ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಹೊಸ ರಜೆ ಸೌಲಭ್ಯಗಳೇನು? ಯಾವ್ಯಾವ ನೌಕರರಿಗೆ ಎಷ್ಟೆಷ್ಟು ರಜೆ ಸಿಗಲಿದೆ? 7th Pay Commission Leave Facility Recommendations

Spread the love

7th Pay Commission Leave Facility Recommendations : ರಾಜ್ಯ ಸರ್ಕಾರಿ ನೌಕರರಿಗೆ (State Government Employees) ಸಿಗಲಿರುವ ವಿವಿಧ ಸರ್ಕಾರಿ ಸೌಲಭ್ಯಗಳ (Govt facility) ಪೈಕಿ ರಜಾ ಸೌಲಭ್ಯಗಳು ಕೂಡ ಒಂದು. 7ನೇ ವೇತನ ಆಯೋಗವು (7th Pay Commission) ಸದರಿ ರಜಾ ಸೌಲಭ್ಯಗಳ ವಿಚಾರವಾಗಿ ಮಾಡಿದ ಶಿಫಾರಸುಗಳೇನು? ಯಾವ್ಯಾವ ನೌಕರರಿಗೆ ಎಷ್ಟೆಷ್ಟು ರಜೆ ಸಿಗಲಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

ಗಳಿಕೆ ರಜೆ ನಗದೀಕರಣ
WhatsApp Group Join Now
Telegram Group Join Now

ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ 30 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಅವರು ಪ್ರತಿ ವರ್ಷವೂ 15 ದಿನಗಳ ಗಳಿಕೆ ರಜೆ ನಗದೀಕರಣವನ್ನು ಪಡೆಯಬಹುದು ಮತ್ತು ನಿವೃತ್ತಿಯ ವರೆಗೆ 300 ದಿನಗಳ ಗಳಿಕೆ ರಜೆಯನ್ನು ಸಂಗ್ರಹಿಸಿಕೊಳ್ಳಬಹುದು.

ಆದರೆ, ಈಗಿರುವ ವರ್ಷಕ್ಕೆ 15 ದಿನಗಳ ಗಳಿಕೆ ರಜೆ ನಗದೀಕರಣ ಸೌಲಭ್ಯದ ಬದಲಾಗಿ 30 ದಿನಗಳಿಗೆ ಮತ್ತು 300 ದಿನಗಳ ಗಳಿಕೆ ರಜೆಯ ಸಂಗ್ರಹಣೆಯನ್ನು 400 ದಿನಗಳಿಗೆ ಹೆಚ್ಚಿಸುವಂತೆ ಹಲವು ನೌಕರರ ಸಂಘಗಳು ಮತ್ತು ವೈಯಕ್ತಿಕವಾಗಿ ನೌಕರರಿಂದ ಅನೇಕ ಮನವಿಗಳು 7ನೇ ವೇತನ ಆಯೋಗಕ್ಕೆ ಸಲ್ಲಿಕೆಯಾಗಿವೆ.

ಗಳಿಕೆ ರಜೆ ನಗದೀಕರಣ (Encashment of earned leave) ಮಾಡಬಹುದಾದ ಭಾಗದಲ್ಲಿ ಮತ್ತಷ್ಟು ಕಡಿತಗೊಳಿಸುವುದರಿಂದ, ಗಳಿಕೆ ರಜೆಯ ಉದ್ದೇಶಕ್ಕೆ ವಿರುದ್ಧವಾಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಈ ಪದ್ಧತಿಯು ಇತರೆ ನೆರೆ ರಾಜ್ಯಗಳಲ್ಲಿ ಜಾರಿಯಲ್ಲಿ ಇರುವಂತೆಯೇ ಇದೆ. ಹೀಗಾಗಿ ಪ್ರಸ್ತುತ ಜಾರಿಯಲ್ಲಿರುವ ಗಳಿಕೆ ರಜೆ ನಗದೀಕರಣ ಮತ್ತು ಗಳಿಕೆ ರಜೆ ಸಂಗ್ರಹಣೆ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು 7ನೇ ವೇತನ ಆಯೋಗ ಶಿಫಾರಸ್ಸು ಮಾಡಿಲ್ಲ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಮನೆ ಬಾಡಿಗೆ ಭತ್ಯೆ ಎಷ್ಟು ಸಿಗಲಿದೆ? | ಜಿಲ್ಲಾವಾರು ಹೊಸ ಎಚ್‌ಆರ್‌ಎ ದರ ಇಲ್ಲಿದೆ… Govt Employees House Rent Allowance

