ರಾಜ್ಯ ಸರ್ಕಾರವು ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ಎಸಗಿದ ದುರ್ನಡತೆ, ಭ್ರಷ್ಟಾಚಾರ ಅಥವಾ ಶಿಸ್ತುಗೇಡಿತನದ ಘಟನೆಗಳಿಗೆ ಸಂಬಂಧಿಸಿದಂತೆ, ಅಂತಹ ನೌಕರರು ನಿವೃತ್ತಿ ಹೊಂದುವ ಮುನ್ನವೇ ಕ್ರಮಗಳನ್ನು ಆರಂಭಿಸಬೇಕು ಸರ್ಕಾರ ಎಂದು ಸೂಚಿಸಲಾಗಿದೆ. ವಿಳಂಬ, ನಿರ್ಲಕ್ಷ್ಯ ಅಥವಾ ರಾಜಕೀಯ ಪ್ರಭಾವದಿಂದ ಕ್ರಮ ಕೈಗೊಂಡಿಲ್ಲವೆಂದರೆ, ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ.
ಸಕಾಲದಲ್ಲಿ ಶಿಸ್ತು ಕ್ರಮಕ್ಕೆ ಸೂಚನೆ
ಸರ್ಕಾರದಿಂದ ಎಲ್ಲ ಇಲಾಖೆಗಳಿಗೂ ನೀಡಲಾದ ನವೀಕೃತ ಆದೇಶದ ಪ್ರಕಾರ, ಯಾವುದೇ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾದಲ್ಲಿ, ಅದನ್ನು ನಿವೃತ್ತಿಗೆ ಕನಿಷ್ಠ 30 ದಿನಗಳ ಮುಂಚೆಯೇ ಪ್ರಾರಂಭಿಸಬೇಕು. ಈ ವೇಳೆ, ಕರಡು ದೋಷಾರೋಪಣ ಪಟ್ಟಿ, ಸಂಬAಧಿತ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳ ಸಹಿತವಾಗಿ ಶಿಸ್ತು ಪ್ರಾಧಿಕಾರಿಗಳ ಬಳಿ ಪ್ರಸ್ತುತಪಡಿಸಬೇಕು.
ಶಿಸ್ತು ಕ್ರಮದ ಪ್ರಕ್ರಿಯೆಯಲ್ಲಿ ವಿಳಂಬ ಮಾಡಿದ ಅಧಿಕಾರಿಗಳು ಅಥವಾ ನೌಕರರ ವಿರುದ್ಧವೂ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಹಿತಾಸಕ್ತಿಗೆ ಅಡ್ಡಿಯಾಗುವ ರೀತಿಯಲ್ಲಿ ಕಾನೂನು ವ್ಯವಸ್ಥೆಯ ದುರುಪಯೋಗವಾಗದಂತೆ ನೋಡಿಕೊಳ್ಳಲು ಸರ್ಕಾರ ಸೂಚಿಸಲಾಗಿದೆ.
New Health Insurance Scheme- ಸರಕಾರಿ ನೌಕರರಿಗೆ ಹೊಸ ಆರೋಗ್ಯ ವಿಮಾ ಯೋಜನೆ ಜಾರಿ | ಕೇಂದ್ರ ಸರ್ಕಾರದ ಸಿದ್ಧತೆ
ನಿವೃತ್ತಿಯಾದ ನಂತರದ ಕ್ರಮ ಕಷ್ಟ!
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ಪ್ರಕಾರ, ಸರ್ಕಾರಿ ನೌಕರರು ನಿವೃತ್ತಿಯಾದ ನಂತರ ಶಿಸ್ತು ಕ್ರಮ ಕೈಗೊಳ್ಳಲು ಸಾಮಾನ್ಯವಾಗಿ ಅವಕಾಶವಿಲ್ಲ. ಆದರೂ, ನಿಯಮ 214ರಡಿ ಮಾತ್ರ, ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಹಳೆಯ ದುರ್ನಡತೆಗಳ ಕುರಿತು ಕ್ರಮ ಜರುಗಿಸಲು ಅವಕಾಶವಿದೆ.
ಇದರಲ್ಲಿ ಪ್ರಮುಖ ಅಂಶವೆಂದರೆ, ಹಳೆಯ ದೋಷಗಳು ನಿವೃತ್ತಿಯ ನಾಲ್ಕು ವರ್ಷಕ್ಕಿಂತ ಮುಂಚಿನ ಕಾಲದ್ದವಾಗಿದ್ದರೆ, ಅದನ್ನು ಆಧಾರವಿಟ್ಟು ಶಿಸ್ತು ಕ್ರಮ ಕೈಗೊಳ್ಳುವುದು ಕಾನೂನುಬದ್ಧವಲ್ಲ. ಈ ಕಾರಣದಿಂದಾಗಿ, ಸಕಾಲಕ್ಕೆ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಸರ್ಕಾರ ಹೇಳಿದೆ.

ಸರ್ಕಾರದ ಸ್ಪಷ್ಟ ನಿಲುವು
ಸರ್ಕಾರಿ ನೌಕರರು ನಿವೃತ್ತಿಯಾದ ನಂತರ, ಅವರ ವಿರುದ್ಧದ ತನಿಖೆ ಹಿಂದಕ್ಕೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವನೆಗಳು ಕೆಲವು ಇಲಾಖೆಗಳಿಂದ ಬರುತ್ತಿವೆ. ಈ ವಿಚಾರವಾಗಿ, ‘ಆರ್ಥಿಕ ಹಾನಿ ಉಂಟಾಗಿಲ್ಲ’ ಎಂಬ ಕಾರಣ ನೀಡಿ ತನಿಖೆ ಅಥವಾ ಶಿಸ್ತು ಕ್ರಮ ರದ್ದುಪಡಿಸುವ ಕ್ರಮ ಸರಿಯಲ್ಲ ಎಂದು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಇದರಿಂದಾಗಿ, ಸೇವಾ ಅವಧಿಯಲ್ಲೇ ಕ್ರಮ ಪ್ರಾರಂಭಿಸಿ, ತಪ್ಪಿತಸ್ಥರಿಗೆ ಅಗತ್ಯ ಶಿಕ್ಷೆ ವಿಧಿಸುವ ಮೂಲಕ ಸಾರ್ವಜನಿಕ ಹಣ ಮತ್ತು ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ.
SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…
2019ರ ಸುತ್ತೋಲೆ ಕಡ್ಡಾಯ ಜಾರಿ
2019ರ ಜನವರಿ 21ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನೀಡಿದ ಸುತ್ತೋಲೆಯಲ್ಲಿ, ನಿವೃತ್ತಿಯತ್ತ ಸಾಗುತ್ತಿರುವ ನೌಕರರ ಕುರಿತು ಶಿಸ್ತು ಕ್ರಮ ಕೈಗೊಳ್ಳುವ ವಿಧಾನ, ಸಮಯ, ದಾಖಲೆಗಳ ಸಂಗ್ರಹಣೆ ಮುಂತಾದ ಅಂಶಗಳ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಲಾಗಿತ್ತು. ಇದೀಗ ಅದೇ ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ.
ಶಿಸ್ತಿನ ಕ್ರಮದಲ್ಲಿ ಯಾವುದೇ ರೀತಿಯ ಉದ್ದೇಶಪೂರ್ವಕ ವಿಳಂಬವಾಗದಂತೆ ಸಂಬಂಧಿತ ಅಧಿಕಾರಿಗಳು ನೋಡಿಕೊಳ್ಳಬೇಕು. ಒಂದುವೇಳೆ ವಿಳಂಬವಾದರೆ, ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.