸಾಧ್ಯತೆ ಇದೆ.
ಪ್ರತಿ 10 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ
ಸರ್ಕಾರವು ತನ್ನ ನೌಕರರ ವೇತನವನ್ನು ಪ್ರತಿ ದಶಕಕ್ಕೊಮ್ಮೆ ಅಂದರೆ ತಲಾ 10 ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ 2006ರಲ್ಲಿ 6ನೇ ವೇತನ ಆಯೋಗ ಜಾರಿಗೆ ಬಂದಿದೆ. 2016ರಲ್ಲಿ 7ನೇ ವೇತನ ಆಯೋಗ ಹಾಗೂ ಇದೀಗ 2026ಕ್ಕೆ 8ನೇ ವೇತನ ಆಯೋಗ ಜಾರಿಗೆ ಬರುವ ನಿರೀಕ್ಷೆಯಿದೆ.
ವೇತನ ಆಯೋಗ ರಚನೆಯ ನಂತರ, ಅದರಲ್ಲಿ ಅರ್ಥಶಾಸ್ತ್ರಜ್ಞರು, ಆಡಳಿತಾಧಿಕಾರಿಗಳು ಮತ್ತು ಇತರ ತಜ್ಞರು ಸ್ಥಾನಪಡೆಯುತ್ತಾರೆ. ಈ ಸಮಿತಿ ಎಲ್ಲಾ ಇಲಾಖೆಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ತೊಡಗಿರುವ ಕೆಲಸದ ಪ್ರಮಾಣ, ಖರ್ಚಿನ ಮಟ್ಟ ಮತ್ತು ಜೀವನೋಪಾಯ ವೆಚ್ಚಗಳನ್ನು ಆಧರಿಸಿ ಶಿಫಾರಸುಗಳನ್ನು ನೀಡುತ್ತದೆ.

ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಏರಿಕೆ
ವೇತನ ಪರಿಷ್ಕರಣೆಯಲ್ಲಿ ನೌಕರರ ಮೂಲ ಸಂಬಳವನ್ನು ಹೊಸ ಮಾದರಿಯ ಸಂಬಳಕ್ಕೆ ಪರಿವರ್ತಿಸಲು ಬಳಸುವ ಸೂತ್ರವೇ ಫಿಟ್‌ಮೆಂಟ್ (Fitment Factor) ಅಂಶ. 7ನೇ ವೇತನ ಆಯೋಗದಲ್ಲಿ ಈ ಅಂಶವನ್ನು 2.57 ಎಂದು ನಿಗದಿಪಡಿಸಲಾಗಿತ್ತು. ಆಗ ಹಳೆಯ ಮೂಲ ವೇತನ ₹10,000 ಇದ್ದರೆ 10,000×2.57 = ₹25,700 ಆಗಿತ್ತು.
ಇದೀಗ ವಿವಿಧ ಮಾಧ್ಯಮಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ, 8ನೇ ವೇತನ ಆಯೋಗದಲ್ಲಿ ಈ ಅಂಶವು 1.92 ರಿಂದ 2.86ರ ನಡುವೆ ಇರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಸ್ತುತ ಮೂಲ ಸಂಬಳ ₹20,000 ಇದ್ದರೆ 20,000 x 2.86 = ₹57,200 ಆಗುತ್ತದೆ. ಹೀಗಾಗಿ, ಈ ಬಾರಿ ಭರ್ಜರಿ ಸಂಬಳ ಏರಿಕೆಯ ನಿರೀಕ್ಷೆ ನೌಕರರಲ್ಲಿದೆ.
ಪಿಂಚಣಿದಾರರಿಗೂ ಭಾರೀ ಲಾಭ
ವೇತನ ಆಯೋಗದ ಶಿಫಾರಸಿನಲ್ಲಿ ಕೇವಲ ಸೇವೆಯಲ್ಲಿರುವ ನೌಕರರ ಸಂಬಳವಷ್ಟೇ ಅಲ್ಲ, ಪಿಂಚಣಿದಾರರ ಪಿಂಚಣಿ ಮೊತ್ತವನ್ನೂ ಕೂಡ ಪರಿಷ್ಕರಿಸಲಾಗುತ್ತದೆ. ಹೊಸ ವೇತನ ಮಾದರಿಯ ಆಧಾರದ ಮೇಲೆ, ಗ್ರ‍್ಯಾಚುಯಿಟಿ, ಲೀವ್ ಎನ್ಕ್ಯಾಶ್ಮೆಂಟ್ ಮತ್ತು ಇತರ ಸೇವಾ ಉಳಿತಾಯಗಳ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ.
ಹೆಚ್ಚುವರಿ ವೆಚ್ಚದ ಭಾರವನ್ನು ಸಹಿಸಬೇಕಾದ ರಾಜ್ಯ ಸರ್ಕಾರಗಳು ಸಹ ಈ ಆಯೋಗದ ವರದಿಯನ್ನು ಪಾಲಿಸಬೇಕಾಗುತ್ತದೆ. ಹಲವಾರು ರಾಜ್ಯಗಳು ತಮ್ಮ ಅನುಸರಣೆ ಶೈಲಿಯಲ್ಲಿ ವ್ಯತ್ಯಾಸ ತರಬಹುದು. ಕೆಲವು ತಕ್ಷಣ ಜಾರಿಗೆ ತರುತ್ತವೆ, ಇನ್ನು ಕೆಲವು ತಮ್ಮ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ವಿಳಂಬವಾಗಿ ಜಾರಿಗೆ ತರುತ್ತವೆ.
ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ನೋಂದಣಿಗೆ ಮಹತ್ವದ ಸೂಚನೆ | ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಸರ್ಕಾರಿ ನೌಕರರಲ್ಲಿ ಹರ್ಷ
8ನೇ ವೇತನ ಆಯೋಗಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಗಮನಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರವು ಸಮಿತಿಯನ್ನು ಆದಷ್ಟು ಬೇಗ ರಚಿಸಿ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ಒತ್ತಾಯ ವ್ಯಕ್ತವಾಗುತ್ತಿದೆ.
8ನೇ ವೇತನ ಆಯೋಗವು ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವೇತನ ಹೆಚ್ಚಳದ ನಿರೀಕ್ಷೆಯನ್ನು ಮೂಡಿಸಿದೆ. ಮೂಲ ಸಂಬಳದ ಭರ್ಜರಿ ಏರಿಕೆ, ಜೀವನೋಪಾಯ ವೆಚ್ಚದ ನೆರವಿಗೆ ಬರುವಂತಹ ಸೌಲಭ್ಯಗಳು, ಮತ್ತು ಆರ್ಥಿಕ ಭದ್ರತೆ ಸಿಗಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.