ಸರ್ಕಾರದ ಹೊಸ ಯೋಜನೆ : ಸರ್ಕಾರಿ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಜಾಬ್ ಆಫರ್ | Apprenticeship Embedded Degree Program By Karnataka Govt

Spread the love

Apprenticeship Embedded Degree Program By Karnataka Govt : ಸರ್ಕಾರಿ ಪದವಿ ಕಾಲೇಜುಗಳಲ್ಲಿ (Govt Degree College) ಓದುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಗಳಿಕೆಯ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗೂ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವ ಉದ್ದೇಶವಲ್ಲಿಟ್ಟುಕೊಂಡು ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Apprenticeship Embedded Degree Program
WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಯ ಸಮಯದಲ್ಲಿಯೇ ವಿದ್ಯಾರ್ಥಿಗಳನ್ನು ಕೌಶಲ್ಯಯುತ ಮಾನವ ಸಂಪನ್ಮೂಲರನ್ನಾಗಿ ಮಾಡಲು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಹೆಸರೇ ಅಪ್ರೆಂಟಿಸ್ ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್ (Apprenticeship Embedded Degree Program). ಈ ಯೋಜನೆಯನ್ನು ಕನ್ನಡದಲ್ಲಿ ‘ಶಿಶಿಕ್ಷು ತರಬೇತಿ ಸಂಯೋಜಿತ ಪದವಿ ಕಾರ್ಯಕ್ರಮ’ ಎಂದು ಕೂಡ ಕರೆಯಲಾಗುತ್ತದೆ.

ಬಿ.ಕಾಂ ಪದವೀಧರರಿಗೆ ಸಮರ್ಪಕವಾಗಿ ಜಾರಿಗೊಳಿಸಲು ಉನ್ನತ ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಮಂಡಳಿ, ಸೆಂಟರ್ ಫಾರ್ ರಿಸರ್ಚ್ ಇನ್ ಸ್ಕೀಮ್ ಅಂಡ್ ಪಾಲಿಸಿಸ್ ಹಾಗೂ ಕೌಶಲ ಮಂಡಳಿಗಳು ಜೊತೆಗೂಡಿ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆಗೊಳಿಸುತ್ತೇವೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಎಲ್‌ಜಿ, ಯುಕೆಜಿ ಆರಂಭ : 5,000 ಶಿಕ್ಷಕರ ನೇಮಕಾತಿ | ಹೇಗೆ ನಡೆಯಲಿದೆ ನೇಮಕಾತಿ? Govt School LKG UKG Teacher Recruitment 2024

ಈ ಕಾಲೇಜುಗಳಲ್ಲಿ ಹೊಸ ಯೋಜನೆ ಆರಂಭ

ಈ ಯೋಜನೆಯನ್ನು ಸದ್ಯಕ್ಕೆ ಮೊದಲ ಹಂತದಲ್ಲಿ ಬಿಕಾಂ ಪದವೀಧರರಿಗಾಗಿ ಆರಂಭಿಸಿದ್ದು, ಇವರಿಗೆ ಸರಕು ಸಾಗಣೆ (ಐogisಣiಛಿs), ಬ್ಯಾಂಕಿAಗ್ (ಃಚಿಟಿಞiಟಿg) ಮತ್ತು ಫೈನಾನ್ಸ್ (ಈiಟಿಚಿಟಿಛಿe) ಸೇರಿದಂತೆ ರಿಟೇಲ್ ಹಾಗೂ ಈ ಕಾಮರ್ಸ್ ಕೋರ್ಸ್’ಗಳನ್ನು ಆರಂಭಿಸಲಾಗುತ್ತಿದೆ. ಸಂಬAಧಪಟ್ಟ ಕ್ಷೇತ್ರದ ಕೌಶಲ ಮಂಡಳಿಗಳ ಮುಖಾಂತರ ಈ ಯೋಜನೆಯನ್ನು ಮೂರು ವರ್ಷದ ಪದವಿ ರೂಪದಲ್ಲಿ ಜಾರಿಗೊಳಿಸಲಾಗುತ್ತಿದೆ.

ಈಗಾಗಲೇ ಆಯ್ದು 45 ಕಾಲೇಜುಗಳಲ್ಲಿ ಇರುವ ಸೌಕರ್ಯಗಳನ್ನು ಬಳಸಿಕೊಂಡು ಕೋರ್ಸ್ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮೊದಲ ನಾಲ್ಕು ಸೆಮಿಸ್ಟರ್’ಗಳನ್ನು ಕಾಲೇಜುಗಳಲ್ಲಿ ಅಧ್ಯಯನ ಮಾಡಿಸಲಾಗುತ್ತದೆ ಹಾಗೂ ನಂತರದ 5 ಮತ್ತು 6ನೇ ಸೆಮಿಸ್ಟರ್’ಗಳನ್ನು ಕೌಶಲ ಮಂಡಳಿಯು ನಿರ್ಧರಿಸುವ ಉದ್ದಿಮೆ ಸಂಘಟನೆಗಳಲ್ಲಿ ಕೌಶಲ ತರಬೇತಿ ಶಿಕ್ಷಣವನ್ನು ಪಡೆಯಲಿದ್ದಾರೆ.

Apprenticeship Embedded Degree Program By Karnataka Govt

ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ₹1.30 ಲಕ್ಷ ಸಂಬಳದ ಹುದ್ದೆಗಳು | 5,000 ಹುದ್ದೆಗಳಿಗೆ ಅರ್ಜಿ ಆಹ್ವಾನ NSDC Recruitment 2024

ಪದವಿ ಶಿಕ್ಷಣದ ಜೊತೆಗೆ ಮಾಸಿಕ 10 ಸಾವಿರ ಸ್ಟೈಪೆಂಡ್

ಹೌದು, ಸರ್ಕಾರದ ಈ ಹೊಸ ‘ಅಪ್ರೆಂಟಿಸ್ ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್’ನ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪದವಿಯ ಜೊತೆ ನಡೆಯುವ ಈ ಅಪ್ರೆಂಟಿಸ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ 10,000 ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ.

ಬಹುತೇಕವಾಗಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡ 96ರಷ್ಟು ಜನರು ಪರಿಶಿಷ್ಟ ವರ್ಗಗಳಿಗೆ ಸೇರಿದವರು ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಾಗಿರುತ್ತಾರೆ. ಇವರಲ್ಲಿ ಶೇ.81ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರುತ್ತಾರೆ ಎಂದು ಸರ್ಕಾರ ಲೆಕ್ಕಾಚಾರ ನೀಡಿದೆ.

ಹೀಗಾಗಿ ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ‘ಅಪ್ರೆಂಟಿಸ್ ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್’ ಹೊಸ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಅಪ್ರೆಂಟಿಸ್ ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್ ಯೋಜನೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ:

https://www.rasci.in/AEDP.php

ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯತಿಗಳಲ್ಲಿ 6,599 ಹೊಸ ಗ್ರಂಥಾಲಯ ಹುದ್ದೆಗಳು | ಸ್ಥಳೀಯ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ Gram Panchayat Arivu kendra Recruitment 2024


Spread the love
WhatsApp Group Join Now
Telegram Group Join Now

Leave a Comment

error: Content is protected !!