85 crore Rupee Crop insurance Released : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಬೆಳೆ ವಿಮೆ ಹಣ ನೇರವಾಗಿ ಜಮಾ ಆಗುತ್ತಿದೆ.
ಕಳೆದ 2023-24ರ ಮುಂಗಾರಿನಲ್ಲಿ ರಾಜ್ಯದ 19.14 ಲಕ್ಷ ರೈತರು ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು. 1,791 ಕೋಟಿ ರೂಪಾಯಿ ಬೆಳೆ ವಿಮೆ ಈಗಾಲೇ ಇತ್ಯರ್ಥವಾಗಿದೆ. ಬಾಕಿ ಉಳಿದ ಪರಿಹಾರವನ್ನು ಶೀಘ್ರ ವಿತರಣೆ ಮಾಡಲು ಕೃಷಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಹಂತಹಂತವಾಗಿ ವಿಮಾ ಪರಿಹಾರ ಜಮಾ ಆಗುತ್ತಿದೆ.
ಎಷ್ಟೆಷ್ಟು ಬೆಳೆ ವಿಮೆ ಪರಿಹಾರ ಸಿಗುತ್ತದೆ?
ನೋಂದಾಯಿತ ಬೆಳೆಗಳಿಗೆ ಆಯಾ ಬೆಳೆಗಳಿಗೆ ಅನುಗುಣವಾಗಿ ಬೆಳೆ ವಿಮೆ ಪಾವತಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 29,000 ರೂಪಾಯಿಂದ 86,000 ರೂಪಾಯಿ ವರೆಗೂ ಬೆಳೆಹಾನಿ ಪರಿಹಾರವಾಗಿ ಸಿಗುತ್ತಿದೆ. ತೋಟಗಾರಿಕೆ ಬೆಳೆಗಳಾದರೆ ಇದಕ್ಕಿಂತಲೂ ಜಾಸ್ತಿ ಬೆಳೆ ವಿಮೆ ಪರಿಹಾರ ಸಿಗುತ್ತದೆ.
ಈಚೆಗೆ ಉತ್ತರ ಕನ್ನಡ, ಕಲಬುರಗಿ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ಜಮಾ ಪರಿಹಾರ ಕುರಿತ ಅಧಿಕ್ತ ಮಾಹಿತಿಯನ್ನು ಆಯಾ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದರು. ಇದೀಗ ವಿಜಯನಗರ ಜಿಲ್ಲೆ ರೈತರಿಗೆ ಒಟ್ಟು 85.76 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆಯಾಗಿದೆ.
2023-24ನೇ ಸಾಲಿನ ಮುಂಗಾರು ಹಂಗಾಮಿನ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿದ ರೈತರಿಗೆ ಮೆಕ್ಕೆಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ನವಣೆ, ರಾಗಿ, ಈರುಳ್ಳಿ, ಟೊಮೊಟೊ ಬೆಳೆಗಳಿಗೆ ಒಟ್ಟು 85.76 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆಯಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರ ಮನೆ ಬಾಗಿಲಲ್ಲೇ ಪಹಣಿ-ಆಧಾರ್ ಲಿಂಕ್ | ಗ್ರಾಮ ಆಡಳಿತಾಧಿಕಾರಿಗಳಿಗೆ ಟಾರ್ಗೆಟ್ Aadhaar RTC Linking

ನಿಮಗೆ ಬೆಳೆ ವಿಮೆ ಹಣ ಬಂತಾ? ಹೀಗೆ ಚೆಕ್ ಮಾಡಿ…
ರಾಜ್ಯದ ಬಹುತೇಕ ಜಿಲ್ಲೆಗಳ ರೈತರ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಬೆಳೆ ವಿಮೆ ಪರಿಹಾರ ಜಮೆಯಾಗುತ್ತಿದ್ದು; ರೈತರು ತಮ್ಮ ಖಾತೆ ಹಣ ಜಮಾ ಆಗಿದೆಯೋ? ಇಲ್ಲವೋ? ಎಂಬುವುದನ್ನು ಮೊಬೈಲ್’ನಲ್ಲಿಯೇ ಚೆಕ್ ಮಾಡಬಹುದಾಗಿದೆ…
ಕರ್ನಾಟಕ ಸರಕಾರದ ‘ಸಂರಕ್ಷಣೆ’ ಜಾಲತಾಣದಲ್ಲಿ ನೀವು 2023-24ರ ಕಾಲಂ ಕೆಳಗಡೆ Kharif /ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ/ Go ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪುಟ ಓಪನ್ ಆಗುತ್ತದೆ. ಅಲ್ಲಿ ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಿದರೆ, ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ.
ಪರ್ಸನಲ್, ಮೊಬೈಲ್ ನಂಬರ್ ಮತ್ತು ಆಧಾರ್ ಎಂಬ ಮೂರು ಆಯ್ಕೆಗಳಿರುತ್ತವೆ. ಅದರಲ್ಲಿ ಮಧ್ಯದಲ್ಲಿರುವ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿ, ನೀವು ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತೀರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಬಳಿಕ ಕೆಳಗಡೆ ಕಾಣುವ ಸರಿಯಾದ ಕ್ಯಾಪ್ಟಾಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಹಣ ಜಮಾ ವಿವರ ಸಿಗುತ್ತದೆ.
ರೈತರಿಗೆ ಸಿಗುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು Horticulture Department Subsidy Schemes
ಬೆಳೆ ವಿಮೆ ಹಣ ಚೆಕ್ ಮಾಡುವ ಲಿಂಕ್ : ಇಲ್ಲಿ ಒತ್ತಿ
ಒಂದು ವೇಳೆ ರೈತರಿಗೆ ಬೆಳೆ ವಿಮೆ ಪರಿಹಾರ ಕುರಿತು ಯಾವುದೇ ಮಾಹಿತಿ ದೊರೆಯದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.