Daughter Property Rights- ತಂದೆಯ ಈ ಆಸ್ತಿಗಳ ಮೇಲೆ ಮಗಳಿಗೆ ಹಕ್ಕಿಲ್ಲ | ಎಲ್ಲ ಮಹಿಳೆಯರೂ ತಿಳಿದಿರಲೇಬೇಕಾದ ಕಾನೂನು ಮಾಹಿತಿ

Spread the love

ತಂದೆಯ ಎಲ್ಲಾ ಆಸ್ತಿಗೂ ಮಗಳು (Daughter Property Rights) ಹಕ್ಕುದಾರಳು. ಆದರೆ, ಕೆಲವು ಸ್ವತ್ತುಗಳಲ್ಲಿ ಆಕೆಗೆ ಯಾವುದೇ ಹಕ್ಕಿಲ್ಲ. ಹಾಗಿದ್ದರೆ, ಯಾವೆಲ್ಲ ಆಸ್ತಿಗಳಿಗೆ ಮಗಳಿಗೆ ಹಕ್ಕಿಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಭಾರತದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕುಗಳ ಬಗ್ಗೆ ಇಂದಿಗೂ ಸ್ಪಷ್ಟ ಅರಿವು ಇಲ್ಲದ ಹಲವರು ಬೇರೆಯವರ ನಿರ್ಧಾರಕ್ಕೆ ಒಳಪಡುತ್ತಿದ್ದಾರೆ. ‘ಹೆಣ್ಣು ಮಕ್ಕಳು ಬೇರೆ ಮನೆಗೆ ಹೋಗುವವರು. ಮದುವೆ ಮಾಡಿಕೊಟ್ಟರೆ ಸಾಕು’ ಎಂಬ ಅನಾರೋಗ್ಯಕರ ಮನೋಭಾವನೆ ಇನ್ನೂ ಕೆಲವಡೆ ಸಾಮಾನ್ಯವಾಗಿದೆ.

ಆದರೆ, 2005ರಲ್ಲಿ ಜಾರಿಗೆ ಬಂದ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ ಈ ನಂಬಿಕೆಗೆ ಅಂತ್ಯ ಹಾಕಿದೆ. ಹಾಗಂತ ತಂದೆಯ ಎಲ್ಲಾ ಆಸ್ತಿಗಳ ಮೇಲೂ ಮಗಳು ಹಕ್ಕುದಾರಳಲ್ಲ. ಹೆಣ್ಣು ಮಕ್ಕಳಿಗೆ ಯಾವೆಲ್ಲ ಆಸ್ತಿಗಳ ಮೇಲೆ ಹಕ್ಕಿದೆ? ಮತ್ತು ಯಾವೆಲ್ಲ ಆಸ್ತಿಗಳ ಮೇಲೆ ಹಕ್ಕಿಲ್ಲ? ಎಂಬುವುದನ್ನು ಇಲ್ಲಿ ತಿಳಿಯೋಣ…

Panchamitra Whatsapp- ‘ವಾಟ್ಸಾಪ್’ನಲ್ಲೇ ಗ್ರಾಮ ಪಂಚಾಯತ್ ಸೇವೆಗಳು | ಈ ನಂಬರ್‌ಗೆ ಹಾಯ್ ಅಂತ ಕಳಿಸಿದರೆ ಕುಳಿತಲ್ಲೇ ಪರಿಹಾರ

ಹೆಣ್ಣುಮಕ್ಕಳಿಗೆ ನೀಡಲಾದ ಹಕ್ಕುಗಳು

ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಮೂಲದಂತೆ ಪುತ್ರನಿಗೆ ನೀಡಲಾಗುತ್ತಿದ್ದ ಆಸ್ತಿ ಹಕ್ಕುಗಳು ಮಾತ್ರ ಇದ್ದವು. ಆದರೆ 2005ರ ತಿದ್ದುಪಡಿಯಿಂದ:

  • ಮಗಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಸಿಕ್ಕಿದೆ.
  • ಅವಳು ಸಹ ಪಿತೃ ಕುಟುಂಬದ ಸಹವಾರಸುದಾರ (coparcener) ಆಗಿದ್ದು, ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಹೊಂದಿದ್ದಾಳೆ.
  • ಅವಳಿಗೆ ಸಂಪೂರ್ಣ ಮಾಲೀಕತ್ವ (ownership) ಕೂಡ ಇರಲಿದೆ.
  • ಆಕೆ ಆ ಆಸ್ತಿಯನ್ನು ಮಾರಬಹುದು, ಬಾಡಿಗೆಗೆ ಕೊಡಬಹುದು ಅಥವಾ ವಿಲ್ ಬರೆದು ನೀಡಬಹುದು.

