PUC Passed Central Government Jobs : 12ನೇ ತರಗತಿ ಪಾಸ್ ಮಾಡಿ, ಸರಕಾರಿ ನೌಕರಿ ಹುಟುಕಾಟದಲ್ಲಿ ತೊಡಗಿದ್ದರೆ ಅಂಥವರಿಗೆ ಅತಿ ಹೆಚ್ಚು ಸಂಬಳವಿರುವ ಕೇಂದ್ರ ಸರಕಾರದ ಒಂದಷ್ಟು ಹುದ್ದೆಗಳ ಪಟ್ಟಿ ಇಲ್ಲಿದೆ. ಸರಕಾರಿ ಸೇವೆ ಸಲ್ಲಿಸುವ ಹಂಬಲವುಳ್ಳ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗಳಿಗೆ ಪ್ರಯತ್ನಿಸಬಹುದು. ಪ್ರತೀ ವರ್ಷವೂ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಅದನ್ನು ನೋಡಿಕೊಂಡಿದ್ದು; ಅರ್ಜಿ ಸಲ್ಲಿಸಿದರೆ, ಖಂಡಿತವಾಗಿಯೂ ಉದ್ಯೋಗವಕಾಶ ಸಿಗಲಿದೆ…
1. ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದ (SSC) ಹುದ್ದೆಗಳು
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (Staff Selection Commission-SSC) ಪ್ರತಿವರ್ಷವು ದ್ವಿತೀಯ ಪಿಯುಸಿ ವಿದ್ಯಾರ್ಹತೆಯುಳ್ಳವರಿಗೆ ಪರೀಕ್ಷೆ ನಡೆಸಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ನೇಮಕ ಮಾಡುತ್ತದೆ. ಕೇಂದ್ರ ಸರಕಾರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಗುಂಪಿನ ಹುದ್ದೆಗಳಿಗೆ ಈ ನೇಮಕ ನಡೆಯುತ್ತದೆ.
ಮಲ್ಟಿಟಾಸ್ಕಿಂಗ್ ಸ್ಟಾಫ್, ಸ್ಟೆನೋಗ್ರಾಫರ್, ನಾನ್ ಟೆಕ್ನಿಕಲ್, ನಾನ್ ಗೆಜೆಟೆಡ್, ಅಕೌಂಟೆ೦ಟ್, ಕ್ಲರ್ಕ್, ಮೆಕ್ಯಾನಿಕಲ್ ವಿಭಾಗ ಚಾರ್ಜ್ಮನ್, ಕೋರ್ಟ್ ಮಾಸ್ಟರ್, ಕೇರ್ ಟೇಕರ್, ಸ್ಟಾಕ್‌ಮೆನ್, ಫೀಲ್ಡ್ ಮೆನ್, ಸೀನಿಯರ್ ಕನ್ಸರ್‌ವೇಷನ್ ಅಸಿಸ್ಟೆಂಟ್ ಹೀಗೆ ವೈವಿಧ್ಯಮಯ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ನಡೆಯುತ್ತದೆ.
ರಾಜ್ಯದ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಸೇರಿ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗಳು ಮೂರು ಹಂತಗಳಲ್ಲಿ ನಡೆಯುತ್ತವೆ. ಪ್ರತಿ ವರ್ಷವೂ ಸಹ ಈ ಹುದ್ದೆಗಳಿಗೆ ಪರೀಕ್ಷೆ (CHSL) ನಡೆಸಲಾಗುತ್ತದೆ.
ವೇತನ: ಈ ಹುದ್ದೆಗಳಿಗೆ ಆರಂಭಿಕ 25,000 ದಿಂದ 81,100 ರೂಪಾಯಿ ವರೆಗೆ ವೇತನ ಪಡೆಯಬಹುದು.
