ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ ಆಗಲಿದೆ? ನಿಮ್ಮ ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ… 7th Pay Commission Calculation

Spread the love

7th Pay Commission Calculation : ಕರ್ನಾಟಕ ಸರಕಾರಿ ನೌಕರರಿಗೆ (Karnataka Govt Employees) ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ವರದಿಯನ್ನು ಅನುಷ್ಠಾನಗೊಳಿಸಿದೆ. ಈ ಕುರಿತು ಈಗಾಗಲೇ ಸರ್ಕಾರದಿಂದ ಅಧಿಕೃತ ಆದೇಶವೂ ಪ್ರಕಟವಾಗಿದ್ದು; ಇದೇ ಆಗಸ್ಟ್ ತಿಂಗಳಿ೦ದ ನೌಕರರಿಗೆ ಪರಿಷ್ಕೃತ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯಗಳು ಲಭ್ಯವಾಗಲಿವೆ.

ವೇತನ ಲೆಕ್ಕಾಚಾರಕ್ಕೆ ವೆಬ್‌ಸೈಟ್ ಲಾಂಚ್
WhatsApp Group Join Now
Telegram Group Join Now

ಎಲ್ಲಾ ಸರಕಾರಿ ನೌಕರರು ತಮಗೆ ಅನ್ವಯವಾಗುವ ವೇತನವನ್ನು ಪರಿಶೀಲಿಸುತ್ತಿದ್ದು; ಈ ಕೆಲಸವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಆನ್‌ಲೈನ್’ನಲ್ಲಿ ನೌಕರರ ವೇತನವನ್ನೂ ಕಂಡುಕೊಳ್ಳಲು ಪ್ರತ್ಯೇಕ ವೆಬ್‌ಸೈಟ್ ಅಭಿವೃದ್ದಿಗೊಳಿಸಲಾಗಿದೆ. https://karpay.calculator.cafe/ ವೆಬ್‌ಸೈಟ್ ಮೂಲಕ ನೌಕರರು 7ನೇ ವೇತನವನ್ನು ಕಂಡುಕೊಳ್ಳಬಹುದಾಗಿದೆ.

ಪರಿಷ್ಕೃತ ವೇತನವನ್ನು 2024ರ ಆಗಸ್ಟ್ 1ರಿಂದ ಜಾರಿಗೊಳಿಸಲು ಸರ್ಕಾರ ಕಳೆದ ಜುಲೈ 23ರಂದು ಅಧಿಕೃತ ಆದೇಶ ಹೊರಡಿಸಿದೆ. ಆ ಪ್ರಕಾರ ಆಗಸ್ಟ್ ತಿಂಗಳಿನಿ೦ದ ಸರ್ಕಾರಿ ನೌಕರರ ವೇತನ ಶೇ.27.5 ರಷ್ಟು ಹೆಚ್ಚಳವಾಗಲಿದೆ. ನಿವೃತ್ತ ನೌಕರರ ಪಿಂಚಣಿ ಕೂಡ ಏರಿಕೆಯಾಗಿದೆ.

ಇದನ್ನೂ ಓದಿ: 7ನೇ ವೇತನ ಆಯೋಗ ಜಾರಿ ಸರ್ಕಾರಿ ಆದೇಶ : ಸರಕಾರಿ ನೌಕರರಿಗೆ ಆಗಸ್ಟ್ ನಿಂದ ಸಿಗುವ ಸವಲತ್ತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Govt Employees Revised Pay Scale List

‘ಸಿ’ ಮತ್ತು ‘ಡಿ’ ದರ್ಜೆ ನೌಕರರ ಪರಿಷ್ಕೃತ ವೇತನ

‘ಎ’ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ‘ಸಿ’ ಮತ್ತು ‘ಡಿ’ ದರ್ಜೆ ನೌಕರರಿಗೆ 2022ರ ಜುಲೈ 1ರಂದು (6ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ ಒಟ್ಟು 29,005 ರೂಪಾಯಿ ಸಿಗುತ್ತಿತ್ತು.

ಇದೀಗ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ (7ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ 29,005 ರೂಪಾಯಿಗೆ ಹೆಚ್ಚುವರಿಯಾಗಿ 6,940 ರೂಪಾಯಿ ಸಿಗಲಿದೆ.

