8th Pay Commission- ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಏರಿಕೆ | ಶೇ.30-34ರಷ್ಟು ವೇತನ ಹೆಚ್ಚಳ | ಯಾರಿಗೆಲ್ಲ ಪ್ರಯೋಜನ? ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಸರ್ಕಾರ 8ನೇ ವೇತನ ಆಯೋಗ (8th Pay Commission) ರಚನೆಗೆ ಭರದ ಸಿದ್ಧತೆ ನಡೆಸಿದೆ. ಇದರಿಂದ ಸರ್ಕಾರಿ ನೌಕರರ ಸಂಬಳ ಮತ್ತು ನಿವೃತ್ತ ಉದ್ಯೋಗಿಗಳ ಪಿಂಚಣಿಯಲ್ಲಿ ಭಾರೀ ಏರಿಕೆಯಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಸರ್ಕಾರಿ ನೌಕರರು ಮತ್ತು ನಿವೃತ್ತ ಉದ್ಯೋಗಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಪ್ರಸ್ತುತ ವರ್ಷದಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು ರಚಿಸುವುದಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಅದರ ಶಿಫಾರಸುಗಳಿಂದಾಗಿ ನೌಕರರ ಸಂಬಳ, ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳಲ್ಲಿ ಶೇ. 30ರಿಂದ 34ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

8ನೇ ವೇತನ ಆಯೋಗವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದರೂ, ಅದರ ಟರ್ಮ್ಸ್ ಆಫ್ ರೆಫರೆನ್ಸ್ (ToR) ಅನ್ನು ಇನ್ನೂ ಅಂತಿಮಗೊಳಿಸಿಲ್ಲ. ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯೂ ಬಾಕಿಯಿದೆ. ಆದರೂ ಕೂಡ ಈ ಆಯೋಗದಿಂದ ನೌಕರರಿಗೆ ಲಾಭವಾಗುವ ನಿರೀಕ್ಷೆಯಿಂದ ಸರ್ಕಾರಿ ವಲಯದಲ್ಲಿ ಅಪಾರ ಕುತೂಹಲವಿದೆ.

SSLC Exam New Rules- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇನ್ನು ಭಾರೀ ಸುಲಭ | 2026ರಿಂದ ಹೊಸ ನಿಯಮ ಜಾರಿ | ಇಲ್ಲಿದೆ ಸಂಪೂರ್ಣ ಮಾಹಿತಿ…

ಎಷ್ಟು ಉದ್ಯೋಗಿಗಳಿಗೆ ಲಾಭವಾಗಲಿದೆ?

ಈ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ, 44 ಲಕ್ಷ ಸರ್ಕಾರಿ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರು ಸೇರಿ ಸುಮಾರು 1.10 ಕೋಟಿ ಸರ್ಕಾರಿ ನೌಕರರಿಗೆ ನೇರವಾಗಿ ಲಾಭವಾಗಲಿದೆ. ಅವರ ವೇತನ, ಭತ್ಯೆ ಮತ್ತು ನಿವೃತ್ತಿ ಅನುಕೂಲಗಳು ನವೀಕರಿಸಲಾಗುತ್ತವೆ.

ಇದರಿಂದ, ನೌಕರರ ವಾರ್ಷಿಕ ಆದಾಯ ಶೇ. 30-34ರಷ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದೆ. ಈ ಶಿಫಾರಸುಗಳು ಜಾರಿಗೆ ಬಂದರೆ, ಕೇಂದ್ರ ಸರ್ಕಾರದ ವಾರ್ಷಿಕ ವೆಚ್ಚದಲ್ಲಿ ₹1.3 ರಿಂದ ₹1.8 ಲಕ್ಷ ಕೋಟಿ ವರೆಗೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು Ambit Capitalನ ವಿಶ್ಲೇಷಣಾತ್ಮಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Pradhan Mantri Awas Yojana- ಪ್ರಧಾನ ಮಂತ್ರಿ ಆವಾಸ್ ಯೋಜನೆ ₹2.50 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ | ಮನೆ ನಿರ್ಮಾಣಕ್ಕೆ ಸರ್ಕಾರದ ನೆರವು

ಸರ್ಕಾರ 8ನೇ ವೇತನ ಆಯೋಗ ರಚನೆಗೆ ಸಿದ್ಧತೆ ನಡೆಸಿದೆ. ಇದರಿಂದ ಸರ್ಕಾರಿ ನೌಕರರ ಸಂಬಳ ಮತ್ತು ನಿವೃತ್ತ ಉದ್ಯೋಗಿಗಳ ಪಿಂಚಣಿಯಲ್ಲಿ ಭಾರೀ ಏರಿಕೆಯಾಗಲಿದೆ....
8th Pay Commission Salary Hike Kannada 2025
ಯಾವಾಗ ವೇತನ ಪರಿಷ್ಕರಣೆ ಆಗಲಿದೆ?

ಸದರಿ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರುವವರೆಗೆ ಕನಿಷ್ಠ 18 ರಿಂದ 24 ತಿಂಗಳುಗಳು ಬೇಕಾಗುತ್ತವೆ. 7ನೇ ವೇತನ ಆಯೋಗ ಜಾರಿಗೆ ಬರಲು ಸುಮಾರು 2 ವರ್ಷಗಳು ಹಿಡಿದಿದ್ದವು. ಇದರಿಂದಾಗಿ, 8ನೇ ಆಯೋಗದ ಶಿಫಾರಸುಗಳು 2026 ಅಥವಾ 2027ರೊಳಗೆ ಜಾರಿಗೆ ಬರಬಹುದು ಎನ್ನಲಾಗುತ್ತಿದೆ.