2. ರೈಲ್ವೆ ನೇಮಕಾತಿ ಮಂಡಳಿ ಹುದ್ದೆಗಳು
ನವದೆಹಲಿಯ ನಿಯಂತ್ರಣ ಮಂಡಳಿಯ (RRCB) ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ 21 ರೈಲ್ವೆ ನೇಮಕಾತಿ ಮಂಡಳಿಗಳು (RRB) ಭಾರತ ಸರ್ಕಾರದ ಅತಿದೊಡ್ಡ ನೇಮಕಾತಿ ಏಜೆನ್ಸಿಗಳಲ್ಲಿ ಒಂದಾಗಿವೆ. ಇವು ಎಲ್ಲಾ ಭಾರತೀಯ ರೈಲ್ವೆಯ ಇಲಾಖೆಗಳ ನೇರ ನೇಮಕಾತಿಗಳನ್ನು ಮಾಡುತ್ತದೆ. 7ನೇ ಕೇಂದ್ರ ವೇತನ ಆಯೋಗದ ಎಲ್ಲಾ ಗುಂಪು C (ತಾಂತ್ರಿಕ ಮತ್ತು ತಾಂತ್ರಿಕೇತರ) ಹುದ್ದೆಗಳಿಗೆ, ಹಂತ- II ರಿಂದ ಹಂತ- VIIರ ವರೆಗೆ ನೇಮಕಾತಿ ಮಾಡುವ ಕೆಲಸವನ್ನು ರೈಲ್ವೆ ನೇಮಕಾತಿ ಮಂಡಳಿಗಳು ಕಡ್ಡಾಯಗೊಳಿಸಿವೆ. ಈ ನಡುವೆ 2018ರಲ್ಲಿ ಹಂತ-I ಹುದ್ದೆಗಳಿಗೆ ಗಣಕ ಆಧಾರಿತ ಪರೀಕ್ಷೆ ನಡೆಸುವ ಆದೇಶವನ್ನೂ ನೀಡಲಾಯಿತು.
ಭಾರತೀಯ ರೈಲ್ವೆಯಲ್ಲಿ 12ನೇ ತರಗತಿ ಪಾಸಾದವರಿಗೆ ವಿವಿಧ ಹುದ್ದೆಗಳಿವೆ. ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ಹುದ್ದೆಗಳು ಎಂದು ಹೇಳಲಾಗುವ ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಜೂನಿಯರ್ ಟೈಮ್ ಕೀಪರ್, ಟೈನ್ ಕ್ಲರ್ಕ್, ಅಸಿಸ್ಟಂಟ್ ಲೋಕೋಪೈಲಟ್ ಮತ್ತು ಟೆಕ್ನೀಷಿಯನ್ (ಇಲೆಕ್ಟಿçಕಲ್ / ಮೆಕ್ಯಾನಿಕಲ್ / ಇಂಜಿನಿಯರಿ೦ಗ್ ಇತರೆ) ಟ್ರ‍್ಯಾಕ್ ಮೆಂಟೆನರ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ.
ವೇತನ: ಪಿಯುಸಿ ಅರ್ಹತೆಯ ಈ ರೈಲ್ವೆ ಹುದ್ದೆಗಳಿಗೆ 3.5 ಲಕ್ಷದಿಂದ 5.5 ಲಕ್ಷ ರೂಪಾಯಿ ವರೆಗೆ ಹುದ್ದೆವಾರು ವಾರ್ಷಿಕ ವೇತನ ನೀಡಲಾಗುತ್ತದೆ.
3. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹುದ್ದೆಗಳು
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯು (National Defence Academy -NDA) ಭಾರತೀಯ ಸೈನ್ಯ ಸೇವೆಗಳ ಜಂಟಿ ಸೇವಾ ಅಕಾಡೆಮಿಯಾಗಿದ್ದು, ಇಲ್ಲಿ ಮೂರೂ ಸೈನ್ಯ ವಿಭಾಗಗಳಾದ ಭೂ ಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆಯ ಕೆಡೆಟ್‌ಗಳಿಗೆ ತರಬೇತಿ ಮತ್ತು ನೇಮಕಾತಿ ನಡೆಸುತ್ತದೆ. ಪ್ರತಿ ವರ್ಷವೂ ಸೆಕೆಂಡ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಇಲ್ಲಿ ಉದ್ಯೋಗಕ್ಕೆ ಸೇರಲು ಅವಕಾಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿ ನೇಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹುದ್ದೆಗೆ ದ್ವಿತೀಯ ಪಿಯುಸಿ (10+2) ವಿದ್ಯಾರ್ಹತೆಯನ್ನು ಸ್ಕೂಲ್ ಎಜುಕೇಷನ್ ಬೋರ್ಡ್ ಅಥವಾ ಯಾವುದೇ ರಾಜ್ಯ ಶಿಕ್ಷಣ ಇಲಾಖೆ ಅಥವಾ ವಿಶ್ವವಿದ್ಯಾಲಯ ನಡೆಸುವ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ವರ್ಷಕ್ಕೆ ಎರಡು ಬಾರಿ ಈ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ.
ವೇತನ: ಎನ್‌ಡಿಎ ತರಬೇತಿ ಅವಧಿಯಲ್ಲೇ ಅಭ್ಯರ್ಥಿಗೆ ಸುಮಾರು 56,000 ರೂಪಾಯಿ ವರೆಗೆ ಸ್ಟೆöÊಫಂಡ್ ನೀಡಲಾಗುತ್ತದೆ. ನಂತರ ವಿವಿಧ ರ‍್ಯಾಂಕ್‌ಗಳಿಗೆ ಪ್ರಮೋಷನ್ ಪಡೆಯುವ ಮೂಲಕ ಮಾಸಿಕ 2,50,000 ರೂಪಾಯಿ ವೇತನದ ಹುದ್ದೆಗಳಿಗೆ ಏರಬಹುದು.
