HDFC Bank Loan- ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಮೇ 07ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ಹೊಸ ಬಡ್ಡಿದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಕಳೆದ ಮೇ 07ರಿಂದ ಅನ್ವಯವಾಗುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank Loan) ತನ್ನ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ HDFC ಬ್ಯಾಂಕ್ ತನ್ನ ಸಾಲದ ಮೇಲಿನ ಬಡ್ಡಿದರವನ್ನು ಕಳೆದ ಮೇ 07ರಿಂದ ಕಡಿಮೆ ಮಾಡಿದೆ. MCLR ದರವನ್ನು 0.15% (15 bps) ರಷ್ಟು ಕಡಿಮೆ ಮಾಡಿದ್ದು; ಇದರಿಂದ ಗ್ರಾಹಕರಿಗೆ ಹಲವಾರು ರೀತಿಯ ಲಾಭ ಸಿಗಲಿದೆ.

ಆರ್‌ಬಿಐ ರೆಪೋ ದರ ಇಳಿಕೆಯ ಪರಿಣಾಮ

ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ನೀತಿಯ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದ್ದರಿಂದ, ಹಲವು ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರಗಳಲ್ಲಿ ಪರಿಷ್ಕರಣೆ ಮಾಡುತ್ತಿವೆ.

ಕಳೆದ ಫೆಬ್ರವರಿ 2025ರಿಂದ ಇದುವರೆಗೆ ಒಟ್ಟು 50 bps ರಷ್ಟು ಇಳಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ತನ್ನ MCLR ದರವನ್ನು ತಗ್ಗಿಸುವ ಮೂಲಕ ಗ್ರಾಹಕರಿಗೆ ಉತ್ತಮ ಅರ್ಥಿಕ ಲಾಭ ನೀಡಲು ಮುಂದಾಗಿದೆ.

Borewell Permission- ಇನ್ಮುಂದೆ ಬೋರ್‌ವೆಲ್ ಕೊರೆಸಲು ಅನುಮತಿ ಕಡ್ಡಾಯ | ಅನುಮತಿ ಪಡೆಯೋವುದು ಹೇಗೆ? ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ…

ಕಳೆದ ಮೇ 07ರಿಂದ ಅನ್ವಯವಾಗುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
HDFC Bank Loan Interest Rate Cut
ಪರಿಷ್ಕೃತ MCLR ದರಗಳು

ಏಪ್ರಿಲ್ 2025ರ ವರೆಗಿನ ಹಳೆಯ ಎಂಸಿಎಲ್‌ಆರ್ ದರಗಳು 9.10% ರಿಂದ 9.35% ವರೆಗೆ ಇದ್ದು; ಕಳೆದ ಮೇ 7ರಿಂದ ಎಚ್‌ಡಿಎಫ್‌ಸಿ ಬ್ಯಾಂಕಿನ ಪರಿಷ್ಕೃತ ಎಂಸಿಎಲ್‌ಆರ್ ದರಗಳು ಈ ಕೆಳಗಿನಂತಿವೆ:

  • ಓವರ್‌ನೈಟ್: 9.00%
  • 1 ತಿಂಗಳು: 9.00%
  • 3 ತಿಂಗಳು: 9.05%
  • 6 ತಿಂಗಳು: 9.15%
  • 1 ವರ್ಷ: 9.15%
  • 2 ವರ್ಷ: 9.20%
  • 3 ವರ್ಷ: 9.20%
ಇದರಿಂದ ಗ್ರಾಹಕರಿಗೆ ಆಗುವ ಲಾಭಗಳು

EMI ಕಡಿತ: ಗೃಹ ಸಾಲ ಅಥವಾ ಇತರ ಫ್ಲೋಟಿಂಗ್ ದರದ ಸಾಲಗಳಿಗೆ ಸಂಬಂಧಿಸಿದ ಗ್ರಾಹಕರು ತಮ್ಮ ತಿಂಗಳ ಸಮಾನ ಕಂತುಗಳಲ್ಲಿ (EMI) ಇಳಿಕೆಯನ್ನು ಕಾಣಬಹುದು.