ರಜಾ ಪ್ರಯಾಣ ರಿಯಾಯ್ತಿ (Leave Travel Concession- LTC) ಸೌಲಭ್ಯ

ಪ್ರಸ್ತುತ ಸರ್ಕಾರಿ ನೌಕರರಿಗೆ ತಮ್ಮ ಸೇವಾವಧಿಯಲ್ಲಿ 2 ಬಾರಿ ಭಾರತದಲ್ಲಿನ ಯಾವುದೇ ಸ್ಥಳಕ್ಕೆ ಪ್ರವಾಸ ಕೈಗೊಳ್ಳಲು ‘ರಜಾ ಪ್ರಯಾಣ ರಿಯಾಯಿತಿ’ ಸೌಲಭ್ಯ ನೀಡಲಾಗುತ್ತದೆ. ಸೇವಾವಧಿಯ ಆರಂಭದಿAದ 15 ವರ್ಷಗಳ ವರೆಗೆ ಒಂದು ಬಾರಿ ಮತ್ತು 16ನೇ ವರ್ಷದ ಸೇವೆಯಿಂದ ವಯೋನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದ ವರೆಗೆ 2ನೇ ಬಾರಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಂಜಡಿe, 7ನೇ ವೇತನ ಆಯೋಗವು ಸದರಿ ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಸೇವೆಯಲ್ಲಿ 2 ಬಾರಿಯಿಂದ 3 ಬಾರಿಗೆ ಹೆಚ್ಚಿಸಲು ಶಿಫಾರಸು ಮಾಡಿದೆ. 7ನೇ ವೇತನ ಆಯೋಗ ಶಿಫಾರಸು ಮಾಡಿ ರಜಾ ಪ್ರಯಾಣ ರಿಯಾಯಿತಿ ಸೌಲಭ್ಯ ಅವಧಿ ಕೆಳಗಿನಂತಿದೆ:

  • 1ನೇ ವರ್ಷದ ಸೇವೆಯಿಂದ 10ನೇ ವರ್ಷದ ವರೆಗೆ ಒಂದು ಬಾರಿ
  • 11ನೇ ವರ್ಷದ ಸೇವೆಯಿಂದ 20ನೇ ವರ್ಷದ ಸೇವಾವಧಿ ವರೆಗೆ 2ನೇ ಬಾರಿ
  • 21ನೇ ವರ್ಷದ ಸೇವೆಯಿಂದ ಅವರ ನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದ ವರೆಗೆ 3ನೇ ಬಾರಿ

ಇದನ್ನೂ ಓದಿ: 7ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಸಿಗುವ ಸಾಲ ಮತ್ತು ಮುಂಗಡ ಸೌಲಭ್ಯಗಳು 7th Pay Commission Advances for Govt Employees

7th Pay Commission Leave Facility Recommendations
ಆರೈಕೆ ನೀಡುವ ರಜೆ ಸೌಲಭ್ಯ

ಇತ್ತೀಚೆಗೆ ನೌಕರರ ಹೆತ್ತವರು, ಪತಿ/ಪತ್ನಿಯ ಹೆತ್ತವರು ಅಥವಾ ಕುಟುಂಬದ ಹಿರಿಯರು ಅಥವಾ ತೀವ ಅಸ್ವಸ್ಥತೆಯಿಂದ ನರಳುತ್ತಿರುವ ಪುಟ್ಟ ಮಕ್ಕಳ ಆರೈಕೆಯಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ನಗರ ಪ್ರದೇಶದ ವಿಭಕ್ತ ಕುಟುಂಬಗಳಲ್ಲಿ ಇಂತಹ ಪ್ರಕರಣ ಹೆಚ್ಚಿನ ಪ್ರಮಾಣದಲ್ಲಿದೆ. 7ನೇ ವತನ ಆಯೋಗವು ಈ ಕೆಳಗಿನ ಷರತ್ತು ಮತ್ತು ನಿಬಂಧನೆಗಳೊ೦ದಿಗೆ ಆರೈಕೆ ನೀಡುವ ರಜೆಯನ್ನು (Caring leave facility) ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