7th Pay Commission Calculation

ಇದನ್ನೂ ಓದಿ: ಸರಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗಲಿದೆ ಬಂಪರ್ ಸಂಬಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ… Revised Salary of Govt Employees

‘ಎ’ ಮತ್ತು ‘ಬಿ’ ದರ್ಜೆ ನೌಕರರ ಪರಿಷ್ಕೃತ ವೇತನ

ಅದೇ ರೀತಿ ಎ ವಲಯದಲ್ಲಿ ಕಾರ್ಯ ನಿರ್ವಹಿಸುವ ಎ ಮತ್ತು ಬಿ ದರ್ಜೆ ನೌಕರರಿಗೆ 2022ರ ಜುಲೈ 1ರ (6ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ ಒಟ್ಟು 35,595 ರೂಪಾಯಿ ಸಿಗುತ್ತಿತ್ತು.

ಇದೀಗ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ (7ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ 35,595 ರೂಪಾಯಿಗೆ ಹೆಚ್ಚುವರಿಯಾಗಿ 8,050 ರೂಪಾಯಿ ಸಿಗಲಿದೆ.

ನಿವೃತ್ತ ಮತ್ತು ಸೇವೆಯಲ್ಲಿ ಮೃತರಾದವರ ಪಿಂಚಣಿ ಮತ್ತು ಕುಟುಂಬ ಪಿಂಚಣಿ, ಮನೆ ಬಾಡಿಗೆ, ನಗರ ಪರಿಹಾರ, ವೈದ್ಯಕೀಯ ಭತ್ಯೆ, ನೌಕರರ ಸಾಮೂಹಿಕ ವಿಮಾ ಯೋಜನೆಯಲ್ಲೂ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಪಿಯು ಕಾಲೇಜ್ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ | 814 ಹುದ್ದೆಗಳ ನೇಮಕ PU Lecturer Recruitment 2024

ಮೊಬೈಲ್’ನಲ್ಲಿಯೇ ನಿಮ್ಮ ವೇತನ ಚೆಕ್ ಮಾಡಿ…

ಕರ್ನಾಟಕ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಂಡ ಬಳಿಕ ಆಗುವ ವೇತನ ಹೆಚ್ಚಳವನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿಯೇ ವೆಬ್‌ಸೈಟ್ ತಯಾರು ಮಾಡಲಾಗಿದ್ದು; ಈ ವೆಬ್‌ಸೈಟ್ ಮೂಲಕ ವೇತನ ಎಷ್ಟು ಹೆಚ್ಚಳವಾಗಿದೆ? ಆಗಸ್ಟ್ ತಿಂಗಳಿAದ ತಮಗೆ ಸಿಗಲಿರುವ ಹೆಚ್ಚುವರಿ ಸೌಲಭ್ಯಗಳನ್ನು ಮೊಬೈಲ್’ನಲ್ಲಿ ಚೆಕ್ ಮಾಡಿ ಲೆಕ್ಕ ಹಾಕಬಹುದು.

6ನೇ ವೇತನ ಆಯೋಗದಲ್ಲಿದ್ದ ನಿಮ್ಮ ಸಂಬಳ, ಭತ್ಯೆ ಸೌಲಭ್ಯಗಳು ಹಾಗೂ ಇದೀಗ 7ನ ವೇತನ ಆಯೋಗದಲ್ಲಿ ಸಿಗಲಿರುವ ಪರಿಷ್ಕೃತ ಸಂಬಳ, ಭತ್ಯೆ ಹಾಗೂ ಕುಟುಂಬ ಪಂಚಣಿ ಸೌಲಭ್ಯಗಳ ವಿವರವನ್ನು ಈ ಕೆಳಗಿನ ಸರ್ಕಾರಿ ವೆಬ್‌ಸೈಟ್ ಲಿಂಕ್ ಬಳಸಿ ಚೆಕ್ ಮಾಡಿಕೊಳ್ಳಿ…. 👇

ವೆಬ್‌ಸೈಟ್ ಲಿಂಕ್ : ಇಲ್ಲಿ ಒತ್ತಿ

7ನೇ ವೇತನ ಆಯೋಗ ವರದಿ ಜಾರಿಯ ಅಧಿಕೃತ ಆದೇಶ ಪ್ರತಿ ಹಾಗೂ ಪರಿಷ್ಕೃತ ವೇತನ ಶ್ರೇಣಿ ಪಟ್ಟಿ (Download)

ಇದನ್ನೂ ಓದಿ: ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information


Spread the love
WhatsApp Group Join Now
Telegram Group Join Now

7 thoughts on “ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ ಆಗಲಿದೆ? ನಿಮ್ಮ ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ… 7th Pay Commission Calculation”

Leave a Comment

error: Content is protected !!