HESCOM Apprenticeship for 338 Vacancy : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ (Hubli Electricity Supply Company) ಡಿಪ್ಲೋಮಾ ಹಾಗೂ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಅಪ್ರೆಂಟೀಸ್’ಶಿಪ್ ಆಕ್ಟ್ (Apprenticeship Act) ಮುಖಾಂತರ ಒಂದು ವರ್ಷದ ಉದ್ಯೋಗ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
338 ಅಭ್ಯರ್ಥಿಗಳಿಗೆ ಅವಕಾಶವಿದ್ದು; ಈ ತರಬೇತಿ ಸ್ಥಾನಗಳ ವಿವರ, ಸ್ಥಾನಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ತರಬೇತಿಯ ವಿವರ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.
ತರಬೇತಿ ಹುದ್ದೆಗಳ ವಿವರ
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್’ನಲ್ಲಿ ಒಟ್ಟು 338 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಡಿಪ್ಲೋಮಾ ಮುಗಿಸಿದವರಿಗೆ ಹಾಗೂ ಪದವಿ ಮುಗಿಸಿದವರಿಗೆ ಸೀಟುಗಳನ್ನು ವಿಂಗಡಣೆ ಮಾಡಿದ್ದು ಈ ಕೆಳಗಿನಂತಿದೆ.
- ಪದವಿ ಮುಗಿಸಿದವರಿಗೆ : 200
- ಡಿಪ್ಲೋಮಾ ಮುಗಿಸಿದವರಿಗೆ : 138
ಶೈಕ್ಷಣಿಕ ವಿದ್ಯಾರ್ಹತೆ ಏನು?
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿ೦ಗ್ (Electrical & Electronics Engineering) ಪದವಿ ಅಥವಾ ಡಿಪ್ಲೋಮಾ ಪದವಿ ಮುಗಿಸಿದ 25 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ತರಬೇತಿ ಅವಧಿಯ ಹಾಗೂ ಮಾಸಿಕ ವೇತನದ ವಿವರ
ಚೆನ್ನೆöÊನಲ್ಲಿರುವ ಬೋರ್ಡ್ ಆರ್ಫ ಅಪ್ರೆಂಟೀಸ್ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪತಿಷ್ಕರಿಸಿ ಆಯ್ಕೆಪಟ್ಟಿ ಸಿದ್ಧಪಡಿಸುತ್ತದೆ. ಹುಬ್ಬಳ್ಳಿಯ ವಿದ್ಯಾ ನಗರದಲ್ಲಿರುವ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ನಡೆಸಿ, ಆಯ್ಕೆಆದವರಿಗೆ ಇಮೇಲ್ ಮೂಲಕ ಮಾಹಿತಿ ಒದಗಿಸಲಾಗುತ್ತದೆ.
ಹೀಗೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ಅವಧಿಯ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯ ಜೊತೆಗೆ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪಂಡ್ ಅನ್ನು ಕೂಡ ನೀಡಲಾಗುತ್ತಿದ್ದು ಈ ಕೆಳಗಿನಂತಿದೆ.
- ಡಿಪ್ಲೋಮಾ ಮುಗಿಸಿದವರಿಗೆ : ಮಾಸಿಕ 8,000 ರೂ.
- ಇಂಜಿನಿಯರಿ೦ಗ್ ಪದವಿ ಮುಗಿಸಿದವರಿಗೆ : ಮಾಸಿಕ 9,000 ರೂ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೊದಲು ನ್ಯಾಷನಲ್ ಅಪ್ರೆಂಟೀಸ್ ಟ್ರೇನಿಂಗ್ ಸ್ಕೀಮ್ (ಎನ್‌ಎಟಿಎಸ್) ಪೋರ್ಟಲ್’ನಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ನೋಂದಾಯಿಸಿಕೊAಡು, ಆನಂತರ ಹೆಸ್ಕಾಂನ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
ಆಗಸ್ಟ್ 20, 2024 - ಆಯ್ಕೆಪಟ್ಟಿ ಬಿಡುಗಡೆ ದಿನಾಂಕ :
ಆಗಸ್ಟ್ 27, 2024 - ದಾಖಲಾತಿ ಪರಿಶೀಲನೆ ದಿನಾಂಕ :
ಸೆಪ್ಟೆಂಬರ್ 09, 2024
ಅಧಿಸೂಚನೆ : Download
ಅಪ್ರೆಂಟಿಸಶಿಪ್ ಜಾಲತಾಣ : Register Now
ಹೆಸ್ಕಾಂ ಅಧಿಕೃತ ಜಾಲತಾಣ : Apply Now