  • ಯಾವುದೇ ಲಿಂಗ ತಾರತಮ್ಯವಿಲ್ಲದೆ ರಾಜ್ಯ ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಎರಡು ಬಾರಿ ಈ ರಜೆಯನ್ನು ಪಡೆಯಬಹುದಾಗಿದೆ.
  • ಒಟ್ಟಾರೆ ಸೇವಾವಧಿಯಲ್ಲಿ ಗರಿಷ್ಠ 180 ದಿನಗಳ (6 ತಿಂಗಳು) ಆರೈಕೆ ನೀಡುವ ರಜೆಯನ್ನು ಪಡೆಯಬಹುದಾಗಿದೆ.
  • ರಜೆ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರು ರಜೆ ತೆರಳುವ ಮುನ್ನ ಪಡೆಯುತ್ತಿದ್ದ ವೇತನದ ಶೇ.50 ರಷ್ಟು ಮೊತ್ತಕ್ಕೆ ಅರ್ಹರಾಗುತ್ತಾರೆ.
  • ಪ್ರತಿ ಬಾರಿಯೂ ಆರೈಕೆ ನೀಡುವ ರಜೆಯನ್ನು ಪಡೆದಾಗ, ಕನಿಷ್ಠ ರಜೆಯ ಅವಧಿಯು ಒಂದು ತಿಂಗಳಿಗಿ೦ತಲೂ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ ಮೂರು ತಿಂಗಳವರೆಗೆ ರಜೆ ಪಡೆಯಬಹುದು.
  • ಯಾವ ವರ್ಷದಲ್ಲಿ ಈ ರಜೆಯನ್ನು ಪಡೆಯುತ್ತಾರೋ ಆ ವರ್ಷದಲ್ಲಿ ಗಳಿಕೆ ರಜೆ ನಗದೀಕರಣಕ್ಕೆ ನೌಕರರು ಅರ್ಹರಾಗಿರುವುದಿಲ್ಲ. ಬಳಸಿಕೊಳ್ಳದ ಆರೈಕೆ ನೀಡುವ ರಜೆಯನ್ನು ನಗದೀಕರಣ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.
  • ಆರೈಕೆ ರಜೆಯನ್ನು ಇತರೆ ಯಾವುದೇ ವಿಧವಾದ ರಜೆಗಳೊಂದಿಗೆ ವಿಲೀನಗೊಳಿಸುವಂತಿಲ್ಲ ಅಥವಾ ಇತರೆ ಯಾವುದೇ ವಿಧವಾದ ರಜೆಯ ಖಾತೆಯಿಂದ ಕಡಿತಗೊಳಿಸುವಂತಿಲ್ಲ.
  • ಸಕ್ಷಮ ಪ್ರಾಧಿಕಾರವು ಮಂಜೂರು ಮಾಡಿದ ರಜೆಯ ವಿವರಗಳನ್ನು ನೌಕರರ ಸೇವಾ ಪುಸ್ತಕದಲ್ಲಿ ನಮೂದಿಸಬೇಕು.

ಈ ನಿಬಂಧನೆ ಮತ್ತು ಷರತ್ತುಗಳು ಕೇವಲ ನಿದರ್ಶನತ್ಮಕವಾಗಿವೆ. ಇದನ್ನು ಜಾರಿಗೊಳಿಸುವ ವಿಧಿ-ವಿಧಾನಗಳನ್ನು ಮತ್ತು ನಿಬಂಧನೆ ಮತ್ತು ಷರತ್ತುಗಳನ್ನು ರಾಜ್ಯ ಸರ್ಕಾರವು ನಿಗದಿಪಡಿಸಬಹುದು.

