ಮುಂದಿನ 7 ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು; (Karnataka Heavy Rain Alert) ಭಾರತೀಯ ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮುಂದಿನ ಏಳು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೇ 25ರ ವರೆಗೆ ಇರುವ ‘ಕೃತ್ತಿಕಾ ಮಳೆ’ ನಕ್ಷತ್ರ ಈ ಬಾರಿ ಸಾಮಾನ್ಯ ಮಳೆಯಂತಿಲ್ಲ. ವಾಯುಭಾರ ಕುಸಿತ ಹಾಗೂ ಚಂಡಮಾರುತದಿಂದ ಉಂಟಾಗುವ ವಿಶಿಷ್ಟ ಪರಿಸ್ಥಿತಿಯಿಂದ ಇದು ತೀವ್ರ ಸ್ವರೂಪ ಪಡೆದುಕೊಂಡಿದ್ದು; ಮುಂಗಾರು ಮಳೆಗೆ ಸ್ಪರ್ಧೆ ಒಡ್ಡುವಂತಿದೆ.
KCET 2025 Result- ಕೆಸಿಇಟಿ ಫಲಿತಾಂಶ ಮೇ 21ಕ್ಕೆ ನಿರ್ಧಾರ | ಈ ವಾರದಲ್ಲೇ ರಿಸಲ್ಟ್ ಪ್ರಕಟ
ಬೆಂಗಳೂರು ನಗರದಲ್ಲಿ ಮಳೆ ವಿಪತ್ತು
ಮೇ 19ರ ಭಾನುವಾರದ ತಡರಾತ್ರಿಯಿಂದ ಆರಂಭವಾದ ಭಾರೀ ಮಳೆಯು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಮಹಾನಗರವನ್ನು ಸಂಪೂರ್ಣ ಕಂಗಾಲುಗೊಳಿಸಿತು. 132 ಮಿಲಿಮೀಟರ್ ಮಳೆ ದಾಖಲಾಗಿದ್ದು, ಇದು ಕಳೆದ ಒಂದು ದಶಕದ ಗರಿಷ್ಠ ಮಳೆಯಾಗಿದೆ. ಅನೇಕ ಬಡಾವಣೆಗಳು ಜಲಾವೃತವಾಗಿ, ಸಾವುಗಳು ಕೂಡ ಸಂಭವಿಸಿವೆ.
ಮಹದೇವಪುರದಲ್ಲಿ ಖಾಸಗಿ ಕಂಪನಿಯ ಕಾಂಪೌಂಡ್ ಕುಸಿತದಿಂದ ಶಶಿಕಲಾ (35) ಮೃತಪಟ್ಟಿದ್ದಾರೆ. ಎನ್ ಎಸ್ ಪಾಳ್ಯದ ಮಧುವನ ಅಪಾರ್ಟ್ಮೆಂಟ್‌ನಲ್ಲಿ ಮಳೆ ನೀರು ಸ್ವಚ್ಛಗೊಳಿಸುವ ವೇಳೆ ಮನಮೋಹನ್ ಕಾಮತ್ ಹಾಗೂ ನೇಪಾಳ ಮೂಲದ ದಿನೇಶ್ ಎಂಬ ಬಾಲಕ ವಿದ್ಯುತ್ ಶಾಕ್‌ಗೆ ಒಳಗಾಗಿ ಸಾವಿಗೀಡಾಗಿದ್ದಾರೆ.

ಮೇ 21ರಿಂದ ಚಂಡಮಾರುತದ ಅಬ್ಬರ
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೇ 21ರ ನಂತರ ಇದು ಚಂಡಮಾರುತಕ್ಕೆ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಚಂಡಮಾರುತದ ಪರಿಣಾಮವಾಗಿ ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ.
Weather Alert- ಕರ್ನಾಟಕದ 23 ಜಿಲ್ಲೆಗಳಲ್ಲಿ ಭಾರಿ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ
ಜಿಲ್ಲೆವಾರು ಮಳೆ ಅಲರ್ಟ್’ಗಳ ವಿವರ
ಭಾರತೀಯ ಹವಾಮಾನ ಇಲಾಖೆ ನಿಖರವಾಗಿ ಜಿಲ್ಲಾವಾರು ಮಳೆ ಮುನ್ಸೂಚನೆ ನೀಡಿದ್ದು, ಅದರ ವಿವರ ಈ ಕೆಳಗಿನಂತಿದೆ:
- ರೆಡ್ ಅಲರ್ಟ್ (ಅತ್ಯಧಿಕ ಮಳೆ): ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ
- ಆರೆಂಜ್ ಅಲರ್ಟ್ (ಭಾರೀ ಮಳೆಯ ಮುನ್ಸೂಚನೆ): ಧಾರವಾಡ, ಹಾವೇರಿ, ಕೊಡಗು, ಹಾಸನ, ಚಿತ್ರದುರ್ಗ, ದಾವಣಗೆರೆ
- ಯೆಲ್ಲೋ ಅಲರ್ಟ್ (ಮಧ್ಯಮ ಮಳೆ): ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಗದಗ, ಕೊಪ್ಪಳ, ವಿಜಯಪುರ
ಹಠಾತ್ ಕುಸಿದ ತಾಪಮಾನ
ಉತ್ತರ ಕರ್ನಾಟಕ ಭಾಗಗಳಲ್ಲಿ ಸಾಮಾನ್ಯವಾಗಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿತ್ತು. ಆದರೆ ಮಳೆಯ ಪರಿಣಾಮದಿಂದಾಗಿ ಈಗ ಅದು 32-34 ಡಿಗ್ರಿ ಸೆಲ್ಸಿಯಸ್ ಇಳಿದಿದೆ.
ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಒಳಗೆ ಇಳಿದಿದೆ. ಈ ತಾಪಮಾನ ಬದಲಾವಣೆಯಿಂದ ಗಾಳಿ ತೇವಾಂಶ ಹೆಚ್ಚಿದ್ದು, ಅನಾರೋಗ್ಯ ಸಮಸ್ಯೆಗಳ ಸಾಧ್ಯತೆ ಕೂಡ ಇದೆ.
ಈಗಾಗಲೇ ಮಳೆಯ ಪ್ರಭಾವದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು; ಮುಂದಿನ 7 ದಿನಗಳ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಎಲ್ಲರಿಗೂ ಗಂಭೀರ ಎಚ್ಚರಿಕೆಯಾಗಿರಬೇಕು. ಚಂಡಮಾರುತದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ, ವಿದ್ಯುತ್ ಸಂಬಂಧಿತ ಅಪಾಯಗಳು, ರಸ್ತೆ ಸಂಚಾರದ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ!
E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