Karnataka Women Self Employment- ಮಹಿಳೆಯರಿಗೆ ಗ್ರಾಮ ಪಂಚಾಯತಿ ಮೂಲಕ ಸ್ವ ಉದ್ಯೋಗಕ್ಕೆ ತರಬೇತಿ ಮತ್ತು ಸಾಲ ಸೌಲಭ್ಯ | ಹೊಸ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ರಾಜ್ಯ ಸರ್ಕಾರ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ (Self-employment for women) ತರಬೇತಿ ಹಾಗೂ ಸಾಲ ಸೌಲಭ್ಯ (Training and loan facility) ಒದಗಿಸಲು ಹೊಸ ಯೋಜನೆ ಘೋಷಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಮಹಿಳೆಯರು ಆತ್ಮವಿಶ್ವಾಸದಿಂದ ತಮ್ಮದೇ ಆದ ವ್ಯವಹಾರ ಆರಂಭಿಸಿ ಆರ್ಥಿಕ ಸ್ವಾವಲಂಬನೆಗೆ ತಲುಪಲೆಂದು ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಇದಕ್ಕೆ ಪೂರಕವಾಗಿ ‘ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ’ (Savitri Bai Pule Mahila Sabalikarana Yojana) ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯು ಮಹಿಳೆಯರಿಗೆ ಕೌಶಲ ತರಬೇತಿಯ ಜೊತೆಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಸಾಲ ಸೌಲಭ್ಯ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುವ ಮೂಲಕ, ಗ್ರಾಮೀಣ ಆಧಾರಿತ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

New Ration Card- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್’ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

ಏನಿದು ಪುಲೆ ಮಹಿಳಾ ಸಬಲೀಕರಣ ಯೋಜನೆ?

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯ ಕೊರತೆಯ ಹಿನ್ನೆಲೆಯಲ್ಲಿ, ಮಹಿಳೆಯರಿಗೆ ಜೀವನೋಪಾಯಕ್ಕಾಗಿ ತರಬೇತಿ ಕೇಂದ್ರಗಳ ಅಗತ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ‘ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ’ಯನ್ನು ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು.

ಆ ಪ್ರಕಾರ ಇದೀಗ ‘ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ’ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಕೌಶಲಾಭಿವೃದ್ಧಿ ನಿಗಮ (karnataka skill development corporation- KSDC) ಈ ಯೋಜನೆ ಜವಾಬ್ದಾರಿ ವಹಿಸಿಕೊಂಡಿವೆ.

ಯೋಜನೆಯ ಪ್ರಮುಖ ಅಂಶಗಳು

ಸದರಿ ಯೋಜನೆಯ ಅಡಿಯಲ್ಲಿ ಪ್ರತಿ ಕೇಂದ್ರದಲ್ಲಿ 300 ಮಹಿಳೆಯರಿಗೆ ತರಬೇತಿ ನೀಡುವ ಯೋಜನೆ ಹಾಕಿಕೊಳ್ಳಲಾಗುತ್ತಿದ್ದು; ಒಟ್ಟು 30,000 ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುವುದು. ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

  • ಅನ್ವಯವಾಗುವ ಪ್ರದೇಶಗಳು: ರಾಜ್ಯದ 29 ಜಿಲ್ಲೆಗಳ 87 ಗ್ರಾಮ ಪಂಚಾಯಿತಿಗಳು, ಬೆಳಗಾವಿಯ 7, ತುಮಕೂರಿನ 6 ಸೇರಿ ಒಟ್ಟು 100 ಗ್ರಾಮ ಪಂಚಾಯಿತಿಗಳು
  • ಅರ್ಹ ಮಹಿಳೆಯರು: 18 ರಿಂದ 45 ವರ್ಷದೊಳಗಿನ ಗ್ರಾಮೀಣ ಮಹಿಳೆಯರು
  • ತರಬೇತಿ ಅವಧಿ: 1 ರಿಂದ 3 ತಿಂಗಳುಗಳ ವರೆಗೆ, ಆಯ್ದ ತರಬೇತಿ ಕೋರ್ಸ್ ಪ್ರಕಾರ
  • ತರಬೇತಿ ನೀಡುವ ಸಂಸ್ಥೆಗಳು: ಕೆಎಸ್‌ಡಿಸಿ ಮತ್ತು ಸರಕಾರೇತರ ಅನುಮೋದಿತ ಸಂಸ್ಥೆಗಳು
  • ಸಾಲ ಸೌಲಭ್ಯ: ತರಬೇತಿ ನಂತರ ಬ್ಯಾಂಕುಗಳ ಸಹಾಯದಿಂದ ಸಾಲ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ

SBI Loan Interest Rate Cut- ಎಸ್‌ಬಿಐ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಹೊಸ ಬಡ್ಡಿದರಗಳ ಮಾಹಿತಿ ಇಲ್ಲಿದೆ…

ತರಬೇತಿಯ ಕ್ಷೇತ್ರಗಳು ಯಾವವು?

