KCET 2025 Result- ಕೆಸಿಇಟಿ ಫಲಿತಾಂಶ ಮೇ 21ಕ್ಕೆ ನಿರ್ಧಾರ | ಈ ವಾರದಲ್ಲೇ ರಿಸಲ್ಟ್ ಪ್ರಕಟ

Spread the love

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಸಿಇಟಿ ಫಲಿತಾಂಶ (KCET 2025 Result) ಪ್ರಕಟಣೆ ದಿನಾಂಕ ಕಡೆಗೂ ನಿರ್ಧಾವಾಗಿದೆ. ಈ ವಾರದಲ್ಲೇ ರಿಸಲ್ಟ್ ಪ್ರಕಟವಾಗಲಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025) ಫಲಿತಾಂಶ ಈ ವಾರದಲ್ಲೇ ಯಾವುದೇ ಕ್ಷಣದಲ್ಲಾದರೂ ಪ್ರಕಟವಾಗುವ ಸಾಧ್ಯತೆ ಇದೆ. ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ತಾಂತ್ರಿಕ ವೃತ್ತಿಪರ ಕೋರ್ಸ್’ಗಳ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಸಲಾಗಿತ್ತು.

KEA ಮೂಲಗಳ ಪ್ರಕಾರ, ಫಲಿತಾಂಶವನ್ನು ನಾಳೆ ಮೇ 21ರಂದು ಪ್ರಕಟಿಸುವ ಬಗ್ಗೆ ನಿರ್ಧಾರವಾಗುವುದು. ಕೇರಳ ರಾಜ್ಯ ಪಿಯುಸಿ ಫಲಿತಾಂಶ ಕೂಡ ಇದೇ ದಿನ ಬಿಡುಗಡೆಯಾಗಲಿರುವುದರಿಂದ, ಅದರ ನಂತರ ಸಿಇಟಿ ಫಲಿತಾಂಶ ಘೋಷಣೆಗೆ ಅಂತಿಮ ತೀರ್ಮಾನವಾಗಬಹುದು ಎನ್ನಲಾಗಿದೆ.

Flipkart Scholarship 2025- ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್ 2025: ವಿದ್ಯಾರ್ಥಿಗಳಿಗೆ ₹50,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಫಲಿತಾಂಶ ವಿಳಂಬಕ್ಕೆ ಕಾರಣವೇನು?

ಈ ವರ್ಷದ ಸಿಇಟಿ ಪರೀಕ್ಷೆಯಲ್ಲಿ ಕೇರಳದ 2,000ಕ್ಕೂ ಹೆಚ್ಚು ಗಡಿನಾಡು ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಈ ವಿದ್ಯಾರ್ಥಿಗಳು ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿ ಪ್ರದೇಶಗಳ ಕನ್ನಡ ಮಾತನಾಡುವ ಪ್ರದೇಶಗಳಿಗೆ ಸೇರಿದ್ದರಿಂದ, ಅವರನ್ನು ಗಡಿನಾಡು ಕನ್ನಡಿಗ ಮೀಸಲಾತಿ ಅಡಿಯಲ್ಲಿ ಪರಿಗಣಿಸಲಾಗುತ್ತಿದೆ.

ಈ ವಿದ್ಯಾರ್ಥಿಗಳ ಶ್ರೇಣಿಯನ್ನು ಅಂತಿಮಗೊಳಿಸಲು, KEA ಕೇರಳದ ಪಿಯುಸಿ ಫಲಿತಾಂಶಗಳಿಗಾಗಿ ಕಾಯುತ್ತಿದೆ. ಈ ಫಲಿತಾಂಶದ ಮಾಹಿತಿ ದೊರೆಯುವ ವರೆಗೆ, ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಫಲಿತಾಂಶ ಬಿಡುಗಡೆಗೆ ಸ್ವಲ್ಪ ವಿಳಂಬವಾಗಿದೆ.

ಫಲಿತಾಂಶಗಳ ನಂತರ ಮುಂದೇನು?

