
ಬೆಲೆ ಏರಿಕೆಯ ನಡುವೆಯೇ ಇಲ್ಲಿ ಗೌರಿ-ಗಣೇಶ ಹಬ್ಬದ ನಿಮಿತ್ತ ಭಾರೀ ಇರಿಯಾಯ್ತಿ ಬೆಲೆಯಲ್ಲಿ (Dmart Half Price Offers) ಅಗತ್ಯ ವಸ್ತುಗಳು ಮಾರಾಟವಾಗುತ್ತಿವೆ. ಈ ಕುರಿತ ಮಾಹಿತಿ ಇಲ್ಲಿದೆ…
ಸಾಮಾನ್ಯವಾಗಿ ಹಬ್ಬಗಳು ಬಂದರೆ ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲು ಆಗುವುದುಂಟು. ಪ್ರತೀ ಹಬ್ಬಕ್ಕೂ ದಿನಸಿ, ಹೂವು, ಹಣ್ಣು, ಸಿಹಿ ತಿಂಡಿಗಳ ಬೆಲೆ ಗಗನಕ್ಕೆ ಏರುವುದು ಸರ್ವೇ ಸಾಮಾನ್ಯ. ಆದರೆ ಈ ವರ್ಷ ಇಲ್ಲಿ ಬಹುತೇಕ ವಸ್ತುಗಳು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಹೌದು, ಡಿಮಾರ್ಟ್ ಸಂಸ್ಥೆ ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಲ್ಲಿ ಹಬ್ಬದ ಪ್ರಯುಕ್ತ ಅರ್ಧಕ್ಕಿಂತ ಕಡಿಮೆ ಬೆಲೆಗೆ ಅಗತ್ಯ ವಸ್ತುಗಳು ಮಾರಾಟ ಮಾಡಲಾಗುತ್ತಿವೆ. ಗ್ರಾಹಕರು ಡಿಮಾರ್ಟ್ (Dmart) ಮಳಿಗೆಗಳಲ್ಲಿ ಅತ್ಯಂತ ರಿಯಾಯ್ತಿ ಬೆಲೆಯಲ್ಲಿ ಮನೆ ಬಳಕೆ ವಸ್ತುಗಳನ್ನು ಖರೀದಿಸಬಹುದು.
ಇದನ್ನೂ ಓದಿ: Gruhalakshmi Payment Stopped- 2.13 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ | ಮಹಿಳಾ ಸಚಿವರ ಮಹತ್ವದ ಮಾಹಿತಿ
ಅರ್ಧಕ್ಕಿಂತ ಕಡಿಮೆ ಬೆಲೆ ಆಫರ್
ಗಣೇಶ ಚತುರ್ಥಿ ನಿಮಿತ್ತ ಡಿಮಾರ್ಟ್ ತನ್ನ ಗ್ರಾಹಕರಿಗೆ ‘ಅರ್ಧಕ್ಕಿಂತ ಕಡಿಮೆ ಬೆಲೆ’ ಎಂಬ ಆಫರ್ ಘೋಷಿಸಿದೆ. ಹಬ್ಬ ಹಾಗೂ ವಾರಾಂತ್ಯದಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಇದೊಂದು ಭರ್ಜರಿ ಅವಕಾಶವಾಗಿದೆ.
ದಿನ ಬಳಕೆ ವಸ್ತುಗಳು, ಅಡುಗೆ ಪಾತ್ರೆಗಳು, ಬಿಸ್ಕತ್ತು, ಬೆಳೆ, ಚಾಕೊಲೇಟ್, ಪಾತ್ರೆ, ಕುಕ್ಕರ್ ಸೇರಿದಂತೆ ಬಹಳಷ್ಟು ವಸ್ತುಗಳು ಇಲ್ಲಿ ಅರ್ಧ ಹಾಗೂ ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿವೆ.

ಇದನ್ನೂ ಓದಿ: Gowri Ganesha Festival Rain Alert- ಗೌರಿ-ಗಣೇಶ ಹಬ್ಬದ ನಂತರ ಮಳೆ ಹೆಚ್ಚಳ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…
ಯಾವುದಕ್ಕೆ ಏನೇನು ಆಫರ್?
ಕಿಲೋ ತೊಗರಿಬೆಳೆ ಸದ್ಯದ ಬೆಲೆ 365 ರೂ. ಇದ್ದು ಇಲ್ಲಿ ಕೇವಲ 182 ರೂ.ಗೆ ಸಿಗುತ್ತಿದೆ. 120 ರೂ.ಗೆ ಸಿಗುವ ಬ್ರಿಟಾನಿಯಾ ಜಿಮ್ ಜಾಮ್ ಪಾಪ್ಸ್ ಬಿಸ್ಕತ್ತು ಕೇವಲ 60 ರೂ.ಗೆ ದೊರೆಯುತ್ತಿದೆ. 460 ರೂ. ಬೆಲೆಯ ಬ್ರಿಟಾನಿಯಾ ಚೀಸ್ ಪ್ಯಾಕ್ ರೂ.230ಕ್ಕೆ ಲಭ್ಯ.
ರೂ. 225 ಬೆಲೆಯ ಫ್ರೆಶ್ ಟಾಯ್ಲೆಟ್ ಕ್ಲೀನರ್ 112 ರೂ., 199 ಬೆಲೆಯ ಎಪಿಎಸ್ ಕ್ಲಾಸಿಕ್ ಖರ್ಜೂರ 99 ರೂ., 150 ರೂ. ಸಫೋಲಾ ಮೀಲ್ ಮೇಕರ್ ಕೇವಲ 75 ರೂ., ಹಾಗೂ ರೂ. 180ರ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಬೌರ್ಬನ್ ಬಿಸ್ಕತ್ತು ಬರೀ ರೂ.83ಕ್ಕೆ ಸಿಗುತ್ತಿದೆ.
ಬರೋಬ್ಬರಿ 4,851 ರೂ.ಗೆ ಮಾರಾಟವಾಗುವ ಐದೂವರೆ ಲೀಟರ್ Butterfly ಸ್ಟೀಲ್ ಕುಕ್ಕರ್ ಇಲ್ಲಿ ಕೇವಲ 1,949 ರೂ. ದೊರೆಯುತ್ತಿದೆ. ಹೀಗೆ ಬಹುತೇಕ ವಸ್ತು, ಸಾಮಗ್ರಿಗಳು ಡೀಮಾರ್ಟ್’ನಲ್ಲಿ ಭಾರೀ ರಿಯಾಯ್ತಿ ಬೆಲೆಯಲ್ಲಿ ಮಾರಾಟವಾಗುತ್ತಿವೆ.