e-Khata Online Apply- ಇಂದಿನಿಂದ ಮನೆಯಲ್ಲಿ ಕುಳಿತೇ ಈ ಖಾತೆ ಪಡೆಯಲು ಅರ್ಜಿ ಸಲ್ಲಿಸಿ | ಅರ್ಜಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ರಾಜ್ಯ ಸರ್ಕಾರ ಇಂದಿನಿಂದ ಮನೆ ಬಾಗಿಲಿಗೆ ಇ-ಖಾತಾ ಸೇವೆ (e-Khata Online Apply) ಆರಂಭಿಸಿದೆ. ಈ ಯೋಜನೆಯ ಮಹತ್ವವೇನು? ಮನೆಯಲ್ಲಿ ಕುಳಿತೇ ಇ-ಖಾತಾ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಇನ್ನು ಮನೆಯಲ್ಲಿ ಕುಳಿತೇ ನಿಮ್ಮ ಇ-ಖಾತಾ ಪಡೆಯಿರಿ. ಹೌದು, ಬೆಂಗಳೂರು ನಗರ ಪ್ರದೇಶದ ಆಸ್ತಿ ಮಾಲೀಕರಿಗಾಗಿ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಇನ್ನಷ್ಟು ಸರಳಗೊಳಿಸಿದೆ. ಈಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅಂತಿಮ ಇ-ಖಾತಾ ಪ್ರಮಾಣಪತ್ರವನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳುವ ವ್ಯವಸ್ಥೆ ಶುರುವಾಗಿದೆ.

ಇದು ಇಂದಿನಿಂದ (ಜುಲೈ 1) ಅಧಿಕೃತವಾಗಿ ಆರಂಭಗೊAಡಿದ್ದು, ಈ ಮೂಲಕ ಬೆಂಗಳೂರಿನ ಆಸ್ತಿ ಮಾಲೀಕರು ತಮ್ಮ ಮನೆ ಬಾಗಿಲಿಗೇ ಅಂತಿಮ ಇ-ಖಾತಾ ದಾಖಲೆಯನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಪಡೆಯಲಿದ್ದಾರೆ.

Kisan Vikas Patra – ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ | ಸಂಪೂರ್ಣ ಮಾಹಿತಿ ಇಲ್ಲಿದೆ…

ಯಾವುದಕ್ಕಾಗಿ ಈ ಯೋಜನೆ?

ಸಾರ್ವಜನಿಕರ ಆಸ್ತಿ ದಾಖಲೆಗಳ ಸುರಕ್ಷತೆ ಮತ್ತು ಪಾರದರ್ಶಕತೆಗೆ ಇದು ಹೊಸ ಹೆಜ್ಜೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಸ್ತಿ ಮಾಲೀಕರಿಗೆ ಈ ಸೇವೆ ಕಡ್ಡಾಯವಾಗಿದ್ದು, ನಿಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲ್ ಮಾಡಿಕೊಳ್ಳಲು ಉತ್ತಮ ಅವಕಾಶ.

ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆಸ್ತಿಗಳು ದಾಖಲಾಗಿವೆ. ಈ ಪೈಕಿ ಈಗಾಗಲೇ 5.51 ಲಕ್ಷ ಆಸ್ತಿ ಮಾಲೀಕರಿಗೆ ಅಂತಿಮ ಇ-ಖಾತಾ ನೀಡಲಾಗಿದೆ. ಉಳಿದವರಿಗೆ ಯೋಜಿತವಾಗಿ 100 ದಿನಗಳಲ್ಲಿ ಕರಡು ಇ-ಖಾತಾ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸರ್ಕಾರ ಕೈಗೆತ್ತಿಕೊಂಡಿದೆ.

ರಾಜ್ಯ ಸರ್ಕಾರ ಇಂದಿನಿಂದ ಮನೆ ಬಾಗಿಲಿಗೆ ಇ-ಖಾತಾ ಸೇವೆ ಆರಂಭಿಸಿದೆ. ಈ ಯೋಜನೆಯ ಮಹತ್ವವೇನು? ಮನೆಯಲ್ಲಿ ಕುಳಿತೇ ಇ-ಖಾತಾ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...
e-Khata Online Apply BBMP Home Delivery
ಏನಿದು ಇ-ಖಾತಾ?

ಇ-ಖಾತಾ ಅಂದ್ರೆ ಆಸ್ತಿ ದಾಖಲೆಯ ಡಿಜಿಟಲ್ ಪ್ರತಿಯನ್ನು ಆನ್‌ಲೈನ್‌ನಲ್ಲಿ ಪಡೆಯುವ ವ್ಯವಸ್ಥೆ. ಇದರಿಂದ ಆಸ್ತಿ ಖರೀದಿ/ಮಾರಾಟ, ತೆರಿಗೆ ಪಾವತಿ, ಪರವಾನಗಿ ಪಡೆದುಕೊಳ್ಳುವ ಕೆಲಸ ಸುಲಭವಾಗಿ ನೇರವಾಗಿ ಆನ್‌ಲೈನ್‌ನಲ್ಲಿ ಮಾಡಬಹುದು.

