Borewell Permission- ಇನ್ಮುಂದೆ ಬೋರ್‌ವೆಲ್ ಕೊರೆಸಲು ಅನುಮತಿ ಕಡ್ಡಾಯ | ಅನುಮತಿ ಪಡೆಯೋವುದು ಹೇಗೆ? ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಇನ್ಮುಂದೆ ಬೋರ್‌ವೆಲ್ (Borewell Permission) ಕೊರೆಸಲು ಸರ್ಕಾರದ ಅನುಮತಿ ಕಡ್ಡಾಯ. ಹೊಸ ನಿಯಮಗಳು, ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಇತ್ತೀಚೆಗೆ ಜಾರಿಯಾದ ಹೊಸ ನೀತಿ ಪ್ರಕಾರ, ಬೋರ್‌ವೆಲ್ ಅಥವಾ ಕೊಳವೆ ಬಾವಿ ಕೊರೆಸಲು ಈಗ ರಾಜ್ಯ ಅಂತರ್ಜಲ ಪ್ರಾಧಿಕಾರದ (Karnataka Ground Water Authority) ಮುಂಚಿತ ಅನುಮತಿ ಕಡ್ಡಾಯವಾಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರವಾದ ಅಂತರ್ಜಲ ದುರ್ಬಳಕೆಯಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಮಟ್ಟ ಸಮತೋಲನ ಆಯ್ದುಕೊಳ್ಳುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Karnataka Weather Alert- ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ | ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಣೆ

ಕುಸಿಯುತ್ತಿರುವ ಅಂತರ್ಜಲ ಮಟ್ಟ

ಇತ್ತೀಚಿನ ವರದಿಗಳ ಪ್ರಕಾರ, ನಿರಂತರವಾಗಿ ಅನಿಯಂತ್ರಿತ ಬೋರ್‌ವೆಲ್ ಕೊರೆಸುವಿಕೆ, ಕೃಷಿಯಲ್ಲದ ಉದ್ದೇಶಗಳಿಗಾಗಿ ಅತಿಯಾದ ನೀರಿನ ಉಪಯೋಗ, ಮತ್ತು ಮಳೆಯ ಕೊರತೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಗಂಭೀರವಾಗಿ ಕುಸಿದಿದೆ.

ಇದರ ಪರಿಣಾಮವಾಗಿ ಕುಡಿಯುವ ನೀರಿನ ಕೊರತೆ, ಕೃಷಿಗೆ ಬೇಕಾದ ನೀರಿನ ಸಮಸ್ಯೆ, ಪರಿಸರ ಮಾಲಿನ್ಯ ಮತ್ತು ಭೂ ಕುಸಿತದ ಅಪಾಯಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ಅಂತರ್ಜಲ ನಿರ್ದೇಶನಾಲಯ ಹಾಗೂ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಇಂತಹ ಕ್ರಮಗಳನ್ನು ಕೈಗೊಂಡಿವೆ.

ಈಗ ಅನ್ವಯವಾಗುವ ನಿಯಮಗಳು ಏನು?

ಬೋರ್‌ವೆಲ್ ಕೊರೆಸಲು ಮುಂಚಿತ ಅನುಮತಿ ಕಡ್ಡಾಯ: ಯಾವುದೇ ಬೋರ್‌ವೆಲ್ ಕೊರೆಸುವ ಮುನ್ನ ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಅನುಮತಿ (NOC -No Objection Certificate) ಪಡೆಯುವುದು ಕಡ್ಡಾಯವಾಗಿದೆ.

ಆಕ್ಯುಪೆನ್ಸಿ ಪ್ರಮಾಣಪತ್ರ ಬೇಕು: ಬೋರ್‌ವೆಲ್ ಕೃಷಿಯ ಹೊರಗಿನ ಉದ್ದೇಶಗಳಿಗಾಗಿ, ಅಂದರೆ ವಸತಿ, ವಾಣಿಜ್ಯ, ಕೈಗಾರಿಕಾ ಉದ್ದೇಶಗಳಿಗೆ ಬೇಕಾದಲ್ಲಿ Occupancy Certificate ಹೊಂದಿರಬೇಕು.

ವಿಫಲಗೊಂಡ ಬೋರ್‌ವೆಲ್ ಮುಚ್ಚುವ ನಿಯಮ: ಕೊರೆಸಿದ ಬೋರ್‌ವೆಲ್ ವಿಫಲವಾದರೆ ಅದನ್ನು 24 ಗಂಟೆಯೊಳಗೆ ಸುರಕ್ಷಿತವಾಗಿ ಮುಚ್ಚಬೇಕು ಹಾಗೂ ಛಾಯಾಚಿತ್ರದೊಂದಿಗೆ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.

ಇನ್ಮುಂದೆ ಬೋರ್‌ವೆಲ್ ಕೊರೆಸಲು ಸರ್ಕಾರದ ಅನುಮತಿ ಕಡ್ಡಾಯ. ಹೊಸ ನಿಯಮಗಳು, ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Borewell Permission Rules and Application Process

E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ

ಅನುಮತಿ ಪಡೆಯಲು ಅಗತ್ಯವಿರುವ ದಾಖಲೆಗಳು

ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:

  • ಕೈ ಬರಹದ ಅರ್ಜಿ ಪತ್ರ
  • ಆಧಾರ್ ಕಾರ್ಡ್ ಪ್ರತಿಗಳು
  • ಸ್ಥಳ ಮಾಲೀಕತ್ವದ ದಾಖಲೆಗಳು
  • ಮೊಬೈಲ್ ನಂಬರ್
  • ಪಾಸ್ಪೋರ್ಟ್ ಗಾತ್ರದ ಫೋಟೋ
ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ತಮ್ಮ ಕ್ಷೇತ್ರದ ತಾಲೂಕು ಮಟ್ಟದ ಅಂತರ್ಜಲ ಅಧಿಕಾರಿ ಕಚೇರಿ ಅಥವಾ ಜಿಲ್ಲಾ ಅಂತರ್ಜಲ ನಿರ್ದೇಶನಾಲಯ ಕಚೇರಿ ಅಥವಾ ರಾಜ್ಯದ ಅಂತರ್ಜಲ ನಿರ್ದೇಶನಾಲಯದ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹಲವು ನಗರಗಳಲ್ಲಿ ಅನ್‌ಲೈನ್ ವ್ಯವಸ್ಥೆ ಕೂಡ ಲಭ್ಯವಿದೆ.

