30 days validity Recharge Plans : ಟೆಲಿಕಾಂ ಕಂಪನಿಗಳ (Telecom company) ನಡುವೆ ದಿನೇ ದಿನೆ ಪ್ರತಿಸ್ಪರ್ಧೆ, ಬೆಲೆ ಸಮರ ಹೆಚ್ಚಾಗುತ್ತಿದೆ. BSNL ಪುನರ್ ಚೇತರಿಸಿಕೊಂಡ ಮೇಲೆ ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಯೋಜನೆಗಳನ್ನು ಆರಂಭಿಸುತ್ತಿವೆ.
ಈಚೆಗೆ Jio, Airtel, Vi, ಮುಂತಾದ ಕಂಪನಿಗಳು ರೀಚಾರ್ಜ್ ಬೆಲೆ ಏರಿಕೆ ಮಾಡಿದ್ದು; BSNL ಅದೇ ಸಮಯಕ್ಕೆ ಅಗ್ಗದ ರಿಚಾರ್ಜ್ ಯೋಜನೆ ಬಿಡುಗಡೆ ಮಾಡುವ ಮೂಲಕ ಟೆಲಿಕಾಂ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
30 ದಿನ ಮಾನ್ಯತೆಯ ರಿಚಾರ್ಜ್ ಪ್ಲಾನ್‌ಗಳು
ಸಿಮ್ ರೀಚಾರ್ಜ್ ಮಾಡದಿದ್ದರೆ ತಕ್ಷಣ ಹೊರ ಹೋಗುವ ಕರೆಗಳು ಬಂದ್ ಆಗುತ್ತವೆ. ಕ್ರಮೇಣ ಒಳ ಬರುವ ಕರೆಗಳು ಕೂಡ ನಿಲ್ಲುತ್ತವೆ. ಆನಂತರ ಅಂತಿಮವಾಗಿ ಸಿಮ್ ಕಾರ್ಡ್ ಬಂದ್ ಆಗುತ್ತದೆ. ಕೆಲವು ದಿನ ರೀಚಾರ್ಜ್ ಮಾಡದೇ ಇದ್ದರೆ ಹೊಸ ನಂಬರ್ ತೆಗೆದುಕೊಳ್ಳಬೇಕಾಗುತ್ತದೆ.
ಕಡಿಮೆ ಬೆಲೆಯ ರೀಚಾರ್ಜ್ ಹಾಗೂ ಹೆಚ್ಚು ದಿನಗಳ ವ್ಯಾಲಿಡಿಟಿ ಪ್ಲಾನ್‌ಗಳು ಜನರನ್ನು ಆಕರ್ಷಿಸುತ್ತವೆ. ಆಗ ಜನ ಅನಿಯಮಿತವಾಗಿ ರೀಚಾರ್ಜ್ ಮಾಡಿಸುತ್ತಾರೆ. ಸಾಮಾನ್ಯವಾಗಿ ತಿಂಗಳ ರೀಚಾರ್ಜ್ ಪ್ಲಾನ್‌ಗಳು 28 ದಿನಗಳಿಗೇ ಮುಗಿದು ಹೋಗುತ್ತವೆ. ಇದೀಗ ಏರ್‌ಟೆಲ್ 30 ದಿನಗಳ ಮಾನ್ಯತೆಯ ಹೊಸ ಪ್ಲಾನ್’ಗಳನ್ನು ಜಾರಿಗೊಳಿಸಿದೆ.
219 ರೂಪಾಯಿ Airtel ಯೋಜನೆ
30 ದಿನಗಳ ವ್ಯಾಲಿಡಿಟಿ ಹಾಗೂ ಕಡಿಮೆ ಬೆಲೆಯ Airtel ಪ್ಲಾನ್‌ಗಳ ಪೈಕಿ ಮೊದಲನೆಯದು 219 ರೂಪಾಯಿ ಯೋಜನೆ. ಡೇಟಾ ಮತ್ತು ಕರೆಗಳ ಜೊತೆಗೆ ಈ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ:
- 3ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕರೆ, 300 SMS
- 5 ರೂಪಾಯಿ ಟಾಕ್ ಟೈಮ್ ಲಭ್ಯ
- Eytel ಥ್ಯಾಂಕ್ಸ್ ಪ್ರಯೋಜನ ಸಹ ಲಭ್ಯ
- Apollo 24/7 Circle, Wynk Music ಮತ್ತು ಉಚಿತ Hellotunesಗೆ ಪ್ರವೇಶ
355 ರೂಪಾಯಿ Airtel ಯೋಜನೆ
ಏರ್‌ಟೆಲ್‌ನ 30 ದಿನಗಳ ವ್ಯಾಲಿಡಿಟಿಯ ಮತ್ತೊಂದು ಯೋಜನೆ 355 ರೂಪಾಯಿಗೆ ಲಭ್ಯವಿದೆ. ಡೇಟಾ ಮತ್ತು ಅನಿಯಮಿತ ಕರೆಗಳ ಜೊತೆಗೆ ಈ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ:
- ದಿನಕ್ಕೆ 100 SMS, ಸುಮಾರು 25GB ಡೇಟಾ, ಅನಿಯಮಿತ ವಾಯ್ಸ್ ಕರೆಗಳು
- ಅಪೊಲೊ 24/7 ಸರ್ಕಲ್, ವಿಂಕ್ ಮ್ಯೂಸಿಕ್ ಮತ್ತು ಉಚಿತ ಹೆಲೋಟ್ಯೂನ್‌ಗಳಿಗೆ ಹೆಚ್ಚುವರಿ ಪ್ರಯೋಜನ ಸಿಗಲಿದೆ
2 thoughts on “30 ದಿನ ವ್ಯಾಲಿಡಿಟಿ, ಕಮ್ಮಿ ಬೆಲೆಯ ಹೊಸ ರಿಚಾರ್ಜ್ ಪ್ಲಾನ್‌ಗಳು 30 days validity Recharge Plans”