ಇದನ್ನೂ ಓದಿ: 7ನೇ ವೇತನ ಆಯೋಗದ ಪ್ರಯೋಜನ ಯಾವೆಲ್ಲ ನೌಕರರಿಗೆ ಸಿಗಲಿದೆ? | ಸರ್ಕಾರಿ ನೌಕರರು, ನಿವೃತ್ತ ನೌಕರರ ಸಮಗ್ರ ಪಟ್ಟಿ ಇಲ್ಲಿದೆ… Govt employees covered by 7th Pay Commission

ಮಾತೃತ್ವ ರಜೆ ಸೌಲಭ್ಯ

ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹಿಳಾ ನೌಕರರು ಮಾತೃತ್ವ ಪ್ರಯೋಜನ ಕಾಯಿದೆ, 1961ರಡಿ ಗರ್ಭ ಧರಿಸಿದ ಮತ್ತು ಹೆರಿಗೆಯ ಅವಧಿಯಲ್ಲಿ ಒಟ್ಟು 26 ವಾರಗಳ ಮಾತೃತ್ವ ರಜೆಯನ್ನು (Maternity leave facility) ತೆಗೆದುಕೊಳ್ಳಲು ಮತ್ತು ಹರಿಗೆಗೆ ಮೊದಲು 8 ವಾರಗಳ ರಜೆಯನ್ನು ಪಡೆಯಲು ಹಾಗೂ ಹೆರಿಗೆಯ ನಂತರ ಅದನ್ನು 26 ವಾರಗಳಿಗೆ ವಿಸ್ತರಿಸಿಕೊಳ್ಳುವ ಅವಕಾಶವಿರುತ್ತದೆ.

ಮಹಿಳಾ ಸರ್ಕಾರಿ ನೌಕರರಿಗೆ ಅವರ ಸೇವಾವಧಿಯಲ್ಲಿ ಈ ಸೌಲಭ್ಯವು ಲಭ್ಯವಾಗುತ್ತದೆ. ಒಂದುವೇಳೆ ಸೇವೆಗೆ ಸೇರುವ ಮೊದಲೇ ಹೆರಿಗೆಯಾಗಿದ್ದು ಮತ್ತು ಸೇವೆಗೆ ಸೇರುವ ಸಮಯದಲ್ಲಿ ಹಾಲುಣಿಸುವ ತಾಯಿಯಾಗಿದ್ದರೂ ಸಹ ಮಹಿಳಾ ನೌಕರರು ಈ ಸೌಲಭ್ಯವನ್ನು ಪಡೆಯಲಾಗುವುದಿಲ್ಲ.

ಸೇವೆಗೆ ಸೇರುವ ಮೊದಲು ಮಗುವಿಗೆ ಜನ್ಮ ನೀಡಿದ ಮತ್ತು ಸೇವೆಗೆ ಸೇರುವ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯಲ್ಲಿ ತೊಡಗಿರುವ ಮಹಿಳಾ ಉದ್ಯೋಗಿಗಳಿಗೆ ಪ್ರಯೋಜನವನ್ನು ವಿಸ್ತರಿಸಲು ಇದು ಒಳಗೊಳ್ಳುವಿಕೆಯ ಕ್ರಮ ಆಗುತ್ತದೆ. ಆದ್ದರಿಂದ ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ 18 ವಾರಗಳ ಹೆರಿಗೆ ರಜೆಯನ್ನು ವಿಸ್ತರಿಸಲು 7ನೇ ವೇತನ ಆಯೋಗವು ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಹೆಚ್ಚುವರಿ ಸಂಬಳ ಎಷ್ಟು? ಹೀಗೆ ಚೆಕ್ ಮಾಡಿ… Karnataka Govt Employees Salary Calculation


Spread the love
WhatsApp Group Join Now
Telegram Group Join Now

1 thought on “ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಹೊಸ ರಜೆ ಸೌಲಭ್ಯಗಳೇನು? ಯಾವ್ಯಾವ ನೌಕರರಿಗೆ ಎಷ್ಟೆಷ್ಟು ರಜೆ ಸಿಗಲಿದೆ? 7th Pay Commission Leave Facility Recommendations”

Leave a Comment

error: Content is protected !!