SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

Spread the love

2025ನೇ ಸಾಲಿನ ವಾರ್ಷಿಕ ಎಸ್‌ಎಸ್‌ಎಸ್‌ಸಿ ಪರೀಕ್ಷೆ-1ರ ಫಲಿತಾಂಶ (SSLC Result 2025) ಪ್ರಕಟಣೆ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ…

WhatsApp Group Join Now
Telegram Group Join Now

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿರುವ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆ-1ರ ಫಲಿತಾಂಶವು ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಿನ್ನೆ ಏಪ್ರಿಲ್ 16ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಈ ವರ್ಷವೂ ಫಲಿತಾಂಶ ಪ್ರಕಟಣೆ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ. ಸದ್ಯಕ್ಕೆ ಮೌಲ್ಯಮಾಪನ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದ್ದು; ಎಲ್ಲವೂ ಯೋಜನೆಯಂತೆ ನಡೆಯುವುದರಿಂದ ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…

ಪರೀಕ್ಷೆಯ ಸಮಗ್ರ ಮಾಹಿತಿ

2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಮಾರ್ಚ್ 21ರಿಂದ ಏಪ್ರಿಲ್ 4ರ ತನಕ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಕೋಡಿಂಗ್ ಮತ್ತು ಡಿಕೋಡಿಂಗ್ ಪ್ರಕ್ರಿಯೆಯು ಏಪ್ರಿಲ್ 11ರಿಂದ ಪ್ರಾರಂಭವಾಗಿದ್ದು; ಏಪ್ರಿಲ್ 15ರಿಂದ ಜಿಲ್ಲಾ ಮೌಲ್ಯನಿರ್ಣಯ ಕೇಂದ್ರಗಳಲ್ಲಿ ಪ್ರಾರಂಭಗೊಂಡಿದೆ.

ಶುದ್ಧ ಮತ್ತು ನಿಖರ ಮೌಲ್ಯಮಾಪನ ಪ್ರಕ್ರಿಯೆಗಾಗಿ ಈ ವರ್ಷ ಸರ್ಕಾರ ಮೌಲ್ಯಮಾಪಕರಿಗೆ ತಾಂತ್ರಿಕ ತರಬೇತಿ ನೀಡಿರುವುದರ ಜೊತೆಗೆ, ಉತ್ತರಪತ್ರಿಕೆಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸುವ ವ್ಯವಸ್ಥೆಯನ್ನೂ ಕಲ್ಪಿಸಿದೆ.ಇದರಿಂದ ಫಲಿತಾಂಶ ವಿಳಂಬ ಅಥವಾ ತಪ್ಪುಗಳ ಸಾಧ್ಯತೆ ಕಡಿಮೆಯಾಗಿದ್ದು, ನಿರೀಕ್ಷಿತ ಅವಧಿಯಲ್ಲೇ ಪ್ರಕಟವಾಗು ಸಂಭವವಿದೆ.

SSLC 2025 Results- SSLC ಫಲಿತಾಂಶ | ಮೌಲ್ಯಮಾಪನ, ರಿಸೆಲ್ಟ್ ಕುರಿತ KSEAB ಪ್ರಮುಖ ಮಾಹಿತಿ ಇಲ್ಲಿದೆ…

ಹಿಂದಿನ ವರ್ಷಗಳ ಫಲಿತಾಂಶದ ಹಿನ್ನೋಟ

ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೇ ಸಹನೆಯಿಂದ ಫಲಿತಾಂಶ ನಿರೀಕ್ಷಿಸುವುದು ಕ್ಷೇಮಕರ. ಪ್ರತೀ ವರ್ಷದಂತೆ ಈ ವರ್ಷವೂ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ. ಹಿಂದಿನ ವರ್ಷಗಳ ಫಲಿತಾಂಶದ ಹಿನ್ನೋಟ ಈ ಕೆಳಗಿನಂತಿದೆ:

  • 2024: ಒಟ್ಟು ಫಲಿತಾಂಶ ಶೇಕಡಾ 83.92%
  • 2023: ಫಲಿತಾಂಶ ಶೇಕಡಾ 85.63%
  • 2022: ಶೇಕಡಾ 81.20%

ಹಿಂದಿನ ಮೂರು ವರ್ಷವೂ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಉತ್ತಮವಾಗಿದ್ದು; ಈ ವರ್ಷವೂ ಫಲಿತಾಂಶ ಸರಾಸರಿ ಶೇ.85ರ ಮೇಲುಗಡೆಯಾಗುವ ನಿರೀಕ್ಷೆ ಇದೆ.

PMAY Scheme- ಸ್ವಂತ ಮನೆ ಕನಸಿಗೆ ಸರ್ಕಾರದ ನೆರವು | ನಿಮ್ಮದೇ ಆದ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿಗಾಗಿ ಹೀಗೆ ಅರ್ಜಿ ಹಾಕಿ…

ಫಲಿತಾಂಶ ಪ್ರಕಟಣೆ ಹೇಗೆ ಪರಿಶೀಲಿಸಬಹುದು?

ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು https://karresults.nic.in ಹಾಗೂ https://sslc.karnataka.gov.in ಅಧಿಕೃತ ವೆಬ್‌ಸೈಟ್’ಗಳ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.

2025ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ನೀಡಲಿದೆ. ಸರಿಯಾದ ಸಮಯದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಬಾರಿ ಫಲಿತಾಂಶ ಸಮಯಕ್ಕೆ ಸರಿಯಾಗಿ ಪ್ರಕಟವಾಗುತ್ತದೆ ಎಂಬ ನಂಬಿಕೆಯಿದೆ. ವಿದ್ಯಾರ್ಥಿಗಳು ಶಾಂತ ಚಿತ್ತದಿಂದ ಕಾಯಬೇಕು ಮತ್ತು ಮುಂದಿನ ಹಂತಗಳಿಗೂ ಸಿದ್ಧರಾಗಬೇಕು.

RTE Free Education Admission- ಆರ್‌ಟಿಇ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ | ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯುವ ಸದಾವಕಾಶ


Spread the love
WhatsApp Group Join Now
Telegram Group Join Now
error: Content is protected !!