ಸಾಲದ ಅವಧಿ ಕಡಿಮೆ: ಕೆಲವು ಸಂದರ್ಭಗಳಲ್ಲಿ ಇಎಂಐ ಬದಲಾವಣೆ ಮಾಡದೇ ಸಾಲದ ಅವಧಿಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ಮೊದಲು 20 ವರ್ಷಗಳ ಗೃಹ ಸಾಲವು 19 ವರ್ಷ ಅಥವಾ 18 ವರ್ಷಗಳಲ್ಲಿ ಮುಗಿಯುವ ಸಾಧ್ಯತೆ ಇದೆ.

ವ್ಯಕ್ತಿಗತ ಹಣಕಾಸು ನಿರ್ವಹಣೆಗೆ ನೆರವು: ಇಂತಹ ಬಡ್ಡಿದರ ಇಳಿಕೆಗಳು ಮನೆ ಖರೀದಿಸಲು, ಪುನರ್‌ಹೂಡಿಕೆ ಮಾಡಲು ಅಥವಾ ವೃತ್ತಿ ಆಧಾರಿತ ಸಾಲಗಳನ್ನು ತೆಗೆದುಕೊಳ್ಳಲು ಹೆಚ್ಚು ಸ್ಪೂರ್ತಿದಾಯಕವಾಗಿವೆ.

E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ

MCLR ಎಂದರೇನು?

ಎಂಸಿಎಲ್‌ಆರ್ ಎಂದರೆ Marginal Cost of Funds-Based Lending Rate. ಅಂದರೆ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡಬಹುದಾದ ಕನಿಷ್ಠ ಬಡ್ಡಿದರ. 2016ರಲ್ಲಿ ಆರ್‌ಬಿಐ ಈ ವ್ಯವಸ್ಥೆಯನ್ನು ಪರಿಚಯಿಸಿತು.

ಈ ವ್ಯವಸ್ಥೆಯಡಿ, ಬ್ಯಾಂಕುಗಳು ಎಂಸಿಎಲ್‌ಆರ್‌ಗಿಂತ ಕಡಿಮೆ ದರದಲ್ಲಿ ಸಾಲ ನೀಡಲು ಸಾಧ್ಯವಿಲ್ಲ. ಇದು ಗ್ರಾಹಕರಿಗೆ ಹೆಚ್ಚು ಪಾರದರ್ಶಕತೆ ಹಾಗೂ ಮಾರುಕಟ್ಟೆ ಬದಲಾವಣೆಗೆ ತಕ್ಷಣ ಸ್ಪಂದಿಸುವ ವಿನ್ಯಾಸವನ್ನು ಒದಗಿಸುತ್ತದೆ.

HDFC ಬ್ಯಾಂಕ್ ಬಡ್ಡಿದರ ಕಡಿತದ ಈ ತೀರ್ಮಾನವು ಸಾಲಗಾರರಿಗೆ ದೀರ್ಘಾವಧಿಯಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಹೊಸದಾಗಿ ಸಾಲ ಪಡೆಯುವವರು ಮತ್ತು ಈಗಾಗಲೇ ಸಾಲ ಪಡೆದಿರುವವರು ಇಬ್ಬರೂ ಈ ಬದಲಾವಣೆಯಿಂದ ಲಾಭ ಪಡೆಯಬಹುದಾಗಿದೆ.

Canara Bank Loan- ಕೆನರಾ ಬ್ಯಾಂಕ್‌ನಲ್ಲಿ ಮೇ 12ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ವಾಹನ ಹಾಗೂ ವೈಯಕ್ತಿಕ ಸಾಲ ಪಡೆಯುವವರಿಗೆ ಸುವರ್ಣಾವಕಾಶ


Spread the love
WhatsApp Group Join Now
Telegram Group Join Now
error: Content is protected !!