Karnataka Heavy Rain Alert- ಮುಂದಿನ 7 ದಿನ ಕರ್ನಾಟಕದಲ್ಲಿ ಭಾರಿ ಮಳೆಯ ಅಬ್ಬರ | ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ

ತಂದೆಯ ಎಲ್ಲಾ ಆಸ್ತಿಗೂ ಮಗಳು ಹಕ್ಕುದಾರಳು. ಆದರೆ, ಕೆಲವು ಸ್ವತ್ತುಗಳಲ್ಲಿ ಯಾವುದೇ ಹಕ್ಕಿಲ್ಲ. ಯಾವೆಲ್ಲ ಆಸ್ತಿಗಳಿಗೆ ಮಗಳಿಗೆ ಹಕ್ಕಿಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ...
Daughter Property Rights India Assets No Legal Claim
ಈ ಆಸ್ತಿಗಳ ಮೇಲೆ ಮಗಳಿಗೆ ಹಕ್ಕಿಲ್ಲ!

ಪಿತ್ರಾರ್ಜಿವಾಗಿ ತಂದೆಗೆ ಬಂದ ಎಲ್ಲಾ ಆಸ್ತಿಗೂ ಮಗಳು ಹಕ್ಕುದಾರಳು. ಆದರೆ, ಕೆಲವು ವಿಶೇಷ ಸ್ವತ್ತುಗಳಲ್ಲಿ ಆಕೆಗೆ ಯಾವುದೇ ಹಕ್ಕಿಲ್ಲ. ಹಾಗಿದ್ದರೆ, ಯಾವೆಲ್ಲ ಆಸ್ತಿಗಳಿಗೆ ಮಗಳಿಗೆ ಹಕ್ಕಿಲ್ಲ? ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ…

1. ಸ್ವಂತ ಸಂಪಾದಿತ ಆಸ್ತಿ (Self-acquired Property)

ತಂದೆಯು ತನ್ನ ಆದಾಯದಿಂದ ಖರೀದಿಸಿದ ಆಸ್ತಿ ಪೂರ್ವಜರ ಆಸ್ತಿಯಲ್ಲ. ಈ ಆಸ್ತಿಯ ಮೇಲೆ ಮಗಳಿಗೆ ಹಕ್ಕಿಲ್ಲ, ಏಕೆಂದರೆ ಅದು ಪಿತೃಪಾರುಂಪರ್ಯವಲ್ಲ. ತಂದೆ ತನ್ನ ಇಚ್ಛೆಯಂತೆ ಆ ಆಸ್ತಿಯನ್ನು ಮಾರಬಹುದು, ಉಡುಗೊರೆ ನೀಡಬಹುದು ಅಥವಾ ಯಾರಿಗಾದರೂ ವಿಲ್ ಮಾಡಬಹುದು. ತಂದೆ ತನ್ನ ಸ್ವಂತ ಆಸ್ತಿಯನ್ನು ಮಗಳಿಗೆ ವಿಲ್ ಮೂಲಕ ಬರೆದು ಕೊಟ್ಟರೆ ಮಾತ್ರ ಆಕೆಗೆ ಆಸ್ತಿ ಸಿಗುತ್ತದೆ.

2. 2005ರ ಮೊದಲು ನಡೆದ ಆಸ್ತಿ ವಿಭಜನೆ

ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನಾಂಕ: ಸೆಪ್ಟೆಂಬರ್ 9, 2005 ಇದಕ್ಕಿಂತ ಮೊದಲು ಕಾನೂನುಬದ್ಧವಾಗಿ (ನೋಂದಾಯಿತ) ವಿಭಜನೆಯಾಗಿದ್ದ ಆಸ್ತಿಯಲ್ಲಿ ಮಗಳಿಗೆ ಹಕ್ಕು ಇಲ್ಲ. ಅನ್ಯಾಯವಾದ ಅಥವಾ ಮೋಸದ ವಿಭಜನೆಯಾದಲ್ಲಿ, ಮಗಳು ಕೋರ್ಟ್ನಲ್ಲಿ ಪ್ರಶ್ನಿಸಬಹುದು.