4. ಭಾರತೀಯ ಮಿಲಿಟರಿ ಹುದ್ದೆಗಳು
ಭಾರತೀಯ ಮಿಲಿಟರಿಯು (Indian National Army-INA) ಕೇಂದ್ರ ಸಶಸ್ತç ಪೊಲೀಸ್ ಪಡೆ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಇಂಡೊ-ಟಿಬೆಟಿಯನ್ ಬಾರ್ಡರ್ ಫೋರ್ಸ್, ಸಶಸ್ತç ಶೀಮಾ ಬಲ್, ಸೆಂಟ್ರಲ್ ಇಂಡಸ್ಟಿçಯಲ್ ಸೆಕ್ಯೂರಿಟಿ ಫೋರ್ಸ್ಗಳಿಗೆ ನೇರ ನೇಮಕಾತಿ ಮಾಡಲಾಗುತ್ತದೆ. ಭಾರತೀಯ ಸೇನೆಗೆ ನೇರ ನೇಮಕಾತಿ ಮೂಲಕ ಮಾತ್ರವಲ್ಲದೇ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ನೇವಿ ಅಕಾಡೆಮಿ, ಎನ್‌ಸಿಸಿ ವಿಶೇಷ ಎಂಟ್ರಿ ಸ್ಕೀಮ್, ಅಗ್ನಿಪಥದ ಅಗ್ನಿವೀರರು, ಎಸ್‌ಸಿಸಿ, ಜೆಎಜಿ, ಶಾರ್ಟ್ ಸರ್ವೀಸ್ ಕಮಿಷನ್ ಇತರೆ ಹಲವು ವಿಧಗಳಲ್ಲಿ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ.
ಶಾರ್ಟ್ ಸರ್ವೀಸ್ ಕಮಿಷನ್ ಹುದ್ದೆಗಳು, ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಹುದ್ದೆಗಳು, ಯುನಿವರ್ಸಿಟಿ ಎಂಟ್ರಿ ಹುದ್ದೆಗಳು, ಟೆಕ್ನಿಕಲ್ ಎಂಟ್ರಿ ಹುದ್ದೆಗಳು ಭಾರತೀಯ ಮಿಲಿಟರಿಯಲ್ಲಿದ್ದು; ಇವುಗಳಲ್ಲದೇ ಈಚೆಗೆ ಆರಂಭಿಸಿರುವ ‘ಅಗ್ನಿಪಥ’ ಯೋಜನೆಯ ಅಗ್ನಿವೀರರ ಹುದ್ದೆಗಳಿಗೆ ದ್ವಿತೀಯ ಪಿಯುಸಿ / 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ವೇತನ: ಈ ಹುದ್ದೆಗಳಿಗೆ ಸೇರುವ ಅಭ್ಯರ್ಥಿಗಳಿಗೆ ಆರಂಭಿಕ ವರ್ಷದಲ್ಲೇ ಪ್ರತಿ ತಿಂಗಳಿಗೆ 30,000 ರೂಪಾಯಿ ವೇತನ ನೀಡಲಾಗುತ್ತದೆ. ಅಲ್ಲದೇ ಈ ಸೇವೆಯ ಜತೆಗೆ ಡಿಗ್ರಿ ಕೋರ್ಸ್ ಅನ್ನು ಕೌಶಲ್ಯಾಧಾರಿತವಾಗಿ ಕಲಿಸಲಾಗಿರುತ್ತದೆ.
5. ಭಾರತೀಯ ಕರಾವಳಿ ಪಡೆ ಹುದ್ದೆಗಳು
ಭಾರತೀಯ ಶಸ್ತ್ರಾಸ್ತ್ರ ಸೇನಾ ಪಡೆಯ ಒಂದು ಉಪಶಾಖೆಯಾಗಿರುವ ಭಾರತೀಯ ಕರಾವಳಿ ಭದ್ರತಾ ಪಡೆಯು (Indian Coast Guard -ICG) ಭಾರತೀಯ ನೌಕಾಬಲ, ಭಾರತೀಯ ಮತ್ಸ್ಯ ಇಲಾಖೆ, ಆದಾಯ (ಸುಂಕ) ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯಗಳ ಪೋಲೀಸ್ ಪಡೆಗಳ ಜೊತೆ ನಿಕಟ ಸಹಕಾರದಲ್ಲಿ ಕೆಲಸ ಮಾಡುತ್ತದೆ.