ದಾಖಲೆಯಲ್ಲಿ ತಪ್ಪು ತಿದ್ದುಪಡಿ ಮಾಡಲು, ಭ್ರಷ್ಟಾಚಾರಕ್ಕೆ ಕಡಿವಾಣ ಮತ್ತು ಪಾರದರ್ಶಕತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

Agricultural Land Purchase Loan- ಕೃಷಿ ಭೂಮಿ ಖರೀದಿಗೆ ₹50,000 ರಿಂದ ₹7.5 ಕೋಟಿ ವರೆಗೂ ಸಾಲ ಸೌಲಭ್ಯ | ಕರ್ನಾಟಕ ಬ್ಯಾಂಕ್ ವಿಶೇಷ ಸಾಲ ಯೋಜನೆಯ ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಈ ಸೇವೆ ಪಡೆಯಲು ಈ ಕೆಳಕಂಡ ಕೆಲವೊಂದು ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ರೆಡಿ ಇಡುವುದು ಮುಖ್ಯ. ಈ ಮಾಹಿತಿ ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಲು ಸರ್ಕಾರಕ್ಕೆ ಸಹಾಯಕವಾಗುತ್ತದೆ:

  • ನೋಂದಾಯಿತ ಮಾರಾಟ ಪತ್ರ ಅಥವಾ ಶೀರ್ಷಿಕೆ ಪತ್ರ
  • ಎನ್ಕಂಬರೆನ್ಸ್ ಪ್ರಮಾಣಪತ್ರ (Encumbrance Certificate) – ಹಿಂದಿನ ದಾಖಲೆಗಳಿಂದ ಇಂದಿನ ವರೆಗಿನ ವಿವರ
  • ಕಳೆದ 3-5 ವರ್ಷಗಳ ಆಸ್ತಿ ತೆರಿಗೆ ಪಾವತಿ ರಶೀದಿ
  • ಅನುಮೋದಿತ ಕಟ್ಟಡ ಯೋಜನೆ/ವಿನ್ಯಾಸ
  • ಆಕ್ಯುಪೆನ್ಸಿ ಪ್ರಮಾಣಪತ್ರ (ಹೊಸ ನಿರ್ಮಾಣಗಳಿಗೆ)
  • ಹಿಂದಿನ ಖಾತಾ ದಾಖಲೆ (ಲಭ್ಯವಿದ್ದರೆ)
  • ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್
  • ವಿಳಾಸ ಪುರಾವೆ (ಬೆಸ್ಕಾಂ ಬಿಲ್/ಗ್ಯಾಸ್/ವಾಟರ್ ಬಿಲ್)
  • ಆಸ್ತಿ ಮಾಲೀಕರ ಮತ್ತು ಆಸ್ತಿಯ ಫೋಟೋ
  • ಬೆಸ್ಕಾಂ ಸಂಪರ್ಕ ಸಂಖ್ಯೆ
  • ಆಸ್ತಿಯ ಜಿಪಿಎಸ್ ಕೋಆರ್ಡಿನೇಟ್ಸ್
  • ಬ್ಯಾಂಕ್ ಅಥವಾ ವಸತಿ ಸಮಾಜದ ಎನ್‌ಓಸಿ ಪ್ರಮಾಣಪತ್ರ (ಅನ್ವಯಿಸಿದರೆ)

Karnataka Protsahadhana Yojana- SSLC, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ | ₹35,000 ನೆರವಿಗೆ ಅರ್ಜಿ ಆಹ್ವಾನ

ಆನ್‌ಲೈನ್‌ನಲ್ಲಿ ಇ-ಖಾತಾ (Draft) ಪಡೆಯುವ ವಿಧಾನ

ಇಂದಿನಿಂದ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ಸಾರ್ವಜನಿಕರು ಮನೆಯಲ್ಲಿ ಕುಳಿತೇ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ವೆಬ್‌ಸೈಟ್‌ಗೆ ಹೋಗಿ BBMP e-Aasthi  ಅಧಿಕೃತ ಪೋರ್ಟಲ್‌ಗೆ ಹೋಗಿ. ನಿಮ್ಮ ಮೊಬೈಲ್ ಸಂಖ್ಯೆ ನೀಡಿ. ಒಟಿಪಿ (OTP) ನಿಮ್ಮ ಫೋನ್‌ಗೆ ಬರುತ್ತದೆ. ಅದನ್ನು ಟೈಪ್ ಮಾಡಿ ಲಾಗಿನ್ ಆಗಿ.