Free Hostel Admission- ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

3. ಉಡುಗೊರೆಯಾಗಿ (Gift Deed) ನೀಡಿದ ಆಸ್ತಿ

ಪಿತೃಪಾರಂಪರ್ಯ ಆಸ್ತಿಯನ್ನು ತಂದೆ ಅಥವಾ ಪೂರ್ವಜರು ಯಾರಿಗಾದರೂ ಉಡುಗೊರೆಯಾಗಿ (ಭಕ್ಷಿಸು) ನೀಡಿದ್ದರೆ, ಕಾನೂನುಬದ್ಧವಾಗಿ ನೋಂದಾಯಿಸಿದಿದ್ದರೆ, ಮಗಳಿಗೆ ಆ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ. ಆದರೆ, ಇದು ಅಕ್ರಮ ಉಡುಗೊರೆ ಪತ್ರ ಅಥವಾ ಅಸಾಕ್ಷ್ಯ ಉಡುಗೊರೆ ಆಗಿದ್ದರೆ, ಕೋರ್ಟ್ಗಳಲ್ಲಿ ಪ್ರಶ್ನಿಸಬಹುದು.

4. ಸ್ವಯಂಪ್ರೇರಿತ ನಿರಾಕರಣೆ (Voluntary Relinquishment)

ಮಗಳು ತನ್ನ ತವರಿನ ಬಳಗದೊಂದಿಗೆ ಚೆನ್ನಾಗಿರುವ ಸಂದರ್ಭದಲ್ಲಿ ಹಣ ಅಥವಾ ಇತರ ಆಸ್ತಿಗೆ ಬದಲಾಗಿ ತನ್ನ ಹಕ್ಕನ್ನು ಬಿಟ್ಟುಕೊಟ್ಟಿದ್ದರೆ ಅಥವಾ ಒತ್ತಡವಿಲ್ಲದೆ ತಾನಾಗಿ ಹಕ್ಕು ಬಿಟ್ಟಿದ್ದರೆ, ಆಕೆಗೆ ಭವಿಷ್ಯದಲ್ಲಿ ಆ ಆಸ್ತಿ ಮೇಲೆ ಹಕ್ಕು ಇರದು. ಆದರೆ, ಒತ್ತಡ, ಮೋಸ ಅಥವಾ ತಪ್ಪು ಮಾಹಿತಿಯಿಂದ ಸಹಿ ಹಾಕಿದರೆ, ಆಕೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

5. ವಿಲ್ (Will) ಮೂಲಕ ಹೊರಗಿಡುವುದು

ಅದೇ ರೀತಿ ತಂದೆ ಕಾನೂನುಬದ್ಧವಾಗಿ ವಿಲ್ ಬರೆದು ಮಗಳನ್ನು ಆಸ್ತಿಯಿಂದ ಹೊರಗಿಟ್ಟರೆ, ಆಕೆಗೆ ಹಕ್ಕಿಲ್ಲ. ವಿಲ್‌ನಲ್ಲಿ ಹೆಣ್ಣಿನ ಹೆಸರೇ ಇಲ್ಲದಿದ್ದರೂ ಅದು ಮಾನ್ಯ. ಆದರೆ, ವಿಲ್ ಮೋಸದ ಆಗಿದ್ದು ಸಾಬೀತಾದರೆ, ಆಕೆಗೆ ಸವಾಲು ನೀಡುವ ಅವಕಾಶ ಇದೆ.

ಮಹಿಳೆಯರೆ, ನಿಮ್ಮ ಹಕ್ಕುಗಳ ಅರಿವು ನಿಮ್ಮ ಶಕ್ತಿ. ತಂದೆಯ ಆಸ್ತಿ ನಿಮ್ಮ ಹಕ್ಕಾದರೆ, ಅದನ್ನು ನಿರಾಕರಿಸಬೇಡಿ. ಸಮಾಜದಲ್ಲಿ ಸಮಾನತೆ ಉಂಟಾಗಬೇಕೆಂದರೆ, ನಾವು ಮೊದಲಿಗೆ ನಮ್ಮ ಮನೆಗಳಲ್ಲಿ ಸಮಾನತೆಗೆ ಕೈ ಜೋಡಿಸಬೇಕು. ಆಸ್ತಿಯ ವಿಷಯದಲ್ಲಿ ಹೆಣ್ಣುಮಕ್ಕಳನ್ನು ಸಮಮಟ್ಟಕ್ಕೆ ತರುವ ಜವಾಬ್ದಾರಿ ಪ್ರತಿ ಕುಟುಂಬಕ್ಕೂ ಇದೆ.

Women Loan Subsidy- ಮಹಿಳೆಯರಿಗಾಗಿಯೇ ಇರುವ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು


Spread the love
WhatsApp Group Join Now
Telegram Group Join Now
error: Content is protected !!