ಇಂಡಿಯನ್ ಕೋಸ್ಟ್ ಗಾರ್ಡ್ನ ನಾವಿಕ್ ಜೆನೆರಲ್ ಡ್ಯೂಟಿ ಹುದ್ದೆಗಳಿಗೆ 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಗಾಗ ಅಧಿಸೂಚನೆ ಹೊರಡಿಸಲಾಗುತ್ತದೆ. ನಾವಿಕ್ ಜಿಡಿ ಮಾತ್ರವಲ್ಲದೇ ಯಾಂತ್ರಿಕ್, ಅಸಿಸ್ಟಂಟ್ ಕಮಾಂಡ೦ಟ್ ಎಂಬ ಹುದ್ದೆಗಳಿಗೂ ಪಿಯು ಪಾಸಾದವರು ಅರ್ಜಿ ಹಾಕಬಹುದು.
ವೇತನ: ಈ ಹುದ್ದೆಗಳಿಗೆ ಸೇರುವವರಿಗೆ ಮಾಸಿಕ 25,000 ದಿಂದ 37,500 ರೂಪಾಯಿ ವರೆಗೆ ಆರಂಭದಲ್ಲೇ ನೀಡಲಾಗುತ್ತದೆ.
6. ಗಡಿ ಭದ್ರತಾ ಪಡೆ ಹುದ್ದೆಗಳು
ಭಾರತೀಯ ಗಡಿ ಭದ್ರತಾ ಪಡೆಯು (Border Security Force-BSF) ಭಾರತದ ಪ್ರಾಥಮಿಕ ಗಡಿ ರಕ್ಷಣಾ ಸಂಘಟನೆಯಾಗಿದೆ. ಭಾರತದ ಒಕ್ಕೂಟದ ಐದು ಕೇಂದ್ರೀಯ ಸಶಸ್ತç ಪೋಲಿಸ್ ಪಡೆಗಳಲ್ಲಿ ಇದು ಒಂದಾಗಿದೆ.
ಗಡಿ ಭದ್ರತಾ ಪಡೆಯ ಎಸ್‌ಐ, ಗ್ರೂಪ್ ಬಿ ಹಾಗೂ ಸಿ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದವರಿಗೆ ವಿಫುಲ ಅವಕಾಶಗಳಿವೆ. ಆಗಾಗ ಬಿಎಸ್‌ಎಫ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಆ ಸಮಯದಲ್ಲಿ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ: ಪಿಯುಸಿ ವಿದ್ಯಾರ್ಹತೆಯ ಭಾರತೀಯ ಗಡಿ ಭದ್ರತಾ ಪಡೆಯ ಹುದ್ದೆಗಳಿಗೆ ಆರಂಭಿಕ 23,000 ರೂಪಾಯಿ ವೇತನ ಸಿಗಲಿದೆ.
7. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹುದ್ದೆಗಳು
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿಯೂ ಸಹ (Central Industrial Security Force-CISF) ಪಿಯುಸಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿದ್ದು; ಮುಖ್ಯವಾಗಿ ಹೆಡ್ ಕಾನ್ಸ್ಟೇಬಲ್ (ಜಿಡಿ) ಹುದ್ದೆಗಳಿಗೆ ದ್ವಿತೀಯು ಪಿಯುಸಿ /12ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು.
ವೇತನ: ಈ ಹುದ್ದೆಗಳಿಗೆ 25,000 ರೂಪಾಯಿ ಮಾಸಿಕ ವೇತನ ಇರುತ್ತದೆ. ಸೇವಾನುಭವದ ಮೇಲೆ ಗರಿಷ್ಟ 81,000 ರೂಪಾಯಿ ವರೆಗೂ ವೇತನವನ್ನು ಪಡೆಯಬಹುದು.
8. ಇಂಡೊ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆ ಹುದ್ದೆಗಳು
ಇಂಡೊ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ (indo tibetan border police force-ITBF) ಹೆಡ್ ಕಾನ್ಸ್ಟೇಬಲ್, ಅಸಿಸ್ಟಂಟ್ ಸಬ್‌ಇನ್ಸ್ಪೆಕ್ಟರ್ ಆಫ್ ಪೊಲೀಸ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು.
ವೇತನ: ಈ ಹುದ್ದೆಗಳಿಗೆ ಆರಂಭಿಕವಾಗಿಯೇ ರೂ.34,000 ಮಾಸಿಕ ವೇತನ ನೀಡಲಾಗುತ್ತದೆ.
2 thoughts on “ಪಿಯುಸಿ ಪಾಸಾದವರಿಗೆ ಕೇಂದ್ರ ಸರಕಾರಿಗೆ ಹುದ್ದೆಗಳು | ಅತೀ ಹೆಚ್ಚು ಸಂಬಳದ ಹುದ್ದೆಗಳ ಪಟ್ಟಿ ಇಲ್ಲಿದೆ… PUC Passed Central Government Jobs”