ಹಂತ 2: ವಾರ್ಡ್ ಆಯ್ಕೆ ಮಾಡಿ. ನಿಮ್ಮ ಆಸ್ತಿ ಇರುವ ವಾರ್ಡ್ ಹೆಸರು ಅಥವಾ ವಾರ್ಡ್ ಸಂಖ್ಯೆ ಆಯ್ಕೆ ಮಾಡಿ. ನೀವು ಭರಿಸಿರುವ ಆಸ್ತಿ ತೆರಿಗೆ ಬಿಲ್ಲಿನಲ್ಲಿ ಇರುವ ವಾರ್ಡ್ ಸಂಖ್ಯೆ ಹಾಗೂ ಇಲ್ಲಿ ಆಯ್ಕೆ ಮಾಡುವ ವಾರ್ಡ್ ಸಂಖ್ಯೆ ಒಂದೇ ಇದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಹಂತ 3: ವಿವರಗಳನ್ನು ನಮೂದಿಸಿ. ನೀವು ಆಯ್ಕೆ ಮಾಡುವ 5 ರೀತಿಯ ಆಯ್ಕೆಗಳು ಇವೆ. ನೀವು ಯಾವುದಾದರೂ ಒಂದು ಆಯ್ಕೆ ಮಾಡಬಹುದು:

  1. ಆಸ್ತಿ ePID ಸಂಖ್ಯೆ (electronic property ID)
  2. ಮಾಲೀಕರ ಹೆಸರು
  3. ಮೌಲ್ಯಮಾಪನ ಸಂಖ್ಯೆ (Assessment Number)
  4. ಆಸ್ತಿ ವಿಳಾಸ
  5. ಪುಸ್ತಕ (Book) ಸಂಖ್ಯೆ

ನಿಮ್ಮ ಬಿಲ್ಲು ಅಥವಾ ದಾಖಲೆಗಳಲ್ಲಿ ಇರುವ ಸರಿಯಾದ ಮಾಹಿತಿಯನ್ನು ನಮೂದಿಸಿ.

ಹಂತ 4: ಪುಸ್ತಕ ಸಂಖ್ಯೆ ವಿವರ (Book Number Details): BBMP ಪೋರ್ಟಲ್‌ನಲ್ಲಿ ‘Book Number’ ಎಂಬುದು ಡಿಜಿಟಲ್ ದಾಖಲೆ ಪುಸ್ತಕದ ವಿವರ. ಇದು ಸ್ಥಳೀಯವಾಗಿ ಬಿಬಿಎಂಪಿ ಕಚೇರಿಯಲ್ಲಿ ಇರುವ ನೋಂದಣಿ ಪುಸ್ತಕದ ಸಂಖ್ಯೆಯ ಡಿಜಿಟಲೀಕೃತ ರೂಪವಾಗಿದೆ.

ಹಂತ 5: ವಿವರಗಳನ್ನು ಚೆಕ್ ಮಾಡಿ. ‘Draft e-Khata’ ಅರ್ಜಿ ಸಲ್ಲಿಸು ಆಯ್ಕೆ ಮಾಡಿ. ಸಲ್ಲಿಸಿದ ನಂತರ ನಿಮ್ಮ ಅರ್ಜಿ ಸ್ಥಿತಿಯನ್ನು ಪೋರ್ಟಲ್‌ಲ್ಲಿಯೇ ಟ್ರ‍್ಯಾಕ್ ಮಾಡಬಹುದು.

ಅರ್ಜಿ ಪರಿಶೀಲನೆಗೆ ಸರಕಾರದ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ದೃಢಪಡಿಸುತ್ತಾರೆ. ಅಂತಿಮವಾಗಿ ಕರಡು ಇ-ಖಾತಾ ನೀಡಲಾಗುತ್ತದೆ. ಅಂತಿಮ ಇ-ಖಾತಾ ನಿಮ್ಮ ಮನೆ ಬಾಗಿಲಿಗೇ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ.

  • ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ವಿವರದ ಕುರಿತ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ : Click Here
  • ಮತ್ತಷ್ಟು ಮಾಹಿತಿ ಬೇಕಾದರೆ ಸ್ಥಳೀಯ ಬಿಬಿಎಂಪಿ ಕಚೇರಿಗೆ ಸಂಪರ್ಕಿಸಿ ಅಥವಾ ಉಚಿತ ಸಹಾಯವಾಣಿ 080 4920 3888ಗೆ ಕರೆ ಮಾಡಿ ಮಾಹಿತಿ ಪಡೆಯಿರಿ…
  • ಅರ್ಜಿ ಲಿಂಕ್: Apply Now

BDA Sites Auction 2025- ರಿಯಾಯ್ತಿ ದರಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಸೈಟು | ಆಸಕ್ತರಿಗೆ ಬಿಡಿಎ ಮುಕ್ತ ಆಹ್ವಾನ


Spread the love
WhatsApp Group Join Now
Telegram Group Join Now
error: Content is protected !!