‘ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ’ಯಡಿ ನೀಡಲಾಗುವ ತರಬೇತಿ ಪ್ರಸ್ತುತ ಬೇಡಿಕೆಯ ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರಗಳಿಗೆ ಹೊಂದಿಕೊAಡಿರುತ್ತದೆ. ಪ್ರಮುಖ ತರಬೇತಿ ಕ್ಷೇತ್ರಗಳು ಈ ಕೆಳಗಿನಂತಿವೆ:

  • ಜ್ಯಾಂ, ಪಿಕಲ್, ಪಾಪಡ್ ತಯಾರಿಯಂತಹ ಆಹಾರ ಸಂಸ್ಕರಣೆ ಉದ್ಯಮ
  • ಟೈಲರಿಂಗ್, ಉಡುಪು ತಯಾರಿಕೆ
  • ಹಸ್ತಕಲಾ ಮತ್ತು ಕುಸುರಿ ಕಲೆ ಉದ್ಯಮ
  • ಬ್ಯೂಟಿ ಪಾರ್ಲರ್’ನಂತಹ ಸೌಂದಯ ಮತ್ತು ಮಹಿಳಾ ಸೇವೆಗಳು
  • ಸಣ್ಣ ಪ್ಯಾಕೇಜಿಂಗ್, ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆ
  • ಡೇಟಾ ಎಂಟ್ರಿ, ಕಂಪ್ಯೂಟರ್ ಕೋರ್ಸ್
ಸಾಲ ಮತ್ತು ಮಾರುಕಟ್ಟೆ ಸಹಾಯ

ತರಬೇತಿ ಪೂರೈಸಿದ ಬಳಿಕ ಮಹಿಳೆಯರಿಗೆ ಸ್ಥಳೀಯ ಸಹಕಾರ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕೈಗಾರಿಕಾ ಉದ್ದೇಶಕ್ಕಾಗಿ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ಈ ಯೋಜನೆಯ ವಿಶೇಷತೆ ಎಂದರೆ ತರಬೇತಿ ನಿಗಮಗಳು ಮಾರ್ಗದರ್ಶನವನ್ನು ನೀಡುತ್ತವೆ. ಉತ್ಪನ್ನ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆ ಹಾಗೂ ಇ-ಕಾಮರ್ಸ್ ತಾಣಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಯುವ ಮಹಿಳೆಯರು ಉದ್ಯಮ ಆರಂಭಿಸಲು ಪ್ರೇರಣೆ ನೀಡಲಾಗುತ್ತದೆ.

Gruhalakshmi Three Months Payment- ಒಂದೇ ತಿಂಗಳಲ್ಲಿ ಮೂರು ಕಂತಿನ ₹6,000 ಗೃಹಲಕ್ಷ್ಮೀ ಹಣ ಜಮಾ | ಮಹಿಳಾ ಸಚಿವರು ಹೇಳಿದ್ದೇನು?

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳು ತಮ್ಮ ಗ್ರಾಮ ಪಂಚಾಯಿತಿ ಅಥವಾ ತಹಶೀಲ್ದಾರ್ ಕಚೇರಿ ಮುಖಾಂತರ ಈ ಯೋಜನೆಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಮುಂದೆ ಈ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಡಿಜಿಟಲ್ ಅರ್ಜಿ ಪ್ರಕ್ರಿಯೆ (online registration) ಪ್ರಾರಂಭವಾಗಲಿದೆ.

ಈ ಯೋಜನೆಯು ಮಹಿಳೆಯರನ್ನು ಕೇವಲ ತರಬೇತಿ ನೀಡುವ ಮಟ್ಟಕ್ಕೆ ಮಾತ್ರ ಸೀಮಿತವಾಗಿಸದೆ, ಆರ್ಥಿಕವಾಗಿ ಬಲಿಷ್ಠಗೊಳಿಸುವ ಹಾಗೂ ಉದ್ಯಮಶೀಲತೆಯತ್ತ ದಿಕ್ಕು ತೋರಿಸುವ ಹೆಜ್ಜೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಯೋಜನೆಗಳು ಮಹಿಳಾ ಶಕ್ತೀಕರಣಕ್ಕೆ ಸಹಾಯ ಮಾಡುತ್ತವೆ, ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಹಾಗೂ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತವೆ.

ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯು ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರುವ ಒಂದು ಹೆಜ್ಜೆಯಾಗಿದೆ. ತಾವು ಅಥವಾ ನಿಮ್ಮ ಪರಿಚಯದ ಯಾವುದೇ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಬಯಸಿದ್ದರೆ, ಸ್ಥಳೀಯ ಗ್ರಾಮ ಪಂಚಾಯಿತಿಯಿAದ ಮಾಹಿತಿ ಪಡೆದು ತಕ್ಷಣ ಅರ್ಜಿ ಸಲ್ಲಿಸಿ, ನಿಮ್ಮ ಆದಾಯದ ಹೊಸ ಹಾದಿಗೆ ಕಾಲಿಡಿ…

Women Loan Subsidy- ಮಹಿಳೆಯರಿಗಾಗಿಯೇ ಇರುವ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು


Spread the love
WhatsApp Group Join Now
Telegram Group Join Now
error: Content is protected !!