ಫಲಿತಾಂಶ ಪ್ರಕಟವಾದ ಬಳಿಕ, KEA ಕೋರ್ಸುವಾರು ಹಾಗೂ ವರ್ಗವಾರು ಮೆರಿಟ್ ಪಟ್ಟಿಗಳನ್ನು ಬಿಡುಗಡೆ ಮಾಡುತ್ತದೆ. ಜೊತೆಗೆ, ಪ್ರತಿ ಕೋರ್ಸ್ಗೆ ಬೇಕಾಗುವ ಕಟ್-ಆಫ್ ಅಂಕಗಳು (Cut-off marks) ಪ್ರಕಟಿಸಲಾಗುತ್ತವೆ. ಈ ಕಟ್‌ಆಫ್‌ಗಳು ಪ್ರತಿ ಕಾಲೇಜಿನಲ್ಲಿ ಪ್ರತ್ಯೇಕ ಕೋರ್ಸಿಗೆ ಅರ್ಹತೆಯನ್ನು ನಿರ್ಧರಿಸುತ್ತವೆ.

ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಜೂನ್ 2025ರಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಕೋರ್ಸ್ ಮತ್ತು ಶ್ರೇಣಿಯನ್ನು ಆಧರಿಸಿ, ಡಾಕ್ಯುಮೆಂಟ್ ವೆರಿಫಿಕೇಶನ್, ಆಯ್ಕೆ ಲಾಕ್ ಮಾಡುವುದು ಹಾಗೂ ಸ್ಥಾನ ವಿತರಣೆ ಹಂತಗಳನ್ನು ಅನುಸರಿಸಬೇಕಾಗುತ್ತದೆ.

KCET 2025 Result Date- ಕೆಸಿಇಟಿ 2025 ಫಲಿತಾಂಶ ಶೀಘ್ರ ಬಿಡುಗಡೆ | ವಿದ್ಯಾರ್ಥಿಗಳಿಗೆ KEA ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

ಫಲಿತಾಂಶ ಪ್ರಕಟಗೊಂಡ ನಂತರದ ಹಂತಗಳು

KCET ಫಲಿತಾಂಶ ಪ್ರಕಟಗೊಂಡ ನಂತರ, ವಿದ್ಯಾರ್ಥಿಗಳು ತಮ್ಮ ಯೋಜನೆಯ ಕೋರ್ಸ್ಗಳಿಗೆ ಸ್ಪರ್ಧೆ ನಡೆಸಲು ಮೆರಿಟ್ ರ‍್ಯಾಂಕಿಂಗ್ (Merit Rank), ಕೌನ್ಸೆಲಿಂಗ್ ಪಟ್ಟಿ ಪ್ರಕಟಣೆ, ಆನ್ಲೈನ್ ಆಯ್ಕೆ ಪ್ರಕ್ರಿಯೆ (Option Entry) ಹಾಗೂ ಡಾಕ್ಯುಮೆಂಟ್ ತಪಾಸಣೆ ಮತ್ತು ಹಾಜರಾತಿ ದೃಢೀಕರಣ ಹಂತಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಈಗಿನಿಂದಲೇ ಸಿದ್ಧಪಡಿಸಿಟ್ಟುಕೊಳ್ಳುವುದು ಉತ್ತಮ.

ಫಲಿತಾಂಶವನ್ನು ಎಲ್ಲೆಲ್ಲಿ ನೋಡಬಹುದು?

ಅಭ್ಯರ್ಥಿಗಳು ತಮ್ಮ ಸಿಇಟಿ 2025 ಫಲಿತಾಂಶವನ್ನು ಕೆಇಎ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಬಹುದು:

ಫಲಿತಾಂಶವನ್ನು ಪರಿಶೀಲಿಸುವ ವಿಧಾನ
  • ಕೆಸಿಇಟಿ ಫಲಿತಾಂಶವನ್ನು ನೋಡಲು KEA ಅಧಿಕೃತ ವೆಬ್‌ಸೈಟ್ https://cetonline.karnataka.gov.in/keaಗೆ ಭೇಟಿ ನೀಡಿ.
  • UGCET 2025 RESULT ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ Register Number ಮತ್ತು Date of Birth ನಮೂದಿಸಿ.
  • Submit ಕ್ಲಿಕ್ ಮಾಡಿದ ಮೇಲೆ, ನಿಮ್ಮ ವೈಯಕ್ತಿಕ ಫಲಿತಾಂಶ ಪ್ರದರ್ಶಿತವಾಗುತ್ತದೆ.
  • ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ

 


Spread the love
WhatsApp Group Join Now
Telegram Group Join Now
error: Content is protected !!