Weather Alert- ಕರ್ನಾಟಕದ 23 ಜಿಲ್ಲೆಗಳಲ್ಲಿ ಭಾರಿ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ

Spread the love

ರಾಜ್ಯದಲ್ಲಿ ಮುಂಗಾರು ಮಳೆಗೂ (Monsoon rain) ಮುನ್ನ ಮುಂಗಾರು ಪೂರ್ವ ಮಳೆಯ (Pre-Monsoon Rain) ಪ್ರಭಾವ ಹೆಚ್ಚಾಗಿದೆ. ಕರ್ನಾಟಕದಲ್ಲಿ ಮಳೆಯ ಪ್ರಭಾವ ಹೆಚ್ಚಾಗಿರುವ ಜಿಲ್ಲೆಗಳ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಈ ವರ್ಷ ಮುಂಗಾರಿಗೆ ಮುಂಚೆಯೇ ಮಳೆಗಾಲದ ಪ್ರಭಾವ ಹೆಚ್ಚಾಗುತ್ತಿದೆ. ಮೇ 17ರಿಂದ ಆರಂಭವಾಗಿ ಮುಂದಿನ ನಾಲ್ಕು ದಿನಗಳ ವರೆಗೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಹವಾಮಾನ ಇಲಾಖೆ 23 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ. ಕಳೆದ ಕೆಲವು ದಿನಗಳಿಂದಲೂ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ.

ಕಳೆದ 24 ಗಂಟೆಗಳಲ್ಲಿ ದಾವಣಗೆರೆ, ವಿಜಯನಗರ, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾರೀ ಮಳೆಯಾಗಿದೆ. ಇತ್ತ ಗದಗ, ಬೀದರ್, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

Borewell Permission- ಇನ್ಮುಂದೆ ಬೋರ್‌ವೆಲ್ ಕೊರೆಸಲು ಅನುಮತಿ ಕಡ್ಡಾಯ | ಅನುಮತಿ ಪಡೆಯೋವುದು ಹೇಗೆ? ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ…

ಭಾರಿ ಮಳೆಯ ಮುನ್ಸೂಚನೆ ಇರುವ ಜಿಲ್ಲೆಗಳು

ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯ ಪ್ರಕಾರ, ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ 23 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ: ಈ ಹಿನ್ನಲೆಯಲ್ಲಿ ಕೆಳಗಿನ ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ:

  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಕೋಲಾರ
  • ಚಿಕ್ಕಬಳ್ಳಾಪುರ
  • ಹಾಸನ
  • ಕೊಡಗು
  • ಬಾಗಲಕೋಟೆ
  • ಬೆಳಗಾವಿ
  • ಬೀದರ್
  • ಧಾರವಾಡ
  • ಗದಗ
  • ಹಾವೇರಿ
  • ವಿಜಯಪುರ
  • ಕಲಬುರಗಿ
  • ಕೊಪ್ಪಳ
  • ರಾಯಚೂರು
  • ಯಾದಗಿರಿ
  • ಚಿತ್ರದುರ್ಗ
  • ದಾವಣಗೆರೆ
  • ಮಂಡ್ಯ
  • ಮೈಸೂರು
  • ತುಮಕೂರು
ರಾಜ್ಯದಲ್ಲಿ ಮುಂಗಾರು ಮಳೆಗೂ ಮುನ್ನ ಮುಂಗಾರು ಪೂರ್ವ ಮಳೆಯ ಪ್ರಭಾವ ಹೆಚ್ಚಾಗಿದೆ. ಕರ್ನಾಟಕದಲ್ಲಿ ಮಳೆಯ ಪ್ರಭಾವ ಹೆಚ್ಚಾಗಿರುವ ಜಿಲ್ಲೆಗಳ ಮಾಹಿತಿ ಇಲ್ಲಿದೆ...
Weather Alert Karnataka Pre-Monsoon Rain

Gruhalakshmi Payment Delay- ಗೃಹಲಕ್ಷ್ಮಿ ಹಣ ಮೇ 20ರ ನಂತರವೇ ಜಮಾ? ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮಹಿಳೆಯರ ಆಕ್ರೋಶ

ಉಳಿದ ಜಿಲ್ಲೆಗಳಲ್ಲಿ ಮಳೆ ಸ್ಥಿತಿ

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇವುಗಳಲ್ಲಿ ಅಪಾಯದ ಮಟ್ಟದ ಮಳೆ ಇಲ್ಲದಿದ್ದರೂ, ಸ್ಥಳೀಯವಾಗಿ ಕೆಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗಬಹುದು.

ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ತೇವಾಂಶ ಹೊಂದಿರುವ ಟರ್ಪ್ ಉಂಟಾಗಿದೆ. ಇದರ ಪರಿಣಾಮವಾಗಿ ಕರಾವಳಿ ಕರ್ನಾಟಕ ಹಾಗೂ ಒಳನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಈ ಪರಿಸ್ಥಿತಿ ಮುಂಗಾರು ಪ್ರವೇಶದ ವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

Digital Hakkupatra Scheme- ಮೇ 20ಕ್ಕೆ ಅನಧಿಕೃತ ಆಸ್ತಿಗಳಿಗೆ ಸರ್ಕಾರದಿಂದ ಒಂದು ಲಕ್ಷ ಹಕ್ಕುಪತ್ರ ವಿತರಣೆ | ಯಾರಿಗೆಲ್ಲ ಸಿಗಲಿದೆ ಪಟ್ಟಾಖಾತೆ?

ಸಾವಿರ ಮಿ.ಮೀ ಮುಂಗಾರು ಮಳೆ ನಿರೀಕ್ಷೆ

ಪ್ರತಿ ವರ್ಷ ಜೂನ್ 1ರಿಂದ ಸೆಪ್ಟೆಂಬರ್ 30ರ ವರೆಗೆ ನೈಋತ್ಯ ಮುಂಗಾರು ಸಕ್ರಿಯವಾಗಿರುತ್ತದೆ. ವಾಡಿಕೆ ಪ್ರಕಾರ ಈ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 852 ಮಿಮೀ ಮಳೆ ಆಗುವುದು ಸಹಜ.

ಆದರೆ ಈ ಬಾರಿಯ ಮುಂಗಾರು ಚುರುಕಾಗಿರುವ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ 1,000 ಮಿ. ಮೀಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಪ್ರದೇಶಾನುಸಾರ ಮುಂಗಾರು ಮಳೆಯ ಅಂದಾಜು ಪ್ರಮಾಣ ಈ ಕೆಳಗಿನಂತಿದೆ:

  • ಕರಾವಳಿ ಪ್ರದೇಶದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚಾಗಿ 3,101 ಮಿ.ಮೀ ಮಳೆ.
  • ಮಲೆನಾಡು ಪ್ರದೇಶ ಭಾಗದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ 1,556 ಮಿ.ಮೀ ಮಳೆ ಸಂಭವ.
  • ದಕ್ಷಿಣ ಒಳನಾಡು ಪ್ರದೇಶಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ 369 ಮಿ.ಮೀ ಮಳೆ ನಿರೀಕ್ಷೆ.
  • ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ಹಾವೇರಿ, ರಾಯಚೂರು ಜಿಲ್ಲೆಗಳಲ್ಲಿ 479 ಮಿ.ಮೀ ಅಥವಾ ಹೆಚ್ಚು ಮಳೆ.

E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ


Spread the love
WhatsApp Group Join Now
Telegram Group Join Now
error: Content is protected !!