RTE ಅರ್ಜಿ ಸಲ್ಲಿಕೆ ಹೇಗೆ? ಯಾರೆಲ್ಲಾ ಅರ್ಹರು? ಏನೆಲ್ಲಾ ದಾಖಲೆಗಳು ಬೇಕು? ಈ ಕುರಿತ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಪ್ರತಿಯೊಬ್ಬ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಮಹತ್ತ್ವಾಕಾಂಕ್ಷೆಯೊಂದಿಗೆ ‘ಶಿಕ್ಷಣ ಹಕ್ಕು ಕಾಯ್ದೆ-ಆರ್‌ಟಿಇ’ ಅನುಷ್ಠಾನಗೊಳಿಸಲಾಗಿದೆ. ಸದರಿ ಕಾಯ್ದೆಯಡಿಯಲ್ಲಿ 2025-26ನೇ ಸಾಲಿಗೆ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಕಳೆದ ಏಪ್ರಿಲ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಮೇ 1ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ನೀವೂ ಅರ್ಜಿ ಹಾಕಬಹುದು.
ಖಾಸಗಿ ಶಾಲೆಗಳಲ್ಲಿ 25% ಉಚಿತ ಸೀಟು
2009ರಲ್ಲಿ ಜಾರಿಯಾದ ಶಿಕ್ಷಣದ ಹಕ್ಕು ಕಾಯ್ದೆ (Right to Education Act – 2009) ಪ್ರಕಾರ, 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು ಎಂಬುದು ಸರ್ಕಾರದ ಧ್ಯೇಯವಾಗಿದೆ. ಈ ಕಾಯ್ದೆಯಡಿ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕನಿಷ್ಠ 25% ಸೀಟುಗಳನ್ನು ಅರ್ಹ ಮಕ್ಕಳಿಗೆ ಮೀಸಲಿಡಲಾಗಿದೆ.
ಅರ್ಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಬೇಕು. ಎಲ್ಲ ವರ್ಗದ ಮಕ್ಕಳಿಗೂ ಸಮಾನ ಶೈಕ್ಷಣಿಕ ಅವಕಾಶ ಕಲ್ಪಿಸಬೇಕು. ಗ್ರಾಮೀಣ ಮತ್ತು ಶೋಷಿತ ಸಮುದಾಯದ ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆ ಪ್ರದರ್ಶಿಸಲು ಮುಕ್ತ ಅವಕಾಶ ಸೃಷ್ಠಿಸಬೇಕು ಎಂಬುವುದು ಆರ್‌ಟಿಇ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ.
Women Loan Subsidy- ಮಹಿಳೆಯರಿಗಾಗಿಯೇ ಇರುವ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು
ಸಂಪೂರ್ಣ ಉಚಿತ ಶಿಕ್ಷಣ
- ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು 1ನೇ ತರಗತಿಗೆ ಪ್ರವೇಶ ಪಡೆಯಬಹುದು.
- ಯಾವುದೇ ಪ್ರವೇಶ ಶುಲ್ಕ, ವಾರ್ಷಿಕ ಶುಲ್ಕ ಅಥವಾ ಡೊನೇಷನ್ ಅಗತ್ಯವಿಲ್ಲ.
- ಮಕ್ಕಳ ಶೈಕ್ಷಣಿಕ ಖರ್ಚನ್ನು ಸರ್ಕಾರವೇ ಭರಿಸುತ್ತದೆ.
- ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ಉಚಿತ ಯುನಿಫಾರ್ಮ್, ಉಚಿತ ಮಧ್ಯಾಹ್ನ ಭೋಜನ ಇತ್ಯಾದಿ ಸೌಲಭ್ಯಗಳೂ ಇರುತ್ತವೆ.

ಯಾರೆಲ್ಲಾ ಅರ್ಜಿ ಹಾಕಬಹುದು?
- ಆರ್‌ಟಿಇ ಸೀಟು ಪಡೆಯಲು ಪ್ರಮುಖವಾಗಿ ಪೋಷಕರು ಮತ್ತು ಮಕ್ಕಳು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
- ಎಲ್‌ಕೆಜಿಗೆ 3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳು ವಯೋಮಿತಿ ಹೊಂದಿರಬೇಕು.
- 1ನೇ ತರಗತಿಗೆ 5 ವರ್ಷ 10 ತಿಂಗಳು ರಿಂದ 6 ವರ್ಷ 10 ತಿಂಗಳು ವಯೋಮಿತಿ ಇರಬೇಕು.
- ಪೋಷಕರ ವಾರ್ಷಿಕ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಬಿಪಿಎಲ್ ಕಾರ್ಡ್ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ಮಕ್ಕಳ ಜನನ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ನಿವಾಸ ದೃಢೀಕರಣ (ರೇಷನ್ ಕಾರ್ಡ್/ವೋಟರ್ ಐಡಿ/ಗ್ಯಾಸ್ಬಿಲ್/ಇತರೆ)
- ಪಾಸ್‌ಪೋರ್ಟ್ ಅಳತೆಯ ಫೋಟೋ (2 ಪ್ರತಿ)
ಅರ್ಜಿ ಸಲ್ಲಿಕೆ ಹೇಗೆ?
ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆರ್‌ಟಿಇ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರದ ಆರ್‌ಟಿಇ ವೆಬ್‌ಸೈಟ್ ಪ್ರವೇಶಿಸಲು ಮೊಲಿಗೆ ಇಲ್ಲಿ ಕ್ಲಿಕ್ ಮಾಡಿ…
ಮಗುವಿನ ಆಧಾರ್ ವಿವರ ನಮೂದಿಸಿ ಹಾಗೂ OTP ಮೂಲಕ ದೃಢೀಕರಣ ಮಾಡಿ. ವಿದ್ಯಾರ್ಥಿಯು ಅರ್ಹವೊ ಎಂಬುದನ್ನು ಪರಿಶೀಲಿಸಿ. ವಿದ್ಯಾರ್ಥಿಯ ವಿವರಗಳು, ಪೋಷಕರ ವಿವರಗಳನ್ನು ನಮೂದಿಸಿ.
ನಂತರ ಶಾಲೆಯ ಆಯ್ಕೆ (ನಿಮ್ಮ ನಿವಾಸದ 1 ಕಿಮೀ ಅಥವಾ 3 ಕಿಮೀ ವ್ಯಾಪ್ತಿಯ ಶಾಲೆಗಳು ಮಾತ್ರ ಲಭ್ಯ) ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿ ಪರಿಶೀಲಿಸಿ ಹಾಗೂ Submit ಕ್ಲಿಕ್ ಮಾಡಿ. ಅಪ್ಲಿಕೇಶನ್ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
Ration Card eKYC- ರೇಷನ್ ಕಾರ್ಡ್ ಹೊಂದಿರುವರರಿಗೆ ಸರ್ಕಾರದ ಪ್ರಮುಖ ಎಚ್ಚರಿಕೆ | ಸಂಪೂರ್ಣ ಮಾಹಿತಿ ಇಲ್ಲಿದೆ…
ಆರ್‌ಟಿಇ 2025-26 ಪ್ರವೇಶದ ವೇಳಾಪಟ್ಟಿ
- ಅರ್ಜಿ ಸಲ್ಲಿಕೆ ಆರಂಭ; ಏಪ್ರಿಲ್ 15
- ಅರ್ಜಿ ಸಲ್ಲಿಕೆ ಕೊನೇ ದಿನಾಂಕ: ಮೇ 12
- ಅರ್ಜಿಗಳ ದಾಖಲೆ ಪರಿಶೀಲನೆ: ಮೇ 14
- ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: ಮೇ 17
- ಮೊದಲ ಹಂತದ ಲಾಟರಿ ಆಧಾರಿತ ಸೀಟು ಹಂಚಿಕೆ: ಮೇ 21
- ಆಯ್ಕೆಯಾದ ಮಕ್ಕಳು ಶಾಲೆಗೆ ಪ್ರವೇಶ: ಮೇ ಕೊನೆಯ ವಾರ
ಹೇಗೆ ಆಯ್ಕೆ ಮಾಡಲಾಗುತ್ತದೆ?
ನೀವು ಸಲ್ಲಿಸಿದ ಆನ್‌ಲೈನ್ ಅರ್ಜಿಗಳನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಮೇ 17ರಂದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ನಂತರ ಲಾಟರಿ ಆಧಾರಿತ ಆಯ್ಕೆ ವಿಧಾನದಿಂದ ಸೀಟು ಹಂಚಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಮಕ್ಕಳಿಗೆ ಆಯ್ಕೆ ಪತ್ರ ನೀಡಲಾಗುತ್ತದೆ. ನಂತರ ಪೋಷಕರು ಮಕ್ಕಳನ್ನು ಆಯ್ಕೆಯಾದ ಶಾಲೆಯಲ್ಲಿ ಪ್ರವೇಶ ಪಡೆಯಬೇಕು.
ಅರ್ಜಿ ಸಲ್ಲಿಸುವಾಗ ಯಾವುದೇ ಕಾರಣಕ್ಕೂ ತಪ್ಪುಮಾಹಿತಿ ನೀಡಬೇಡಿ. ದಾಖಲೆಗಳು ಪೂರಕವಾಗಿರಬೇಕು. ವಿದ್ಯಾರ್ಥಿಯ ಆಯ್ಕೆ ಖಚಿತವಾದ ಮೇಲೆ ನಿಗದಿತ ಅವಧಿಯಲ್ಲಿ ಪ್ರವೇಶ ಪಡೆಯದಿದ್ದರೆ ಅವಕಾಶ ತಪ್ಪುತ್ತದೆ.
ಅರ್ಜಿ ಸಲ್ಲಿಕೆ ಲಿಂಕ್: Click Here
Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…