ವೇತನ ಪರಿಷ್ಕರಣೆ ಮಾಡುವಾಗ ಮುಖ್ಯ ಅಂಶವಾಗಿರುವುದೇ ಫಿಟ್‌ಮೆಂಟ್ ಫ್ಯಾಕ್ಟರ್ (Fitment Factor). 7ನೇ ವೇತನ ಆಯೋಗ 2.57 ಫ್ಯಾಕ್ಟರ್ ಶಿಫಾರಸು ಮಾಡಿತ್ತು. ಇದರಿಂದ ಕನಿಷ್ಠ ವೇತನ ₹7,000 ರಿಂದ ₹18,000ಕ್ಕೆ ಏರಿಕೆಯಾಗಿತ್ತು.

ಈ ಬಾರಿ ಫಿಟ್‌ಮೆಂಟ್ ಫ್ಯಾಕ್ಟರ್ 2.57 ರಿಂದ 2.86ರ ವರೆಗೆ ಇರಬಹುದು ಎಂದು ಹೇಳಲಾಗಿದೆ. ಆದರೆ ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಿದರೂ, ಎಲ್ಲಾ ಭತ್ಯೆಗಳು ಒಂದೇ ಮಟ್ಟದಲ್ಲಿ ಏರಿಕೆಯಾಗುತ್ತವೆ ಎಂದಲ್ಲ. ಇದು ಮುಖ್ಯವಾಗಿ ಮೂಲ ವೇತನದ ಮೇಲೆ ಪರಿಣಾಮ ಬೀರುತ್ತದೆ.

Solar Electricity Subsidy- ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ತುಟ್ಟಿಭತ್ಯೆ ಮರು ಲೆಕ್ಕಾಚಾರ

ವೇತನ ಆಯೋಗ ಜಾರಿಯಾದ ಬಳಿಕ, ತುಟ್ಟಿಭತ್ಯೆ (Dearness Allowance – DA) ಶೂನ್ಯಕ್ಕೆ ಇಳಿಯುತ್ತದೆ. ಉದಾಹರಣೆಗೆ 6ನೇ ವೇತನ ಆಯೋಗದಲ್ಲಿ ₹7,000 ಮೂಲ ವೇತನ ಇದ್ದವರಿಗೆ ಡಿಎ ಸೇರಿ ₹15,750 ಸಂಬಳ ಸಿಗುತ್ತಿತ್ತು.

ಆದರೆ 7ನೇ ವೇತನ ಆಯೋಗದ ಜಾರಿಗೆ ಬಳಿಕ ಡಿಎ ಶೂನ್ಯವಾಗಿ ₹18,000 ಹೊಸ ಮೂಲ ವೇತನ ನೀಡಲಾಯಿತು. ಇದೇ ರೀತಿ, 8ನೇ ವೇತನ ಆಯೋಗ ಜಾರಿಯಾದ ನಂತರ ಡಿಎ ಶೂನ್ಯದಿಂದ ಪುನಃ ಪ್ರಾರಂಭವಾಗಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ.

ದೇಶದ ಆರ್ಥಿಕತೆಗೆ ಬಲ

8ನೇ ವೇತನ ಆಯೋಗದ ಶಿಫಾರಸುಗಳು ನೌಕರರ ಜೀವನಮಟ್ಟ ಸುಧಾರಣೆಗೆ ಒತ್ತುವರಿ ನೀಡುವಂತಿದ್ದು, ವೇತನ, ಪಿಂಚಣಿ ಮತ್ತು ನಿವೃತ್ತಿ ಲಾಭಗಳಲ್ಲಿ ಸರಾಸರಿ ಶೇ. 30-34ರಷ್ಟು ಏರಿಕೆ ಸಾಧ್ಯ. ಇದರಿಂದ ವ್ಯಕ್ತಿಗತ ಹಣಕಾಸು ಏರಿಕೆಯಾಗುವುದರ ಜೊತೆಗೆ, ದೇಶದ ಆರ್ಥಿಕತೆಗೆ ಸಹ ಬಲವಾದ ಪ್ರಭಾವ ಬೀರುವ ಸಾಧ್ಯತೆ ಇದೆ.

ಆದರೆ, ಈ ಶಿಫಾರಸುಗಳು ಜಾರಿಗೆ ಬರಲು ಇನ್ನೂ ಕೆಲವು ಸಮಯ ಬೇಕು. ಅಧಿಕಾರಿಗಳ ನೇಮಕಾತಿ, ಆಯೋಗದ ಸಭೆಗಳು, ವರದಿ ತಯಾರಿಕೆ ಮತ್ತು ಸರ್ಕಾರದ ಅನುಮೋದನೆ ಮುಂತಾದ ಹಂತಗಳನ್ನು ದಾಟಬೇಕಿದೆ.

CET Seat Allotment Option Entry- ಸಿಇಟಿ 2025: ಮೊದಲ ಸುತ್ತಿನ ಸೀಟು ಹಂಚಿಕೆ ಆರಂಭ | ಜುಲೈ 15ರ ವರೆಗೆ ಆಪ್ಷನ್ ಎಂಟ್ರಿಗೆ ಅವಕಾಶ | ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!