Business loans by Govt of India : ಸ್ವಂತ ಬಿಸಿನೆಸ್ ಅಥವಾ ಉದ್ಯೋಗ ಮಾಡಿ ಕೈ ತುಂಬಾ ಹಣ ಗಳಿಸಲು ಅಡ್ಡಿಯಾಗುವ ಬಂಡವಾಳ ಮತ್ತು ಆರ್ಥಿಕ ಸಮಸ್ಯೆಗೆ ಸರ್ಕಾರದಿಂದ ಅನೇಕ ಸಾಲ ಸೌಲಭ್ಯಗಳಿದ್ದು ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ..
ಸ್ವಂತ ಉದ್ಯಮ ಆರಂಭಿಸಿ ಕೈ ತುಂಬಾ ಹಣ ಗಳಿಸುವುದು ಅನೇಕ ಜನರ ಕನಸಾಗಿರುತ್ತದೆ. ಆದರೆ ಆರ್ಥಿಕ ಸಮಸ್ಯೆ ಮತ್ತು ಬಂಡವಾಳದ ಸಮಸ್ಯೆ ಅವರ ಕನಸನ್ನು, ಕನಸಾಗಿಯೇ ಉಳಿಸಿಬಿಡುತ್ತದೆ. ಸ್ವಂತ ಉದ್ಯಮ ಆರಂಭಿಸುವ ಪ್ಲಾನ್ ನಿಮ್ಮ ಬಳಿ ಇದ್ದರೆ, ಸರ್ಕಾರದಿಂದ ಸ್ವಯಂ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಅನೇಕ ರೀತಿಯ ಸಾಲ ಸೌಲಭ್ಯಗಳಿದ್ದು, ಇವುಗಳನ್ನು ಉಪಯೋಗಿಸಿಕೊಂಡು ಸ್ವಂತ ಉದ್ಯಮ ಆರಂಭಿಸಿ. ಸರ್ಕಾರದಿಂದ ಲಭ್ಯವಿರುವ ಕೆಲವು ಸಾಲ ಸೌಲಭ್ಯ ಯೋಜನೆಗಳ ಸಂಪೂರ್ಣವಾದ ಮಾಹಿತಿ ಇಲ್ಲಿದೆ…
ಯಾವೆಲ್ಲ ಸಾಲ ಯೋಜನೆಗಳಿವೆ?
- MSME ಲೋನ್ ಸ್ಕೀಮ್
- ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್
- ಮುದ್ರಾ ಲೋನ್ – Mudra loan
- ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಮ್
MSME ಲೋನ್ ಸ್ಕೀಮ್
ಮೊದಲನೆಯದಾಗಿ ನಾವು ಕೇಂದ್ರ ಸರ್ಕಾರಿ ಯೋಜನೆಯಾಗಿರುವ ಎಂಎಸ್‌ಎಮ್‌ಇ ಯೋಜನೆ ಬಗ್ಗೆ ತಿಳಿದುಕೊಳ್ಳೋಣ. MSME ಇದರ ವಿಸ್ತೃತ ರೂಪ ‘ಮೈಕ್ರೋ ಸ್ಮಾಲ್ ಅಂಡ್ ಮೀಡಿಯಂ ಎಂಟರ್ಪ್ರೈಸಸ್ (Micro Small and Medium Enterprises). ಹೆಸರೇ ಹೇಳುವಂತೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮ ಆರಂಭಿಸಲು ಬಯಸುವ ಉದ್ಯಮಿಗಳಿಗೆ ಸಾಲ ಸೌಲಭ್ಯ ಅಥವಾ ಆರ್ಥಿಕ ಸೌಲಭ್ಯವನ್ನು (financial help) ಒದಗಿಸಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯ ಮೂಲಕ ಹೊಸದಾಗಿ ಉದ್ಯಮ ಆರಂಭಿಸಲು ಅಥವಾ ಈಗಾಗಲೇ ಇರುವ ಉದ್ಯಮಕ್ಕೆ (Business) ಆರ್ಥಿಕ ಸಹಾಯವನ್ನು ಪಡೆಯುವುದಾದರೆ, ನಿಮಗೆ ಈ ಯೋಜನೆ ಅಡಿಯಲ್ಲಿ ಗರಿಷ್ಠ ಒಂದು ಕೋಟಿ ರೂಪಾಯಿ ವರೆಗೆ ಸಾಲ ಸಿಗುತ್ತದೆ.
ಒಂದು ವೇಳೆ ನೀವು ಈ ಯೋಜನೆಗೆ ಅರ್ಹರಿದ್ದರೆ ಅರ್ಜಿ ಸಲ್ಲಿಸಿದ 59 ನಿಮಿಷದಲ್ಲಿಯೇ ನೀವು ಸಲ್ಲಿಸಿದ ಅರ್ಜಿಗೆ ಅಂಗೀಕಾರ ದೊರಕಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು. ವಿಶೇಷವೇನೆಂದರೆ ಈ ಯೋಜನೆಯ ಅಡಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಶೇಕಡ 3ರಷ್ಟು ಮೀಸಲಾತಿ ಇದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಥವಾ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ.
ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್
ಕೇಂದ್ರ ಸರ್ಕಾರಿ ಯೋಜನೆಯಾಗಿರುವ ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್ ಫಾರ್ ಮೈಕ್ರೋ ಅಂಡ್ ಸ್ಮಾಲ್ ಎಂಟರ್ಪ್ರೈಸಸ್ ಯೋಜನೆ ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ 10 ಲಕ್ಷ ರೂಪಾಯಿ ವರೆಗೆ ಮೇಲಾಧಾರವಿಲ್ಲದೆ ಕಾರ್ಯನಿರತ ಬಂಡವಾಳ ಸಾಲ ಸೌಲಭ್ಯ ಸಿಗಲಿದೆ.
ಈ ಯೋಜನೆಯ ಅಡಿಯಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚು ಸಾಲವನ್ನು ಪಡೆಯುವುದಾದರೆ ಭೂಮಿ, ಕಟ್ಟಡ ಇತ್ಯಾದಿಗಳ ಅಡಮಾನ ಇಡಬೇಕಾಗುತ್ತದೆ. ಈ ಯೋಜನೆಯ ಇನ್ನೂ ಹೆಚ್ಚು ಮಾಹಿತಿ ಅಥವಾ ಈ ಯೋಜನೆಗೆ ಅರ್ಜಿ ಸಲ್ಲಿಸುವ ಜಾಲತಾಣದ ಲಿಂಕ್ ಇಲ್ಲಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನಾ (PMMY)
ಪ್ರಧಾನಮಂತ್ರಿ ಮುದ್ರಾ ಯೋಜನೆಯು ಅನೇಕ ಉದ್ಯಮಗಳಿಗೆ 10 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ಕೃಷಿಯೇತರ ಮತ್ತು ಕಾರ್ಪೊರೇಟ್ ಅಲ್ಲದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಈ ಯೋಜನೆಯಡಿಯಲ್ಲಿ ಶಿಶು ಸಾಲ, ಕಿಶೋರ್ ಸಾಲ ಮತ್ತು ತರುಣ್ ಸಾಲ ಎಂಬ ಮೂರು ವಿಧದ ಸಾಲಗಳಿವೆ.
ಶಿಶು ಸಾಲ ಯೋಜನೆಯಲ್ಲಿ ಅರ್ಹರಿರುವರಿಗೆ 50 ಸಾವಿರ ರೂಪಾಯಿ ವರೆಗೆ ಸಾಲ, ಕಿಶೋರ್ ಸಾಲ ಯೋಜನೆಯಲ್ಲಿ ಅರ್ಹರಿರುವವರಿಗೆ 5 ಲಕ್ಷ ರೂಪಾಯಿ ವರೆಗೆ ಸಾಲ ಮತ್ತು ತರುಣ್ ಸಾಲ ಯೋಜನೆಯಲ್ಲಿ ಅರ್ಹರಿರುವವರಿಗೆ 10 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಸಿಗಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಹಾಗೂ ಯೋಜನೆಯ ಇನ್ನು ಹೆಚ್ಚಿನ ಮಾಹಿತಿಯ ಸಂಪೂರ್ಣ ವಿವರಗಳಿಗಾಗಿ ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಮ್
Credit Linked Capital Subsidy Scheme ಯೋಜನೆಯು ಕೂಡ ಭಾರತ ಸರ್ಕಾರದ ಯೋಜನೆಯಾಗಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಿಗೆ ಉತ್ತೇಜನ ಮತ್ತು ಆರ್ಥಿಕ ಸಹಾಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು ಅರ್ಹ ಫಲಾನುಭವಿಗಳಿಗೆ ಒಂದು ಕೋಟಿ ರೂಪಾಯಿ ವರೆಗೆ ಸಾಲ ಸೌಲಭ್ಯ ಮತ್ತು 15% ಸಬ್ಸಿಡಿ ನೀಡುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಬೇಕಾದರೆ ಕೆಳಗಿನ ವೆಬ್ ಸೈಟಿಗೆ ಭೇಟಿ ನೀಡಿ.
ಇದೇ ರೀತಿ ಹಲವು ಕೇಂದ್ರ ಮತ್ತು ರಾಜ್ಯ ಸರಕಾರಿ ಸಾಲ ಯೋಜನೆಗಳಿದ್ದು; ಆಸಕ್ತರು ಈ ಯೋಜನೆಗಳ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಹುದಾಗಿದೆ.
1 thought on “ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ Business loans by Govt of India”