ಬೆಂಗಳೂರು ನಗರದಲ್ಲಿ ಮಾತ್ರ 2019ರಿಂದ ಇಂದಿನ ವರೆಗೆ 205 ಸಂಸ್ಥೆಗಳಿಗೆ ಮಾತ್ರ NOC ನೀಡಲಾಗಿದೆ. ಅನುಮತಿ ಇಲ್ಲದೆ ಬೋರ್‌ವೆಲ್ ಕೊರೆಸಿದ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. 2024-25ರಲ್ಲಿ ಒಟ್ಟು 942 ಹೊಸ ಬೋರ್‌ವೆಲ್‌ಗಳಿಗೆ ಅನುಮತಿ ನೀಡಲಾಗಿದೆ.

Gruhalakshmi Pending Payments- ಇದೇ ತಿಂಗಳಲ್ಲೇ ಮೂರು ಕಂತುಗಳ ‘ಗೃಹಲಕ್ಷ್ಮೀ’ ಹಣ ಜಮೆ | ಸರ್ಕಾರದಿಂದ ಹಂತಹಂತವಾಗಿ ಬಿಡುಗಡೆಗೆ ಸಿದ್ಧತೆ

ಕಾನೂನು ಉಲ್ಲಂಘನೆ ಮಾಡಿದರೆ ಏನಾಗುತ್ತದೆ?

ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸಿದರೆ, ಪ್ರಾಧಿಕಾರವು ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು:

  • ದಂಡ ವಿಧಿಸುವುದು
  • ಬೋರ್‌ವೆಲ್ ಮುಚ್ಚುವ ಸೂಚನೆ
  • ಕಾನೂನು ಪ್ರಕ್ರಿಯೆ ಆರಂಭಿಸಿ ಎಫ್‌ಐಆರ್ ದಾಖಲಿಸುವುದು
  • ನೀರಿನ ಸಂಪರ್ಕವನ್ನೇ ಕಡಿತ ಮಾಡುವ ಸಾಧ್ಯತೆ

ಈ ನಿಯಮಗಳಿಂದಾಗಿ ಭವಿಷ್ಯದ ತೊಂದರೆಗಳನ್ನು ತಪ್ಪಿಸಲು ಸಾರ್ವಜನಿಕರಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ವಿಶೇಷವಾಗಿ ನೂತನ ಗೃಹ ನಿರ್ಮಾಣ ಮಾಡುವವರು ಅಥವಾ ನಿವೇಶನಗಳಲ್ಲಿ ಬೋರ್‌ವೆಲ್ ಹಾಕಿಸಿಕೊಳ್ಳುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಬೋರ್‌ವೆಲ್ ಮುಚ್ಚುವ ಸುರಕ್ಷತಾ ಕ್ರಮಗಳು
  • ಬೋರ್‌ವೆಲ್ ವಿಫಲವಾದರೆ ಶೀಘ್ರ ಮುಚ್ಚಬೇಕು.
  • ಸ್ಥಳವನ್ನು ತಡೆಗೋಡೆಗಳಿಂದ ಬದ್ರಗೊಳಿಸಿ ಮಕ್ಕಳಿಗೆ ಅಪಾಯ ಆಗದಂತೆ ನೋಡಿಕೊಳ್ಳಬೇಕು.
  • ಮುಚ್ಚಿದ ಬೋರ್‌ವೆಲ್‌ಗಳ ಛಾಯಾಚಿತ್ರಗಳನ್ನು ದಾಖಲಾಗಿಸಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.

ಬೋರ್‌ವೆಲ್ ಕೊರೆಸುವ ಮೊದಲು ಅನುಮತಿ ಪಡೆಯುವುದು ಕೇವಲ ಕಾನೂನು ಪಾಲನೆಯಲ್ಲ, ಅದು ಭವಿಷ್ಯದ ನೀರಿನ ಮೂಲಗಳನ್ನು ಸಂರಕ್ಷಿಸುವ ಜವಾಬ್ದಾರಿ ಕೂಡ ಹೌದು. ಸರ್ಕಾರ ಜಾರಿಗೊಳಿಸಿರುವ ಈ ನಿಯಮಗಳನ್ನು ಎಲ್ಲರೂ ಪಾಲಿಸಿದರೆ ಮಾತ್ರ ಸಮತೋಲನ ನೀರಿನ ಹಕ್ಕು ಎಲ್ಲರಿಗೂ ಸಿಗುತ್ತದೆ.

Canara Bank Loan- ಕೆನರಾ ಬ್ಯಾಂಕ್‌ನಲ್ಲಿ ಮೇ 12ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ವಾಹನ ಹಾಗೂ ವೈಯಕ್ತಿಕ ಸಾಲ ಪಡೆಯುವವರಿಗೆ ಸುವರ್ಣಾವಕಾಶ


Spread the love
WhatsApp Group Join Now
Telegram Group Join Now
error: Content is protected !!